ನಾವು ಇದೀಗ ಮಕ್ಕಳತ್ತ ಗಮನ ಹರಿಸಬೇಕಾಗಿದೆ: ಮಕ್ಕಳ ತಜ್ಞೆ ಡಾ.ಆಶಾ ಬೆನಕಪ್ಪ

 ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮಕ್ಕಳ ವಿಭಾಗದ ತಜ್ಞೆ ಡಾ. ಆಶಾ ಬೆನಕಪ್ಪ, ಗಮನಿಸಬೇಕಾದ ರೋಗ ಲಕ್ಷಣ ಕೋವಿಡ್-19 ಎರಡನೇ ಅವಧಿಯಲ್ಲಿ ಏಕೆ ಮಕ್ಕಳು ಸೋಂಕಿತರಾಗಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಮೂರನೇ ಅಲೆಯ ಸಂದರ್ಭದಲ್ಲಿ ವಿಶೇಷವಾಗಿ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆಯಿದೆ. ಆರೋಗ್ಯ ಮೂಲಸೌಕರ್ಯ ವನ್ನು ನಾವು ಹೇಗೆ ಮತ್ತು ಎಷ್ಟರ ಮಟ್ಟಿಗೆ ಸಿದ್ಧಪಡಿಸಬೇಕು ಎಂದು ತಿಳಿಯಲು ಮಕ್ಕಳ  ಡೇಟಾವನ್ನು ನವೀಕರಿಸುವ ಅಗತ್ಯವಿದೆ ಎಂದಿರುವ ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮಕ್ಕಳ ವಿಭಾಗದ ತಜ್ಞೆ ಡಾ. ಆಶಾ ಬೆನಕಪ್ಪ, ಗಮನಿಸಬೇಕಾದ ರೋಗ ಲಕ್ಷಣ 
ಕೋವಿಡ್-19 ಎರಡನೇ ಅವಧಿಯಲ್ಲಿ ಏಕೆ ಮಕ್ಕಳು ಸೋಂಕಿತರಾಗಿದ್ದಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಒಪ್ಪುತ್ತೀರಾ?
ನಾನು ಒಪ್ಪುತ್ತೇನೆ. ಹೆಚ್ಚಿನ ಸಂಖ್ಯೆಯ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಆದರೆ. ಮೂರನೇ ಅಲೆಯವರೆಗೂ ನಾವು ಕಾಯಬಾರದು. ಇಂತಹ ಕೇಸ್ ಗಳು ಹೆಚ್ಚಾಗುತ್ತಿರುವುದನ್ನು ಈಗಾಗಲೇ ನೋಡುತ್ತಿದ್ದೇವೆ. ರಾಜ್ಯ ವಾರ್ ರೂಮ್ ಮಾಹಿತಿ ಪ್ರಕಾರ, 0-9 ವರ್ಷದೊಳಗಿನ 74,898 ಮತ್ತು 10-19  ವರ್ಷದೊಳಗಿನ 1,88,439 ಮಕ್ಕಳಿಗೆ ಸೋಂಕು ತಗುಲಿದೆ. ಮೊದಲ ಅಲೆ ವೇಳೆಯಲ್ಲಿ ದೇಶದಲ್ಲಿ ಶೇ. 4 ರಷ್ಟು 14 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರಿತ್ತು.ಅದು ಈಗ ಶೇ.10-14 ರಷ್ಟಿದೆ. ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಈ ಅಂಕಿಸಂಖ್ಯೆಗಳೇ ಹೇಳುತ್ತವೆ. ಅದು ಈಗ ಆರಂಭವಾಗಬೇಕಿದೆ.

