ಇದೇ ಮೊದಲು! ರಾಜ್ಯ ಹೈಕೋರ್ಟ್ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಇದೇ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಾಹ್ನ 2.40 ಕ್ಕೆ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಕೋರ್ಟ್ ಹಾಲ್-1 ರ  ಕಲಾಪಗಳನ್ನು ನೇರ ಪ್ರಸಾರ(ಲೈವ್ ಸ್ಟ್ರೀಮಿಂಗ್) ಪ್ರಾರಂಭಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಾಹ್ನ 2.40 ಕ್ಕೆ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಕೋರ್ಟ್ ಹಾಲ್-1 ರ ಕಲಾಪಗಳನ್ನು ನೇರ ಪ್ರಸಾರ(ಲೈವ್ ಸ್ಟೀಮಿಂಗ್) ಪ್ರಾರಂಭಿಸಿದೆ.

ಲೈವ್ ಸ್ಟೀಮ್ ಪ್ರಾಯೋಗಿಕ ಯೋಜನೆಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಯೂಟ್ಯೂಬ್ ಚಾನೆಲ್‌ನ ಲಿಂಕ್ (https://youtu.be/p-4vySjlTYY) ಅನ್ನು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆಲಿಸಲಿರುವ ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗುವುದು.

ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯದ ಪ್ರಕರಣಗಳನ್ನು ಮಾತ್ರವೇ ವರ್ಚುವಲ್ ಮೋಡ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ ಮತ್ತು ವಕೀಲರು ಮತ್ತು ಪಾರ್ಟಿಗಳಿಗೆ ಗೆ ಮಾತ್ರ ವೈಯಕ್ತಿಕವಾಗಿ ಪ್ರವೇಶವನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com