ಕೋವಿಡ್-19: ಜೀವ ರಕ್ಷಕ ಸಾಧನಗಳಿವೆ ಎಂದು ಪರಿಸ್ಥಿತಿ ಗಂಭೀರವಾದರೂ ಕಣ್ಮುಚ್ಚಿ ಕೂರದಿರಿ...!

ಆಕ್ಸಿಜನ್ ಸಿಲಿಂಡರ್ ಲಭ್ಯವಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರು ಹೋಂ ಐಸೋಲೇಷನ್ ನಲ್ಲಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಜೀವ ರಕ್ಷಕ ಸಾಧನಗಳನ್ನು ಇಟ್ಟುಕೊಳ್ಳುತ್ತಿರುವ ಜನರು ಇದನ್ನೇ ನಂಬಿ ಪರಿಸ್ಥಿತಿ ಗಂಭೀರವಾದರೂ ಆಸ್ಪತ್ರೆಗಳಿಗೆ ಹೋಗದೇ ಇರುವುದು ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಕ್ಸಿಜನ್ ಸಿಲಿಂಡರ್ ಲಭ್ಯವಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರು ಹೋಂ ಐಸೋಲೇಷನ್ ನಲ್ಲಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಜೀವ ರಕ್ಷಕ ಸಾಧನಗಳನ್ನು ಇಟ್ಟುಕೊಳ್ಳುತ್ತಿರುವ ಜನರು ಇದನ್ನೇ ನಂಬಿ ಪರಿಸ್ಥಿತಿ ಗಂಭೀರವಾದರೂ ಆಸ್ಪತ್ರೆಗಳಿಗೆ ಹೋಗದೇ ಇರುವುದು ಸಾವಿನ ಸಂಖ್ಯೆ ಏರಿಕೆಯಾಗಲು ಕಾರಣವಾಗುತ್ತಿದೆ.

ಸ್ವಯಂ ಸೇವಕರು ಸೋಂಕಿತ ವ್ಯಕ್ತಿಗಳಿಗೆ ಹಾಸಿಗೆ, ಆಕ್ಸಿಯನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಿದರೂ ಕೂಡ ಪರಿಸ್ಥಿತಿ ಗಂಭೀರವಾದರೂ ಜನರು ಆಸ್ಪತ್ರೆಗಳಿಗೆ ದಾಖಲಾಗದೆ ಮನೆಗಳಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಇರುತ್ತಿದ್ದಾರೆ.

ರಾಚೇನಹಳ್ಳಿ ನಿವಾಸಿಯಾಗಿರುವ 30 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದು, ಕೆಮ್ಮು, ಉಸಿರಾಟ ಸಮಸ್ಯೆ ಎದುರಾಗಿದೆ. ಆಕ್ಸಿಜನ್ ಪ್ರಮಾಣ ಶೇ.88ಕ್ಕೆ ತಲುಪಿದ್ದರೂ, ಕುಟುಂಬಸ್ಥರು ಮಾತ್ರ ಜೀವ ರಕ್ಷಕ ಸಾಧನಗಳನ್ನು ನಂಬಿಕೊಂದು ಇವತ್ತು, ನಾಳೆ ಎಂದು ಆಸ್ಪತ್ರೆಗೆ ಸೇರಿಸಲು ತಡ ಮಾಡಿದ್ದಾರೆ. 

