ದಕ್ಷಿಣ ಕನ್ನಡ: ಸರ್ಕಾರಿ ಆಸ್ಪತ್ರೆಗಳ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆ

ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದ್ದು, ಈ ನಡುವಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿಗೆ ನೀಡಲಾಗಿದ್ದ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದ್ದು, ಈ ನಡುವಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿಗೆ ನೀಡಲಾಗಿದ್ದ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 

ಜಿಲ್ಲೆಯಲ್ಲಿರುವ ವೆನ್ಲಾಕ್ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳು ವೈದ್ಯರು, ನರ್ಸ್ ಹಾಗೂ ಡಿ ಗ್ರೂಪ್ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಿದ್ದರು. ಐದು ವೈದ್ಯರು ಮತ್ತು ಐದು ಅರಿವಳಿಕೆ ತಜ್ಞರು, ಎಂಟು ಎಂಬಿಬಿಎಸ್ ವೈದ್ಯರು, 69 ಸಿಬ್ಬಂದಿ ನರ್ಸ್, 46 ಗ್ರೂಪ್ ಡಿ ನೌಕರರು ಮತ್ತು 5 ಮಂದಿ ಲ್ಯಾಬ್ ತಂತ್ರಜ್ಞರ ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು.
 
ಐದು ವೈದ್ಯಕೀಯ ಹುದ್ದೆ ಹಾಗೂ ಐದು ಅರಿವಳಿಕೆ ತಜ್ಞರ ಹುದ್ದೆಗೆ ರೂ.1.21 ಲಕ್ಷ ವೇತನ ನಿಗದಿಪಡಿಸಿದ್ದರೂ ಯಾರೊಬ್ಬರೂ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಎಂಬಿಬಿಎಸ್ ವೈದ್ಯ ಹುದ್ದೆಗೆ ಕೇವಲ ಮೂವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗೆ ತಿಂಗಳಿಗೆ ರೂ.50,000 ವೇತನ ನಿಗದಿಪಡಿಸಲಾಗಿದೆ. 

ಎರಡು ಬಾರಿ ಅರ್ಜಿಗೆ ಆಹ್ವಾನ ನೀಡಿದ್ದರೂ ಕೂಡ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಾಮಾನ್ಯವಾಗಿ ತಾತ್ಕಾಲಿಕ ಹುದ್ದೆಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗಿರುವ ಕಾರಣ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನಲಾಗುತ್ತಿದೆ. 

ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಅವರು ಮಾತನಾಡಿ, ಆಯ್ಕೆಯಾಗಿರುವ ಅಭ್ಯರ್ಥಿಗಳು 6 ತಿಂಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬೇಕಾಗುತ್ತದೆ. ಕೊರೋನಾ ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದರೆ, ಅವಧಿಯನ್ನು ವಿಸ್ತರಿಸಲಾಗುತ್ತದೆ. ಅರ್ಜಿ ಬದಲು ಇದೀಗ ಆಸಕ್ತರು ನೇರವಾಗಿ ಸಂದರ್ಶನಕ್ಕೆ ಬರುವಂತೆ ಸೂಚಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ತಪಾಸಣೆಗೆ ವೈದ್ಯರು ಹಾಗೂ ನರ್ಸ್ ಬರುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಬರುತ್ತಿದ್ದು, ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಿಬ್ಬಂದಿಗಳ ಕೊರತೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com