ಸೋಮವಾರದಿಂದ ಶಿವಮೊಗ್ಗದಲ್ಲಿ ಸಂಪೂರ್ಣ ಲಾಕ್ ಡೌನ್: ಸಚಿವ ಕೆ.ಎಸ್.ಈಶ್ವರಪ್ಪ 

ಶಿವಮೊಗ್ಗದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಹೇರಲು ನಿರ್ಧರಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಹೇರಲು ನಿರ್ಧರಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಜೂನ್ 7 ರವರೆಗೆ ಶಿವಮೊಗ್ಗ ಜಿಲ್ಲೆಯು ಸಂಪೂರ್ಣವಾಗಿ ಸ್ಥಬ್ಧವಾಗಲಿದೆ ಎಂದು ಇಂದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೂ ಕೂಡ, ಕೋವಿಡ್ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕೂಡ, ಲಾಕ್ ಡೌನ್ ಹೇರಿದ್ದರೂ ಕೂಡ ಜನರ ದಿನನಿತ್ಯದ ಓಡಾಟದಲ್ಲಿ ಬದಲಾಗಿಲ್ಲ. ಕಾರಣ ಜಿಲ್ಲಾಡಳಿತದ  ತೀರ್ಮಾನದಂತೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಎಷ್ಟು ಹೇಳಿದರೂ ಕೂಡ ಜನ ಓಡಾಟ ಮಾಡೇ ಮಾಡುತ್ತಿದ್ದಾರೆ. ಬಂಧುಗಳು, ಸ್ನೇಹಿತರು ಮತ್ತು ನಮ್ಮ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಿದ್ದರು ಸಹ ಓಡಾಟ ಕಡಿಮೆ ಮಾಡಿಲ್ಲ  ಜನತೆ. 

ಹೀಗೆಕೆ ಅಂತ ಗೊತ್ತಾಗತಾ ಇಲ್ಲ. ಜನತೆಗೆ ಕೈಮುಗಿದೆವು, ಕಾಲಿಗೆ ಬಿದ್ದೆವು ಎಲ್ಲಾ ರೀತಿಯ ವಿನಂತಿ ಮಾಡಿಕೊಂಡರೂ ಕೂಡ ಅವರ ಜೀವದ ಬಗ್ಗೆ ಅವರಿಗೆ ಅರಿವು ಬರುತ್ತಿಲ್ಲ. ನೀವು ಬದುಕಿ ಜನರನ್ನು ಬದುಕಲು ಬಿಡಿ ಎಂದೂ ಪರಿ ಪರಿಯಾಗಿ ಕೇಳಿಕೊಂಡರೂ ಕೂಡ, ಅವರೆಲ್ಲರೂ ಕದ್ದು ಮುಚ್ಚಿ ಓಡಾಟ  ಮಾಡುತ್ತಿದ್ದಾರೆ.ಅದಕ್ಕೆ ಈ ಬಾರಿ ಜಿಲ್ಲಾಡಳಿತ ನಿರ್ಧಾರ ಮಾಡಿ, ಲಾಕ್ ಡೌನ್ ಆದೇಶ ಉಲ್ಲಂಘಿಸಿದವರಿಗೆ ಕಠೀಣ ಶಿಕ್ಷೆ ಮತ್ತು ಅವರು ಓಡಾಡುವ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಅದು ಮುಂದೆ ಕೋರ್ಟ್ ಮುಖಾಂತರ ಬಿಡಿಸಿಕೊಳ್ಳಬೇಕಾಗುತ್ತದೆ. ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಅದರಂತೆ  ವಾಹನದಲ್ಲಿ ಇರುವವರನ್ನು ಕೂಡ ಬಂಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com