ಖಾಲಿ ಆಮ್ಲಜನಕ ಟ್ಯಾಂಕ್‌ಗಳನ್ನು ಕುವೈತ್‌ಗೆ ಸಾಗಿಸಲು ಮಂಗಳೂರಿಗೆ ಐಎಎಫ್‌ನ ಬೃಹತ್ ವಿಮಾನ ಆಗಮನ

ಖಾಲಿ ಆಕ್ಸಿಜನ್ ಟ್ಯಾಂಕ್‌ಗಳನ್ನು ಮಂಗಳೂರಿನಿಂದ ಕುವೈತ್‌ಗೆ ಸಾಗಿಸಲು ಭಾರತೀಯ ವಾಯುಪಡೆಯ ಅತಿದೊಡ್ಡ ವಿಮಾನಗಳಲ್ಲಿ ಒಂದು ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ನಲ್ಲಿ ಮೊದಲ ಬಾರಿಗೆ ಲ್ಯಾಂಡ್ ಆಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು:  ಖಾಲಿ ಆಕ್ಸಿಜನ್ ಟ್ಯಾಂಕ್‌ಗಳನ್ನು ಮಂಗಳೂರಿನಿಂದ ಕುವೈತ್‌ಗೆ ಸಾಗಿಸಲು ಭಾರತೀಯ ವಾಯುಪಡೆಯ ಅತಿದೊಡ್ಡ ವಿಮಾನಗಳಲ್ಲಿ ಒಂದು ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ನಲ್ಲಿ ಮೊದಲ ಬಾರಿಗೆ ಲ್ಯಾಂಡ್ ಆಗಿದೆ. 

ಇತ್ತೀಚೆಗೆ ಭಾರತೀಯ ವಾಯುಪಡೆಯು ತನ್ನ ಸಿ -17 ಗ್ಲೋಬ್‌ಮಾಸ್ಟರ್ -3 ಮತ್ತು ಐಎಲ್ -76 ಸರಕು ವಿಮಾನಗಳಲ್ಲಿ ಆಮ್ಲಜನಕವನ್ನು ಸಾಗಿಸುವ ಟ್ರಕ್‌ಗಳನ್ನು ಸಾಗಿಸಲು ಪ್ರಾರಂಭಿಸಿತ್ತು. ಇದು ಭಾರತೀಯ ವಾಯುಪಡೆಯ ಅತಿದೊಡ್ಡ ಕಾರ್ಗೋ ವಿಮಾನವಾಗಿದ್ದು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಆಮ್ಲಜನಕವನ್ನು ಭಾರಿ ಅಂತರದ ಸ್ಥಳಗಳಿಗೆ ವರ್ಗಾಯಿಸಲು ತೆಗೆದುಕೊಳ್ಳುವ ಸಮಯವನ್ನು ಉಳಿಸಲಿದೆ. ಕೋವಿಡ್ -19 ರ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಶುದ್ಧ ಆಮ್ಲಜನಕದ ಬೇಡಿಕೆಯು ಸಾರ್ವಕಾಲಿಕ ಹೆಚ್ಚಾದದ್ದರಿಂದ ಸಮಯದ ಉಳಿತಾಯ ಅತ್ಯಂತ ಮುಖ್ಯವಾಗಲಿದೆ.

ಭಾರತೀಯ ವಾಯುಪಡೆಯು ತನ್ನ ಬೃಹತ್ ಕಾರ್ಗೋ  ಮಾನಗಳೊಂದಿಗೆ ಕ್ರಯೋಜೆನಿಕ್ ಆಮ್ಲಜನಕ ಕಂಟೇನರ್ ಟ್ರಕ್‌ಗಳನ್ನು ಸಾಗಿಸಲು ಮುಂದಾಗಿದೆ. ಶುದ್ಧ ಆಮ್ಲಜನಕದ ಬೇಡಿಕೆ ಭಾರತದ ಹಲವಾರು ನಗರಗಳಲ್ಲಿ ಉತ್ತುಂಗದಲ್ಲಿದೆ. ಕ್ರಯೋಜೆನಿಕ್ ಘಟಕದಿಂದ  ಆಸ್ಪತ್ರೆಗಳಿಗೆ ಅಥವಾ ಅಗತ್ಯವಿರುವ ಆಮ್ಲಜನಕ ಸಂಗ್ರಹ  ಕೇಂದ್ರಗಳಿಗೆ ಆಮ್ಲಜನಕವನ್ನು ಸಾಗಿಸುವ ಟ್ರಕ್‌ಗಳು ಹಲವಾರು ಕಾರಣಗಳಿಂದ ಮಿತಿಯನ್ನು ಹೊಂದಿದೆ. ಅದರಲ್ಲಿ ಸಮಯ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಆಮ್ಲಜನಕವನ್ನು ತಲುಪಿಸಲು ಟ್ರಕ್‌ಗಳು ಕೆಲವೊಮ್ಮೆ ನೂರಾರು ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಹಲವಾರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ರಾತ್ರಿ ಸಂಚಾರ ಸಹ ಅನಿವಾರ್ಯವಾಗಲಿದೆ. ಇದರಿಂದ ದ ಚಾಲಕರ ಆಯಾಸ, ರಸ್ತೆ ತಡೆ, ಇಂಧನ ನಿಲುಗಡೆ ಮುಂತಾದ ಸಮಸ್ಯೆ ಉಂತಾಗುತ್ತದೆ.

ಭಾರತೀಯ ವಾಯುಪಡೆಯು ತನ್ನ ದೈತ್ಯ ಸರಕು ವಿಮಾನಗಳ ಬಳಕೆಯನ್ನು ಮೇಲೆ ತಿಳಿಸಿದ ಎಲ್ಲಾ ಮಿತಿಗಳಿಂದ ದೂರವಾಗಿಸುವ ಅಂಶಗಳ ಮೇಲೆ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸುತ್ತದೆ ಎಂದು ಕಂಡುಕೊಂಡಿದೆ. ಈ ಕಾರ್ಯಾಚರಣೆಗೆ ಬಳಸಲಾಗುವ ವಿಮಾನವೆಂದರೆ ಇಲ್ಯುಶಿನ್ ಐಎಲ್ -76 ಮತ್ತು ಸಿ -17 ಗ್ಲೋಬ್‌ಮಾಸ್ಟರ್ -3 ಇದು ಐಎಎಫ್‌ನ ಅತಿದೊಡ್ಡ ವಿಮಾನವಾಗಿದೆ.

ಈ ಹಿಂದೆ ಭೂಕಂಪಗಳು, ಪ್ರವಾಹಗಳು, ಭೂಕುಸಿತಗಳು ಮುಂತಾದ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಸಂಸ್ಥೆ ತನ್ನ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ಬಳಸಿದೆ. ಈಗ, ವಿಮಾನವು ಅಗತ್ಯವಿರುವವರಿಗೆ ಆಮ್ಲಜನಕವನ್ನು ಒದಗಿಸುತ್ತದೆ ಎಂದು ಎಂಐಎ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com