ಎರಡನೇ ಅಲೆ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಏಕೆ ಪಾಸಿಟಿವ್ ಬಂದಿತು? ಇದು ಹೊಸ ರೂಪಾಂತರವೇ?
ಇದು ರೂಪಾಂತರ ಎಂದು ನಾನು ಭಾವಿಸುವುದಿಲ್ಲ. ಸೋಂಕಿನ ಪ್ರಮಾಣ ಹೆಚ್ಚಿದೆ. ರೂಪಾಂತರಗಳು ನಡೆಯುತ್ತಲೇ ಇರುತ್ತವೆ. 
ಪ್ರತಿ ರೂಪಾಂತರಿತ ಆಕ್ರಮಣಕಾರಿ, ಸಾಂಕ್ರಾಮಿಕ ಮತ್ತು ಸಾಮರ್ಥ್ಯವನ್ನು ಹೊಂದಿವೆ. ಎರಡನೇ ಅಲೆ ನಂತರ ಪೋಷಕರ
ನಿರ್ಲಕ್ಷತನದಿಂದ ಮಕ್ಕಳಿಗೆ ತೊಂದರೆಯಾಗಬಹುದು.

ಈ ಸಂಖ್ಯೆಗಳು ನಿಮಗೆ ಆಶ್ಚರ್ಯವಾಗಿದೆಯೇ? ಅಥವಾ ಇದನ್ನು ನಿರೀಕ್ಷಿಸಲಾಗಿದೆಯೇ?

ಇಲ್ಲ. ನಾವು ಇದನ್ನು ನಿರೀಕ್ಷಿಸಿದ್ದೇವು.ಮೊದಲಿಗೆ ಮಕ್ಕಳು ಶಾಲೆಗಳಿಗೆ ಹೋಗಲ್ಲ. ಇದರರ್ಥ ಅವರು ನಿರುಪದ್ರವ ಉಸಿರಾಟದ ಸೋಂಕನ್ನು ಪಡೆದಿಲ್ಲ. ಇವುಗಳು ಸಾಮಾನ್ಯವಾಗಿ ವರ್ಷದಲ್ಲಿ ಆರರಿಂದ ಎಂಟು ಸಲ ಬರುತ್ತವೆ. ಈ ಉಸಿರಾಟದ ಸೋಂಕುಗಳೇ ಮಕ್ಕಳಿಗೆ ರೋಗನಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಒಂದು ವರ್ಷದೊಳಗೆ ಅನೇಕ ವೈರಸ್ ಗಳಿಗೆ ಮಕ್ಕಳು ಒಡ್ಡಿಕೊಳ್ಳುತ್ತಾರೆ. ಈ ಸೋಂಕುಗಳು ರೋಗ ನಿರೋಧಕ ಶಕ್ತಿಯನ್ನು ನೋಡಿಕೊಳ್ಳುತ್ತವೆ. ಈಗ ಮನೆಯಲ್ಲಿಯೇ ಕುಳಿತಿರುವುದರಿಂದ ವೈರಸ್ ಗಳು ದೇಹ ಪ್ರವೇಶಿಸದೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಅಲ್ಲದೇ ವಾಡಿಕೆಯಂತೆ ನೀಡಲಾಗುತ್ತಿದ್ದ ಹೆಚ್ 1ಎನ್ 1 ನಂತಹ ಲಸಿಕೆ ಕೂಡಾ ಸ್ಥಗಿತಗೊಂಡಿವೆ. ಆದ್ದರಿಂದ ಈ ಲಸಿಕೆ
ಸ್ಥಗಿತಗೊಂಡಿರುವುದು ಮಕ್ಕಳನ್ನು ದುರ್ಬಲರನ್ನಾಗಿಸಿದೆ.

ಮಕ್ಕಳಲ್ಲಿ ಯಾವ ಲಕ್ಷಣಗಳು ಇರುತ್ತವೆ? ಇದು ವಯಸ್ಕರಿಗಿಂತ ಭಿನ್ನವಾಗಿದೆಯೇ?

