ಪಟಾಕಿ ವಿಷಯವಾಗಿ ಜಗಳ ಹತ್ಯೆಯಲ್ಲಿ ಕೊನೆ: ತಂದೆ-ಮಗನ ಬಂಧನ

ಪಟಾಕಿ ಹೊಡೆಯುವ ವಿಷಯದಲ್ಲಿ ಜಗಳ ಉಂಟಾಗಿ ವ್ಯಕ್ತಿಯೋರ್ವನ ಹತ್ಯೆಯಲ್ಲಿ ಅದು ದುರಂತ ಅಂತ್ಯ ಕಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹತ್ಯೆ (ಸಾಂಕೇತಿಕ ಚಿತ್ರ)
ಹತ್ಯೆ (ಸಾಂಕೇತಿಕ ಚಿತ್ರ)

ಪಟಾಕಿ ಹೊಡೆಯುವ ವಿಷಯದಲ್ಲಿ ಜಗಳ ಉಂಟಾಗಿ ವ್ಯಕ್ತಿಯೋರ್ವನ ಹತ್ಯೆಯಲ್ಲಿ ಅದು ದುರಂತ ಅಂತ್ಯ ಕಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಂದೆ-ಮಗನನ್ನು ಬಂಧಿಸಿದ್ದಾರೆ.  ದೀಪಾವಳಿಯ ದಿನದಂದು ಬುಧವಾರ  ಪಟಾಕಿ ಹೊಡೆಯುತ್ತಿದ್ದಾಗ ತಂದೆ ಹಾಗೂ ಮಗ ವಿನಾಯಕ್ ಕಾಮತ್ (45) ನ್ನು ಹತ್ಯೆ ಮಾಡಿದ್ದಾರೆ ಎಂದು ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. 

ವಿನಾಯಕ್ ಕಾಮತ್ ಪತ್ನಿ ಅಮನ್ನಿ ಕಾಮತ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾವು ವಾಸಿಸುತ್ತಿರುವ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲೇ ಇರುವ ಕೃಷ್ಣಾನಂದ ಕಿಣಿ ಎಂಬ ವ್ಯಕ್ತಿ ಆತನ ಪುತ್ರ ಅವಿನಾಶ್ ಕಿಣಿ ಜೊತೆಗೂಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

"5 ವರ್ಷಗಳಿಂದ ನಾನು ಈ ಕಾಂಪ್ಲೆಕ್ಸ್ ನಲ್ಲಿ ನನ್ನ ಪತಿ ವಿನಾಯಕ್ ಕಾಮತ್, ಪುತ್ರ ಉತ್ತಮ್, ಅತ್ತೆ ವಿಜಯಲಕ್ಷ್ಮಿ ಅವರೊಂದಿಗೆ ವಾಸಿಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ ಮಂಗಳೂರು ಸಿಟಿ ಕಾರ್ಪೊರೇಷನ್ ನವರು ಕಾಂಪ್ಲೆಕ್ಸ್ ಎದುರು ಭಾಗದಲ್ಲಿದ್ದ ರಸ್ತೆಯನ್ನು ದುರಸ್ತಿ ಮಾಡಿದ್ದರು. ಈ ವೇಳೆ ಕೃಷ್ಣಾನಂದ ನನ್ನ ಪತಿಯ ಜೊತೆಗೆ ಜಗಳವಾಡಿದ್ದರು.

ಆಗಾಗ್ಗೇ ಈ ರೀತಿಯ ಘರ್ಷಣೆಗಳು ನಡೆಯುತ್ತಿತ್ತು. ಆದರೆ ಬುಧವಾರದಂದು ಕೃಷ್ಣಾನಂದ ಪಟಾಕಿ ಹೊಡೆಯುತ್ತಿದ್ದಾಗ ಆತ ಹಾಗೂ ಆತನ ಮಗ ಅವಿನಾಶ್ ನನ್ನ ಪತಿಯೊಂದಿಗೆ ಜಗಳವಾಡುತ್ತಿದ್ದರು. ಪಾರ್ಕಿಂಗ್ ಪ್ರದೇಶಕ್ಕೆ ಹೋಗುತ್ತಿದ್ದಂತೆಯೇ ಯಾರೋ ಚೀರಿದ್ದು ನನಗೆ ಕೇಳಿಸಿತು.ಕೃಷ್ಣಾನಂದ ನನ್ನ ಪತಿಗೆ ಇರಿಯುತ್ತಿದ್ದರು ಹಾಗೂ ಅವಿನಾಶ್ ನನ್ನ ಪತಿಗೆ ಬೆದರಿಕೆ ಹಾಕುತ್ತಿದ್ದದ್ದು ಕಂಡುಬಂದಿತು ಎಂದು ಮಹಿಳೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ ಇಬ್ಬರೂ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ಮುಂದುವರೆದು ಪಾರ್ಕಿಂಗ್ ಪ್ರದೇಶದಲ್ಲಿ ಪಟಾಕಿ ಹೊಡೆಯುವ ವಿಷಯವಾಗಿ ಇಬ್ಬರೂ ಜಗಳವಾಡಿದ್ದರು ಪರಿಣಾಮ ಅದು ವಿನಾಯಕ್ ನ್ನು ಕೃಷ್ಣಾನಂದ ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

ತಕ್ಷಣವೇ ವಿನಾಯಕ್ ನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಎರಡು ಗಂಟೆಗಳ ನಂತರ ಮೃತಪಟ್ಟಿದ್ದಾರೆ. ಆರೋಪಿ ಕೃಷ್ಣಾನಂದ (72) ನಿವೃತ್ತ ಬ್ಯಾಂಕ್ ಉದ್ಯೋಗಿ, ಅವಿನಾಶ್ (45) ಸಾಫ್ಟ್ ವೇರ್ ಇಂಜಿನಿಯರ್ ಇಬ್ಬರನ್ನೂ ಬಂಧಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com