ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ: 'ಇನ್ಕ್ರೆಡಿಬಲ್ ಮಂಕಿ ಮ್ಯಾನ್' ಜ್ಯೋತಿ ರಾಜ್'ಗೆ ನೆರವು ನೀಡಲು ಸರ್ಕಾರ ಮುಂದು!

ಚಿತ್ರದುರ್ಗದಲ್ಲಿ ಕೃತಕ ಗೋಡೆ ನಿರ್ಮಿಸುವ ಇನ್ಕ್ರೆಡಿಬಲ್ ಮಂಕಿ ಮ್ಯಾನ್' ಜ್ಯೋತಿ ರಾಜ್' ಅವರ ಕನಸ್ಸನ್ನು ನನಸು ಮಾಡಲು ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಜ್ಯೋತಿ ರಾಜ್
ಜ್ಯೋತಿ ರಾಜ್

ಶಿವಮೊಗ್ಗ: ಚಿತ್ರದುರ್ಗದಲ್ಲಿ ಕೃತಕ ಗೋಡೆ ನಿರ್ಮಿಸುವ ಇನ್ಕ್ರೆಡಿಬಲ್ ಮಂಕಿ ಮ್ಯಾನ್' ಜ್ಯೋತಿ ರಾಜ್' ಅವರ ಕನಸ್ಸನ್ನು ನನಸು ಮಾಡಲು ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.

ಈ ಹಿಂದೆ ದಿ ನ್ಯೂ ಸಂಡೆ ಎಕ್ರ್'ಪ್ರೆಸ್  ಜ್ಯೋತಿ ರಾಜ್ ಅವರ ಕುರಿತಾಗಿ ವರದಿಯೊಂದನ್ನು ಪ್ರಕಟಿಸಿತ್ತು. ವರದಿಯಲ್ಲಿ ಚಿತ್ರದುರ್ಗದಲ್ಲಿ ಕೃತಕ ಗೋಡೆ ನಿರ್ಮಿಸುವ ಜ್ಯೋತಿರಾಜ್ ಅವರ ಕನಸ್ಸನ್ನು ತಿಳಿಸಲಾಗಿತ್ತು.

ಸರ್ಕಾರ ಭೂಮಿಯೊಂದನ್ನು 20 ವರ್ಷಗಳ ಕಾಲ ಗುತ್ತಿಗೆ ನೀಡಿದರೆ, ಅಲ್ಲಿ ಕೃತಕ ಗೋಡೆಯನ್ನು ನಿರ್ಮಿಸಿ, ರಾಷ್ಟ್ರೀಯ ಮತ್ತು ಒಲಿಂಪಿಕ್ ಕ್ರೀಡಾಕೂಟಗಳಿಗೆ ಯುವಕರಿಗೆ ತರಬೇತಿ ನೀಡುತ್ತೇನೆಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಕಳೆದ 15 ವರ್ಷಗಳಿಂದ ಚಿತ್ರದುರ್ಗ ಕೋಟೆಯ ಗೋಡೆಗಳನ್ನು ನೋಡಿ, ಹತ್ತಿ ಬೆಳೆದಿದ್ದೇನೆ, ನಾನು ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಬರುವ ಜನರನ್ನು ಇಲ್ಲಿ ರಂಜಿಸುತ್ತೇನೆ. ಚಿತ್ರದುರ್ಗದಲ್ಲಿ ಗೋಡೆ ನಿರ್ಮಾಣವಾದರೆ ಜಿಲ್ಲೆ ಜನಮನ ಸೆಳೆಯಲಿದ್ದು, ಯುವಕರು ಇಲ್ಲಿ ತರಬೇತಿ ಪಡೆಯಬಹುದು ಎಂದು ಹೇಳಿದ್ದರು.

ವರದಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅವರು, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮನ್ನು ನಮ್ಮ ಕಚೇರಿಗೆ ಆಹ್ವಾನಿಸಲು ನಮಗೆ ಸಂತೋಷವಾಗುತ್ತಿದೆ. ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com