ವರ್ಷಧಾರೆ ನಡುವೆಯೂ ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳ ದಂಡು: ಬಿಕ್ಕಿ ಬಿಕ್ಕಿ ಅತ್ತ ತಮಿಳು ನಟ ಸೂರ್ಯ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಆರು ದಿನಗಳಾದರೂ ಅಭಿಮಾನಿಗಳ ನೋವು, ಹತಾಶೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಂದು ಕೂಡಾ ಅಭಿಮಾನಿಗಳ ದಂಡೆ ಅಪ್ಪು ಸಮಾಧಿ ಬಳಿಗೆ ಹರಿದುಬಂದಿತ್ತು.
Published: 05th November 2021 07:19 PM | Last Updated: 05th November 2021 07:22 PM | A+A A-

ತಮಿಳು ನಟ ಸೂರ್ಯ , ಶಿವರಾಜ್ ಕುಮಾರ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಆರು ದಿನಗಳಾದರೂ ಅಭಿಮಾನಿಗಳ ನೋವು, ಹತಾಶೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಇಂದು ಕೂಡಾ ಅಭಿಮಾನಿಗಳ ದಂಡೆ ಅಪ್ಪು ಸಮಾಧಿ ಬಳಿಗೆ ಹರಿದುಬಂದಿತ್ತು. ಮಕ್ಕಳು, ವೃದ್ದರೂ, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಅಪ್ಪುಗೆ ಗೌರವ ಸಲ್ಲಿಸಿದರು.
ತಮಿಳಿನ ಸಿಂಗಂ ಖ್ಯಾತಿಯ ನಟ ಸೂರ್ಯ, ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ಅಪ್ಪು ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯ, ಡಾ. ರಾಜ್ ಕುಮಾರ್ ಅವರ ಕಾಲದಿಂದಲೂ ತಮ್ಮ ಅಪ್ಪು ಕುಟುಂಬದ ನಡುವೆ ಅನ್ಯೂನ್ಯದ ಸಂಬಂಧವಿದೆ. ಪುನೀತ್ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ನನಗೆ ನಾಲ್ಕು ತಿಂಗಳಿದ್ದಾಗ, ಅಪ್ಪುಗೆ ಏಳು ತಿಂಗಳು, ಡಾ. ರಾಜ್ ಕುಮಾರ್ ಅವರನ್ನು ನೋಡಿ ಬೆಳೆದಿದ್ದೇನೆ. ಅವರಂತೆ ಪುನೀತ್ ರಾಜ್ ಕುಮಾರ್ ಕೂಡಾ ಸಮಾಜ ಸೇವೆ ಮಾಡಿರುವುದನ್ನು ಕೇಳಿದ್ದೇನೆ. ಪುನೀತ್ ರಾಜ್ ಕುಮಾರ್ ಯಾವಾಗಲೂ ನಮ್ಮ ಹೃದಯಗಳಲ್ಲಿ ಸದಾ ಇರುತ್ತಾರೆ. ಯಾವಾಗಲೂ ನಗುತ್ತಲೇ ಇರುತ್ತಾರೆ ಎಂದು ಭಾವುಕರಾದರು.
ನಂತರ ಸಮಾಧಿಯಿಂದ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಸೂರ್ಯ, ಪುನೀತ್ ಪುತ್ನಿ ಹಾಗೂ ಮಕ್ಕಳಿಗೆ ಸಾಂತ್ವನದ ಮಾತುಗಳು ಹೇಳಿದರು.