ಕೋಲಾರ ಮಾರ್ಗದ ರೈಲುಗಳು ಪುನಾರಂಭ; ಕೆಐಎ ಹಾಲ್ಟ್ ನಿಲ್ದಾಣಕ್ಕೂ ಸಂಪರ್ಕ

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬಂಗಾರಪೇಟೆ, ಚೆನ್ನಪಟ್ಣಗಳಲ್ಲಿನ ಜನತೆಗೆ ರಿಲೀಫ್ ದೊರೆತಿದೆ. ನ.08 ರಿಂದ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರ ಪುನಾರಂಭಗೊಳ್ಳಲಿದೆ.
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ

ಬೆಂಗಳೂರು: ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬಂಗಾರಪೇಟೆ, ಚೆನ್ನಪಟ್ಣಗಳಲ್ಲಿನ ಜನತೆಗೆ ರಿಲೀಫ್ ದೊರೆತಿದ್ದು, ರೈಲ್ವೆ ಮಂಡಳಿ 8 ಡೇಮು (ಡಿಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳನ್ನು ಈ ಮಾರ್ಗಗಳಲ್ಲಿ ನ.08 ರಿಂದ ಪುನಾರಂಭ ಮಾಡಲು ನಿರ್ಧರಿಸಿದೆ. ಈ ಪೈಕಿ ಕೆಐಎ ಹಾಲ್ಟ್ ನಿಲ್ದಾಣಕ್ಕೂ 4 ರೈಲುಗಳ ಮೂಲಕ ಸಂಪರ್ಕ ಲಭ್ಯವಾಗಲಿದೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು,  ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ 18 ತಿಂಗಳ ಕಾಲ ಈ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಈ ರೈಲುಗಳು ಪುನಾರಂಭಗೊಳ್ಳುತ್ತಿವೆ.

ಡೆಮುಗಳು (8-ಕಾರ್ ಒನ್ಸ್) ಒಂದು ವಾರದಲ್ಲಿ 6 ದಿನಗಳಲ್ಲಿ ಭಾನುವಾರ ಹೊರತುಪಡಿಸಿ ಸಂಚರಿಸಲಿದೆ. ನ.08 ರಿಂದ ಬೆಂಗಳೂರು ಕಂಟೋನ್ಮೆಂಟ್-ಕೋಲಾರ ಮಾರ್ಗ, ನ.10 ರಿಂದ ಕೋಲಾರ-ಕಂಟೋನ್ಮೆಂಟ್ ಮಾರ್ಗ, ಚೆನ್ನಪಟ್ಣ- ಕೋಲಾರ ಮಾರ್ಗದಲ್ಲಿ ನ.11 ರಿಂದ. ಕೋಲಾರ-ಚೆನ್ನಪಟ್ಣ ಮಾರ್ಗದಲ್ಲಿ ನ.11 ರಿಂದ, ಬಂಗಾರಪೇಟೆ-ಕೋಲಾರ ಮಾರ್ಗದಲ್ಲಿ ನ.10 ರಿಂದ, ಕೋಲಾರ-ಬಂಗಾರಪೇಟೆ ಮಾರ್ಗದಲ್ಲಿ ನ.10 ರಿಂದ ಕೆಎಸ್ ಆರ್-ಕೋಲಾರ ಮಾರ್ಗದಲ್ಲಿ ನ.11 ರಿಂದ, ಕೋಲಾರ-ಕಂಟೋನ್ಮೆಂಟ್ ಮಾರ್ಗದಲ್ಲಿ ನ.11 ರಿಂದ ರೈಲುಗಳು ಪ್ರಯಾಣಿಸಲಿದೆ.

ಕೋಲಾರ-ಬಂಗಾರಪೇಟೆ ಹಾಗೂ ಕೋಲಾರ-ಬೆಂಗಳೂರು ನಡುವಿನ ರೈಲುಗಳು ಕೆಐಎ ಹಾಲ್ಟ್ ಸ್ಟೇಷನ್ ನಲ್ಲಿ ನಿಲ್ಲಲಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com