'ಎರಡು ತಿಂಗಳ ಹಿಂದೆ ನನಗೆ ಹಾರ್ಟ್ ಪ್ರಾಬ್ಲಂ ಆದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೇಸ್ ಮೇಕರ್ ಹಾಕಿಸಿ ಕರೆದುಕೊಂಡು ಬಂದಿದ್ದ': ರಾಘವೇಂದ್ರ ರಾಜ್ ಕುಮಾರ್ 

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿ ಇಂದು ನವೆಂಬರ್ 1ಕ್ಕೆ ನಾಲ್ಕು ದಿನವಾಗಿದೆ. ಅವರ ಕುಟುಂಬಸ್ಥರು, ಬಂಧುಗಳು, ಅಭಿಮಾನಿಗಳು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ.
ರಾಘವೇಂದ್ರ ರಾಜ್ ಕುಮಾರ್(ಸಂಗ್ರಹ ಚಿತ್ರ)
ರಾಘವೇಂದ್ರ ರಾಜ್ ಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿ ಇಂದು ನವೆಂಬರ್ 1ಕ್ಕೆ ನಾಲ್ಕು ದಿನವಾಗಿದೆ. ಅವರ ಕುಟುಂಬಸ್ಥರು, ಬಂಧುಗಳು, ಅಭಿಮಾನಿಗಳು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ.

ಈ ಹೊತ್ತಿನಲ್ಲಿ ಅವರ ಸೋದರ ರಾಘವೇಂದ್ರ ರಾಜ್ ಕುಮಾರ್ ಇಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಪ್ಪು ನಮ್ಮ ಜೊತೆಗಿಲ್ಲ ಎಂಬುದು ಸತ್ಯ. ಏನಾಯಿತು, ಹೇಗಾಯಿತು ಎಂದು ಇನ್ನು ಮಾತನಾಡಿ ಯೋಚಿಸಿ ಪ್ರಯೋಜನವಿಲ್ಲ, ಕೆಟ್ಟ ಗಳಿಗೆ ಬರಬಾರದಿತ್ತು, ಬಂದು ಹೋಯ್ತು, ಏನು ಆಗಿದೆ ಅದು ಸತ್ಯ, ಏನಾಗಬಾರದಾಗಿತ್ತು ಎಂದು ಯೋಚನೆ ಮಾಡುತ್ತಾ ಅದರ ಹಿಂದೆ ಹೋಗಬಾರದಾಗದು ಎಂದು ನಾವೆಲ್ಲರೂ ನಿರ್ಧಾರಕ್ಕೆ ಬಂದಿದ್ದೇವೆ. ಅದು ನಮ್ಮನ್ನು ತುಂಬ ಕೆರಳಿಸುತ್ತಿರುತ್ತದೆ. ನಮ್ಮನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲ. ನಮ್ಮ ಜೊತೆ ಇಲ್ಲ ಎನ್ನುವುದು ಸತ್ಯ, ಹಿಂದಿನದ್ದನ್ನು ಮೆಲುಕು ಹಾಕಿದರೆ ಇನ್ನಷ್ಟು ದುಃಖವಾಗುತ್ತದೆ, ನಾವು ಮುನ್ನಡೆಯಲೇಬೇಕು ಎಂದರು. 

ಪುನೀತ್ ಗೆ ಕುಟುಂಬ ಇದೆ, ಪತ್ನಿ-ಮಕ್ಕಳಿದ್ದಾರೆ, ಈಗ ಅವರೂ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿಕೊಳ್ಳುತ್ತಾರೆ. ಇನ್ನು ಆಗಿರುವ ಘಟನೆಗೆ ಹಿಂದೆ ಹೋಗಲೇಬಾರದು. ಅದರಿಂದ ಪ್ರಯೋಜನ ಕೂಡ ಇಲ್ಲ, ಅಭಿಮಾನಿಗಳೂ ಅದೇ ರೀತಿ ಯೋಚನೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. 

ಆತನಿಗೆ ಅನಾರೋಗ್ಯ ಸಮಸ್ಯೆ ಯಾವುದೂ ಇರಲಿಲ್ಲ, ಇರುತ್ತಿದ್ದರೆ ಅವನು ಪವರ್ ಸ್ಟಾರ್ ಆಗುತ್ತಿರಲಿಲ್ಲ, ನಮಗೆಲ್ಲಾ ಧೈರ್ಯ ಕೊಡುತ್ತಿದ್ದ. ನನಗೆ ಎರಡು ಮೂರು ಸಾರಿ ಅನಾರೋಗ್ಯವಾಗಿದ್ದಾಗ ಅವನೇ ಧೈರ್ಯ ಕೊಟ್ಟಿದ್ದು. ಎರಡು ತಿಂಗಳ ಹಿಂದೆ ನನಗೆ ಹಾರ್ಟ್ ಪ್ರಾಬ್ಲಂ ಆಗಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೇಸ್ ಮೇಕರ್ ಹಾಕಿಸಿ ಚಿಕಿತ್ಸೆ ಕೊಡಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದ ಎಂದು ಹೇಳಿ ಗದ್ಗದಿತರಾದರು.

ಇಷ್ಟು ವರ್ಷ ಸಿನೆಮಾ ಸೇವೆ ಮಾಡಿಕೊಂಡು ಹೋಗಿರುವ ಅಪ್ಪುವಿನ ಸಿನಿಮಾಗಳೇ ನಮಗೆ ಶಕ್ತಿ. ನಮ್ಮ ಆಸ್ತಿ ಅದು, ಅದನ್ನು ನೋಡಿಕೊಂಡು ಹೋಗುತ್ತಿರಬೇಕಷ್ಟೆ. ಇನ್ನು ಆಗಿರುವ ಘಟನೆಯನ್ನು ಮೆಲುಕು ಹಾಕಿಕೊಂಡರೆ ನಾನು ಮತ್ತಷ್ಟು ಇಳಿದುಹೋಗುತ್ತೇನೆ, ನಾವೆಲ್ಲರೂ ಈಗ ಮೌನವಾಗಿದ್ದೇವೆ ಎಂದರು. 

ನಾವು ಎಲ್ಲ ಸಹೋದರರಂತೆ ಹೋಗಿ ಬರುತ್ತಾ ಮಾತನಾಡುತ್ತಾ ಇದ್ದೆವು. ಇತ್ತೀಚೆಗೆ ಕೊನೆಗೆ ನಾವು ಮೂವರೂ ಸೋದರರು ಒಟ್ಟು ಸೇರಿದ್ದು ನಿನ್ನ ಸನಿಹಕೆ ಚಿತ್ರದ ಪ್ರೀಮಿಯರ್ ಶೋನಲ್ಲಿ. ನಾವು ಮೂವರೂ ಒಟ್ಟು ಸೇರದ್ದೆ ತುಂಬ ದಿನವಾಗಿತ್ತು. ಅದುವೇ ನಾವು ಮೂವರೂ ಜೊತೆಯಲ್ಲಿ ನಿಂತುಕೊಂಡು ಮಾಧ್ಯಮಗಳಿಗೆ ಫೋಸ್ ಕೊಟ್ಟ ಕೊನೆಯ ಫೋಟೋ, ಇನ್ನೇನಿದ್ದರೂ ನಾನು ಮತ್ತು ಶಿವಣ್ಣ ಅಪ್ಪುನ ಫೋಟೋ ಹಿಡಿದುಕೊಂಡು ನಿಲ್ಲಬೇಕಷ್ಟೆ ಎಂದು ಬೇಸರದಿಂದ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com