ದಾಂಡೇಲಿ ಕ್ರೊಕೋಡೈಲ್ ರಾಂಪ್ ಶೀಘ್ರವೇ ಪ್ರವಾಸಿಗರಿಗೆ ಮುಕ್ತ!

ಕರ್ನಾಟಕದ ದಾಂಡೇಲಿಯ ಕಾಳಿ ನದಿ ಬಳಿಯಲ್ಲಿ ನಿರ್ಮಿಸಲಾಗಿರುವ ಕ್ರೊಕೋಡೈಲ್ ವ್ಯೂ ರಾಂಪ್ ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ.  
ಕ್ರೊಕೋಡೈಲ್ ವ್ಯೂ ರ‍್ಯಾಂಪ್‌
ಕ್ರೊಕೋಡೈಲ್ ವ್ಯೂ ರ‍್ಯಾಂಪ್‌

ಹುಬ್ಬಳ್ಳಿ:  ಕರ್ನಾಟಕದ ದಾಂಡೇಲಿಯ ಕಾಳಿ ನದಿ ಬಳಿಯಲ್ಲಿ ನಿರ್ಮಿಸಲಾಗಿರುವ ಕ್ರೊಕೋಡೈಲ್ ವ್ಯೂ ರಾಂಪ್ ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ.  

ದಾಂಡೇಲಿ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಪಾರ್ಕ್ ವಿವಿಧ ಸೌಲಭ್ಯಗಳೊಂದಿಗೆ ಸಿದ್ಧಗೊಳ್ಳುತ್ತಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಪಡಿಸುತ್ತಿರುವ ಪಾರ್ಕ್ ನಲ್ಲಿ  ಹಲವು ಸೌಕರ್ಯಗಳಿದ್ದು, ಮೊಸಳೆ ಸೇರಿದಂತೆ ಇತರ ಕಾಡು ಪ್ರಾಣಿಗಳ ಪ್ರತಿಮೆ ನಿರ್ಮಾಣ ಮಾಡಲಾಗಿದೆ,  ಪಾರ್ಕ್ ನಲ್ಲಿ ಕುಳಿತುಕೊಳ್ಳಲು ಸೌಲಭ್ಯ ಹಾಗೂ ಮಕ್ಕಳಿಗೆ ಶೌಚಾಲಯ ಸೇರಿದಂತೆ ಹಲವು ಸವಲತ್ತುಗಳನ್ನು ನಿರ್ಮಿಸಲಾಗಿದೆ.

ಉದ್ಯಾನವನದ ಕೆಲಸ ಪೂರ್ಣಗೊಂಡಿದ್ದು. ಕ್ರೊಕೋಡೈಲ್ ವ್ಯೂ ರ‍್ಯಾಂಪ್‌ನ ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿವೆ. ನಾವು ಶೀಘ್ರದಲ್ಲೇ ಕೆಲಸವನ್ನು ಪೂರ್ಣಗೊಳಿಸುತ್ತೇವೆ ಹಾಗೂ ಪ್ರವಾಸಿಗರಿಗೆ ರ‍್ಯಾಂಪ್‌ನಲ್ಲಿ ನಡೆಯಲು ಅನುವು ಮಾಡಿಕೊಡುತ್ತೇವೆ  ಎಂದು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರೊಕೋಡೈಲ್ ವ್ಯೂ ರ್ಯಾಂಪ್ ಅನ್ನು ಇಳಿಜಾರಿನಲ್ಲಿ ನಿರ್ಮಾಣಮಾಡಲಾಗಿದೆ, ಇಲ್ಲಿ ಕಲ್ಲು ಬಂಡೆಗಳಿದೆ, ಹೀಗಾಗಿ ಇಲ್ಲಿ ನೋಡಲು ಬರುವ ಪ್ರವಾಸಿಗರು ಹತ್ತಿರದಿಂದ ಇದನ್ನು ವೀಕ್ಷಿಸಬಹುದಾಗಿದೆ.

ಲಾಕ್ ಡೌನ್ ಕಾರಣದಿಂದಾಗಿ ಈ ಪ್ರಾಜೆಕ್ಟ್ ವಿಳಂಬವಾಗಿದ್ದು, ಆದಷ್ಟು ಶೀಘ್ರವೇ ಉಳಿದಿರುವ ಕೆಲಸ ಮುಗಿಸಿ ಪ್ರವಾಸಿಗರಿಗೆ ನೋಡಲು ಅನುಕೂಲ ಮಾಡಿಕೊಡಬೇಕೆಂದು ಪ್ರವಾಸೋದ್ಯಮ ಇಲಾಖೆಗೆ ಒತ್ತಾಯ ಮಾಡಲಾಗಿದೆ.  ಇನ್ನೂ ಅಧಿಕೃತವಾಗಿ ಉದ್ಘಾಟಿಸದ ಕಾರಣ ಪ್ರವಾಸಿಗರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ದಾಂಡೇಲಿಯ ಪ್ರವಾಸೋದ್ಯಮ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com