ಹೌದು. ಮಕ್ಕಳಲ್ಲಿ ವಯಸ್ಕರಿಗಿಂತ ಭಿನ್ನ ಲಕ್ಷಣಗಳಿರುತ್ತವೆ. ಆದಾಗ್ಯೂ, ಮೊದಲ ಅಲೆ ವೇಳೆಯಲ್ಲಿ ಶೀತ, ವಾಸನೆ ಗೊತ್ತಾಗದಿರುವುದು,  ಕೆಮ್ಮು, ಗಂಟಲು ಕೆರೆತ, ಜ್ವರದಂತಹ ಲಕ್ಷಣಗಳು ಮಕ್ಕಳಲ್ಲಿಯೂ ಕಂಡುಬಂದಿತ್ತು. ಆದರೆ, ಎರಡನೇ ಅಲೆ ವೇಳೆಯಲ್ಲಿ ಉಸಿರಾಟದ ತೊಂದರೆ ಜೊತೆಗೆ ಚರ್ಮದ ದದ್ದುಗಳು, ವಾಂತಿ, ಭೇದಿ ಕೂಡಾ ಕಾಣಿಸಿಕೊಂಡಿದೆ.


ಮಕ್ಕಳಲ್ಲಿ ಕೋವಿಡ್-19 ಪಾಸಿಟಿವ್ ಪರೀಕ್ಷಿಸಿದಾಗ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು?
ಲಕ್ಷಣ ರಹಿತ ರೋಗಿಗಳು ಹೆಚ್ಚಿನ ರೋಗಲಕ್ಷಣಗಳಿಗಾಗಿ ನಿಗಾ ವಹಿಸಬೇಕು, ರೋಗ ಲಕ್ಷಣವಾದರೆ ಕೆಮ್ಮು, ಜ್ವರ ಮತ್ತಿತರ
ಸೌಮ್ಯ ಚಿಕಿತ್ಸೆ ನೀಡಬೇಕು. ಸಾಧಾರಣ ರೋಗ ಲಕ್ಷಣವಾದಾಗ ಆಸ್ಪತ್ರೆಗೆ ತೋರಿಸಬೇಕು, ಪರೀಕ್ಷಿಸಿ ತೀವ್ರಗೊಂಡಾಗ ಐಸಿಯುಗೆ ದಾಖಲಿಸಬೇಕು. ಮಕ್ಕಳಿಗೆ ರೋಗ ನಿರೋಧ ಶಕ್ತಿ ಹೆಚ್ಚಿಸುವ ಯಾವುದೇ ಔಷಧವಿಲ್ಲಾ, ಆರೋಗ್ಯಕರ, ಪೌಷ್ಠಿಕಾಂಶಯುಕ್ತ , ಮನೆಯಲ್ಲಿಯೇ  ತಯಾರಿಸಿದ ಆಹಾರ ನೀಡಿ, ಒಂದು ವೇಳೆ ಯಾವುದೇ ರೋಗ ಲಕ್ಷಣ ಕಂಡುಬಂದರೆ ಐಸೋಲೇಷನ್ ಅಥವಾ ಕ್ವಾರಂಟೈನ್ ಆಗಬೇಕು, ಕುಟುಂಬದೊಂದಿಗೆ ಸೇರುವುದನ್ನು ತಡೆಗಟ್ಟಬೇಕು. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಹಾಕಬಾರದು ಆದರೆ, ಫೇಸ್ ಶೀಲ್ಡ್ ಹಾಕಬೇಕು. ಆದರೆ, 2 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು.

ನಮ್ಮ ಮಕ್ಕಳನ್ನು ರಕ್ಷಿಸಲು ರಾಜ್ಯವು ಸಾಕಷ್ಟು ಮಾಡುತ್ತಿದೆಯೇ?