ಕುಟುಂಬ ಸದಸ್ಯರು 5-6 ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಿದ್ದಾರೆ. ಇದಲ್ಲದೆ, ಬೈಪಾಪ್ ಯಂತ್ರ (ಬಿಲೆವೆಲ್ ಪಾಸಿಟಿವ್ ಏರ್ವೇ ಪ್ರೆಶರ್), ನೆಬ್ಯುಲೈಸರ್ ಮತ್ತು ರಿಬ್ರೀಥರ್ ಮಾಸ್ಕ್'ಗಳನ್ನೂ ಖರೀದಿ ಮಾಡಿದ್ದಾರೆ. ಇವುಗಳಿಂದ ಹೋಂ ಐಸೋಲೇಷನ್ ಮುಂದುವರೆಸಿದ್ದಾರೆ. ಇದರಿಂದಾಗಿ ಸೋಂಕಿತ ವ್ಯಕ್ತಿಯ ಸ್ಥಿತಿ ಕೇವಲ 5 ದಿನಗಳಲ್ಲಿ ಕೆಟ್ಟಸ್ಥಿತಿಯಿಂದ ಗಂಭೀರ ಸ್ಥಿತಿಗೆ ತಲುಪಿತ್ತು. ಕಾರ್ಯಕರ್ತರು ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಿದ್ದರೂ ಕೂಡ ಕುಟುಂಬ ಸದಸ್ಯರು ಇವತ್ತು, ನಾಳೆ ಎಂದು ತಡ ಮಾಡಿದ್ದರು. ಸೋಂಕಿತರ ವ್ಯಕ್ತಿಗೆ ಹೆಚ್'ಡಿಯು (ಹೈ ಡಿಪೆನ್ಸಿ) ಹಾಸಿಗೆ ಅಗತ್ಯವಿತ್ತು. ನಂತರ ಹಾಸಿಗೆ ಬೇಕೆಂದರೂ ಅವರಿಗೆ ಹಾಸಿಗೆ ಸಿಗಲಿಲ್ಲ. ಬಳಿಕ ಸಾಕಷ್ಟು ಹುಡುಕಾಟದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ದೊರೆತಿತ್ತು.

ಇದೇನು ಮೊದಲ ಪ್ರಕರಣವಲ್ಲ. ಸಾಕಷ್ಟು ಜನರು ಇದೇ ರೀತಿ ಮಾಡುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಸೋಂಕಿತರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆಂದು ಮರ್ಸಿ ಮಿಷನ್ ಕಾರ್ಯಕರ್ತ ಮೊಹಮ್ಮದ್ ಇಸ್ಲಾಯಿಲ್ ಎಂಬುವವರು ಹೇಳಿದ್ದಾರೆ. 

ನಾಗವಾರದಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು. ಕೊರೋನಾ ಸೋಂಕಿತರ ವ್ಯಕ್ತಿಯ ಆಮ್ಲಜನಕ ಪ್ರಮಾಣ ಶೇ.60ಕ್ಕೆ ಕುಸಿದಿತ್ತು. ಆದರೂ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಕುಟುಂಬದ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದರು. ಆಕ್ಸಿಜನ್ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕ್ಸಿಜನ್ ಸಿಲಿಂಡರ್ ಗಾಗಿ ಹುಡುಕಾಟ ನಡೆಸಿದ್ದರು. ಆದರೆ, 2 ಗಂಟೆಗಳ ಬಳಿಕ ದೊರೆತಿತ್ತು. ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡಲು 2 ಗಂಟೆ ಕಾಲ ತೆಗೆದುಕೊಂಡಿದ್ದರು. ಈ ವೇಳೆ ಸೋಂಕಿತನ ಸ್ಥಿತಿ ಗಂಭೀರವಾಗಿ ಕೊನೆಯುಸಿರೆಳೆದರು ಎಂದು ಮತ್ತೊಬ್ಬ ಕಾರ್ಯಕರ್ತ ತಿಳಿಸಿದ್ದಾರೆ. 

ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಮಾತನಾಡಿ, ಪರಿಸ್ಥಿತಿ ಗಂಭೀರವಾಗುವುದಕ್ಕೂ ಮುನ್ನವೇ ಆಸ್ಪತ್ರೆಗೆ ದಾಖಲಾಗುವಂತೆ ಸರ್ಕಾರ ಸಾಕಷ್ಟು ಬಾರಿ ಹೇಳುತ್ತಲೇ ಇದೆ. ಆದರೂ ಜನರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಆಕ್ಸಿಜನ್ ಪ್ರಮಾಣ ಕುಸಿಯುತ್ತಿರುವುದು ಕಂಡು ಬಂದಿದ್ದೇ ಆದರೆ, ಕೂಡಲೇ ಜನರು ಆಸ್ಪತ್ರೆಗೆ ದಾಖಲಾಗಬೇಕು. ಇದರಿಂದ ಆರೋಗ್ಯ ಸುಧಾರಿಸಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com