ಮಗು ಅಪಹರಣ ಪ್ರಕರಣ: ವಿಚಾರಣೆಗೆ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆತಂಕಗೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆತಂಕಗೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ನಡೆದಿದೆ.

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಸುಮಿತಾ (20) ಎಂಬ ಯುವತಿ 10 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವನ್ನು ಗೀತಾ ಹಾಗೂ ಪುಷ್ಪ ಎಂಬುವವರಿಗೆ ನೀಡಿದ್ದರು. ಹೆಣ್ಣು ಮಗು ಎಂಬ ಕಾರಣಕ್ಕೆ ಗೀತಾ ಅವರಿಗೆ ಮಗುವನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ.

ಆದರೆ. ಗೀತಾ ಅವರು ಪುಷ್ಪ ಅವರ ಜೊತೆಗೆ ಸೇರಿಕೊಂಡು ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಇದನ್ನು ಅರಿತ ಸುಮಿತಾ ಅವರು ತಮ್ಮ ಮಗುವನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ. ಆದರೆ, ಗೀತಾ ಮಗುವನ್ನು ಹಿಂತಿರುಗಿಸದ ಕಾರಣ ಸುಮಿತಾ ಅವರು ಪೊಲೀಸ್ ಠಾಣೆ ಗೆ ದೂರು ನೀಡಿದ್ದರು.

ಪೊಲೀಸರು ಪುಷ್ಪಾ ಅವರನ್ನು ಠಾಣೆಗೆ ಕರೆಸಿ ನಾಲ್ಕು ದಿನಗಳಲ್ಲಿ ಮಗುವನ್ನು ಕೊಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ, ಮಗು ಪತ್ತೆಯಾಗಿರಲಿಲ್ಲ. ಇನ್ನು ಪೊಲೀಸರು ತಮ್ಮನ್ನು ಬಂಧಿಸಬಹುದು, ಇಲ್ಲವೇ ಕಿರುಕುಳ ನೀಡಬಹುದು ಎಂಬ ಭಯದಿಂದ ಮನೆಯಲ್ಲಿದ್ದ ಎಲ್ಲಾ ಐವರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

ಇಂತಹ ನಿರ್ಧಾರಕ್ಕೆ ಬರುವ ಬದಲು ಪೊಲೀಸರಿಗೆ ಪರಿಸ್ಥಿತಿ ವಿವರಿಸಿ ವಿಚಾರಣೆಗೆ ಸಹಕರಿಸಿದ್ದರೆ ಸಮಸ್ಯೆಯನ್ನು ಅವರೇ ಬಗೆಹರಿಸುತ್ತಿದ್ದರು. ಮಗುವನ್ನು ಪತ್ತೆ ಮಾಡುತ್ತಿದ್ದರು. ಎಂದು ಐಜಿಪಿ ಎಂ.ಚಂದ್ರಶೇಖರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com