ಇಲ್ಲ. ಹೆಚ್ಚಿಗೆ ಮಾಡಬೇಕಾದ ಅಗತ್ಯವಿದೆ. ಮಕ್ಕಳ ವಿಚಾರಕ್ಕೆ ಬಂದಾಗ ಅನೇಕ ಸವಾಲುಗಳಿವೆ. ಮೊದಲಿಗೆ ಎಲ್ಲರ ಬಗ್ಗೆ ಏಲಿದೆ ಮಾಹಿತಿ? ವಾರ್ ರೂಮ್ ನಲ್ಲಿ ಕೆಲವೇ ಪ್ರಕರಣಗಳು, ಸಾವು, ಬಿಡುಗಡೆ ಬಗ್ಗೆ ಮಾಹಿತಿ ಇದೆ. ಆದರೆ, ನಮಗೆ ಪ್ರತ್ಯೇಕವಾದ ಮಾಹಿತಿ ಅಗತ್ಯವಿದೆ. ಮಕ್ಕಳ ಆಸ್ಪತ್ರೆಗಳು ಯಾವುದು, ಎಷ್ಟು ಬೆಡ್ ಗಳಿಗೆ, ಕೋವಿಡ್ ಕೇರ್, ಐಸಿಯು ಬಗ್ಗೆ ನಮಗೆ ಮಾಹಿತಿ ಇಲ್ಲ. ಮಕ್ಕಳ ಬಗ್ಗೆ ಮಾತನಾಡುವಾಗ, ಗರ್ಭಿಣಿ ತಾಯಂದಿರನ್ನು ಕೂಡಾ ಪರಿಗಣಿಸಬೇಕಾಗುತ್ತದೆ.ಇಂತಹ ಎಷ್ಟು ಗರ್ಭಿಣಿಯರಲ್ಲಿ ಸೋಂಕು ಇದೆ ಎಂಬುದನ್ನು ತಿಳಿಯಬೇಕಾದದ್ದು ಅಗತ್ಯವಾಗಿದೆ. 0-6 ಮತ್ತು 15-18
ವರ್ಷದೊಳಗಿನ ಮಕ್ಕಳ ಬಗ್ಗೆ ಪ್ರತ್ಯೇಕವಾದ ಮಾಹಿತಿ ಬೇಕಾಗಿದೆ. ಬರೀ ಸೋಂಕು ಮಾತ್ರವಲ್ಲದೇ, ಸಾವು, ಅದಕ್ಕೆ ಕಾರಣಗಳ ಪಟ್ಟಿಯನ್ನು ವಾರ್ ರೂಮ್ ಸಿದ್ಧಪಡಿಸಬೇಕಾಗಿದೆ. ಸೌಮ್ಯ, ಸಾಧಾರಣ ಮತ್ತು ತೀವ್ರ ಪ್ರಕರಣಗಳ ಚಿಕಿತ್ಸೆ ಬಗ್ಗೆ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಸೂಕ್ತ ಬೆಡ್ ವ್ಯವಸ್ಥೆ ಮಾಡಬೇಕಾಗಿದೆ. ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಿ ಅದರ ನಿರ್ವಹಣೆಗೆ ಪರಿಣಿತರನ್ನು ನಿಯೋಜಿಸಬೇಕಾಗಿದೆ. ಮಕ್ಕಳಿಗಾಗಿಯೇ ಡೇ ಕೇರ್ ಸೆಂಟರ್ ನಂತಹ ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕಾಗಿದೆ.

ಮಕ್ಕಳು ಇನ್ನೂ ಎಷ್ಟು ದಿನ ಸ್ನೇಹಿತರು, ಶಿಕ್ಷಕರು , ಶಾಲೆಯಿಂದ ದೂರ ಉಳಿಯಬೇಕಾಗುತ್ತದೆ?
ಕನಿಷ್ಠ ಮುಂದಿನ ಎರಡು ವರ್ಷ ಗಳವರೆಗೂ ಇದು ಕಷ್ಟಕರವಾಗಿದೆ. ಒಂದು ವೇಳೆ ಲಸಿಕೆ ಪಡೆಯದಿದ್ದರೆ ಎಲ್ಲರೂ ಲಸಿಕೆ ಪಡೆಯಿರಿ, ವಿಶೇಷವಾಗಿ 18-44 ವರ್ಷದೊಳಗಿನವರು ಲಸಿಕೆ ಪಡೆಯಬೇಕು, ನಂತರ ಸೋಂಕಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದ್ದು, ಮಕ್ಕಳು ಶಾಲೆಗಳಿಗೆ ತೆರಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com