
ಕೆಐಎನಲ್ಲಿ ಬ್ಯಾಗೇಜ್ ಬೆಲ್ಟ್ ಗೊಂದಲ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಬ್ಯಾಗೇಜ್ ಬೆಲ್ಟ್' ಗೊಂದಲ ಸಮಸ್ಯೆಯಿಂದಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.
ಪ್ರಯಾಣಿಕರ ಬ್ಯಾಗ್ ಗಳಿಗೆ ಹಾಕುವ ಗುರುತಿನ ಬೆಲ್ಟ್ ವ್ಯವಸ್ಥೆಯಲ್ಲಿನ ಗೊಂದಲದಿಂದಾಗಿ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಒಂದು ಹಂತದಲ್ಲಿ ಅಧಿಕಾರಿಗಳೊಂದಿಗೆ ಪ್ರಯಾಣಿಕರು ವಾಗ್ವಾದ ಕೂಡ ನಡೆಸಿದರು.
Passengers continued to suffer at @BLRAirport due to
— S. Lalitha (@Lolita_TNIE) November 1, 2021
baggage belt issues with many angry altercations inside the terminal. It was finally set right at 12.20 pm today, according to BIAL @XpressBengaluru @NewIndianXpress @KannadaPrabha @DGCAIndia @JM_Scindia pic.twitter.com/fjwqIOSq5D
ವಿಮಾನ ನಿಲ್ದಾಣದಲ್ಲಿ ಸ್ವಯಂ ಚಾಲಿತ ಸೆಲ್ಫ್ ಬ್ಯಾಗ್ ಡ್ರಾಪ್ ಯಂತ್ರಗಳನ್ನು ಅಳವಡಿಸಲಾಗಿದೆಯಾದರೂ, ಬ್ಯಾಗೇಜ್ ಬೆಲ್ಟ್ ವ್ಯವಸ್ಥೆಯ ಗೊಂದಲದಿಂದಾಗಿ ಸಮಸ್ಯೆ ಉಂಟಾಗಿತ್ತು. ಬಳಿಕ ಅಧಿಕಾರಿಗಳು ಮಧ್ಯಾಹ್ನ 12.20ರ ಹೊತ್ತಿಗೆ ಉಂಟಾಗಿದ್ದ ಗೊಂದಲವನ್ನು ನಿವಾರಣೆ ಮಾಡಿದರು.