ಬೆಂಗಳೂರು ಗ್ಯಾಂಗ್ ರೇಪ್: 5 ಲಕ್ಷ ರೂ. ಹಣ ಮರುಪಾವತಿ ಮಾಡದಿದ್ದಕ್ಕೆ ಮಹಿಳೆಗೆ ಕಿರುಕುಳ; ಪೊಲೀಸರ ಮಾಹಿತಿ

ಬೆಂಗಳೂರು ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳಿಂದ ಹೊಸ ಮಾಹಿತಿ ಸಿಕ್ಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳಿಂದ ಹೊಸ ಮಾಹಿತಿ ಸಿಕ್ಕಿದೆ.

24 ವರ್ಷದ ಸಂತ್ರಸ್ತೆ ಆರೋಪಿಗಳಿಗೆ 5 ಲಕ್ಷ ರು ಹಣ ನೀಡಬೇಕಾಗಿತ್ತು, ಆದರೆ ಹಣ ನೀಡಲು ಆಕೆ ನಿರಾಕರಿಸಿದ ಕಾರಣ ಕಿರುಕುಳ ನೀಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ, ಸಂತ್ರಸ್ತ ಮಹಿಳೆ ಕೂಡ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದಾಳೆ ಎಂಬುದು ಖಚಿತವಾಗಿದೆ, ಆರೋಪಿಗಳಿಂದ ಆಕೆ ಮುಂಗಡವಾಗಿ 5 ಲಕ್ಷ ರು ಹಣ ಪಡೆದಿದ್ದಾಳೆ. ಆದರೆ ಕಳೆದ ಕೆಲವು ತಿಂಗಳಿಂದ ಆಕೆ ಹಣ ವಾಪಸ್ ಮಾಡಿರಲಿಲ್ಲ, ಆದರೆ ಹಣ ನೀಡುವಂತೆ ಒತ್ತಾಯಿಸಿದಾಗ ಆಕೆ ಹಣ ನೀಡಲು ನಿರಾಕರಿಸಿ ತಪ್ಪಿಸಿಕೊಂಡಿದ್ದಳು.

ನಸರತ್ ಮತ್ತು ಕಾಜಲ್ ಎಂಬ ಇಬ್ಬರು ಮಹಿಳೆಯರು ಆಕೆಯನ್ನು ಪತ್ತೆ ಹಚ್ಚಿದ್ದರು, ಅವರಿಬ್ಬರು ಕೂಡ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಒಬ್ಬಳು ವಿಡಿಯೋ ರೆಕಾರ್ಡ್ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಆರ್ ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯನ್ನು ಹಾಜರುಪಡಿಸಲಿದ್ದಾರೆ. ಪ್ರಕರಣದ ಎಲ್ಲಾ ಆರೋಪಿಗಳನ್ನು  ಜ್ಯೂಡಿಶಿಯಲ್ ಕಸ್ಟಡಿಗೆ ಕಳುಹಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com