ನೈಸ್ ರೋಡ್ ನಲ್ಲಿ ಇನ್ನು ಮುಂದೆ ಫಾಸ್ಟ್‌ಟ್ಯಾಗ್: ಸರತಿ ಸಾಲಿಗೆ ಫುಲ್ ಸ್ಟಾಪ್!

ನವೆಂಬರ್ ಎರಡನೇ ವಾರದಿಂದ, ಪ್ರಯಾಣಿಕರು ತಮ್ಮ ಫಾಸ್ಟ್‌ಟ್ಯಾಗ್ ಕಾರ್ಡ್ ಅನ್ನು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ರಸ್ತೆಯಲ್ಲಿ ಬಳಸಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನವೆಂಬರ್ ಎರಡನೇ ವಾರದಿಂದ, ಪ್ರಯಾಣಿಕರು ತಮ್ಮ ಫಾಸ್ಟ್‌ಟ್ಯಾಗ್ ಕಾರ್ಡ್ ಅನ್ನು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ರಸ್ತೆಯಲ್ಲಿ ಬಳಸಬಹುದಾಗಿದೆ.

ಅತ್ಯಂತ ಜನನಿಬಿಡ ರಸ್ತೆಗಳಲ್ಲೊಂದಾದ ನೈಸ್ ರಸ್ತೆಯಲ್ಲಿ ಇದುವರೆಗೂ ಫಾಸ್ಟ್ ಟ್ಯಾಗ್ ಸೌಲಭ್ಯವಿರಲಲ್ಲ,   ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳಂತೆ ಎಲ್ಲಾ ವಾಹನಗಳಿಗೆ ಅಧಿಕೃತವಾಗಿ ಫಾಸ್ಟ್ ಟ್ಯಾಗ್ ಬಳಕೆ ಮಾಡಲು ನೈಸ್ ರಸ್ತೆ ಲಿಮಿಟೆಡ್‌ನ ಅಧಿಕಾರಿಗಳು ಇದೀಗ ತಾಂತ್ರಿಕ ದೋಷಗಳನ್ನು ಸರಿ ಪಡಿಸುತ್ತಿದ್ದಾರೆ.

ಫಾಸ್ಟ್‌ಟ್ಯಾಗ್‌ನ ಇಲ್ಲದ ಕಾರಣ ಟೋಲ್ ಪ್ಲಾಜಾಗಳಲ್ಲಿ ಉದ್ದನೆಯ ಸರತಿ ಸಾಲುಗಳಿಗೆ ಕಾರಣವಾಗುತ್ತದೆ, ಏಕೆಂದರೆ ಪಾಸ್ ಬಳಸಲು ಹಣವನ್ನು ಮಾತ್ರ ಸ್ವೀಕರಿಸಲಾಗುತ್ತಿತ್ತು ಎಂದು ನೈಸ್ ಸಂಸ್ಥೆ  ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ದರಗಳು ಪ್ರಸ್ತುತ ಇರುವಂತೆಯೇ ಇರುತ್ತವೆ. ಪಾವತಿಯ ವಿಧಾನವು ಈಗ ನಗದು ಅಥವಾ ಫಾಸ್ಟ್ ಟ್ಯಾಗ್  ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ  ಸೆಪ್ಟೆಂಬರ್ 30 ರಂದು ಎಂಒಯುಗೆ ಸಹಿ ಹಾಕಲಾಯಿತು.

ಮಾರ್ಚ್‌ನಲ್ಲಿ ನೈಸ್ ರಸ್ತೆಗೆ ಫಾಸ್ಟ್‌ಟ್ಯಾಗ್ ಅನ್ನು ಪರಿಚಯಿಸಬೇಕಾಗಿತ್ತು, ಆದರೆ ಲೋಕೋಪಯೋಗಿ ಇಲಾಖೆ ಪ್ರಕಾರ, ಕಂಪನಿಯು ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಅದನ್ನು ಕಾರ್ಯಗತಗೊಳಿಸಲಾಗಿಲ್ಲ.

ಕೌನ್ಸಿಲ್ ಸಭೆಯಲ್ಲಿ ಪಿಡಬ್ಲ್ಯುಡಿ ಸಚಿವ ಗೋವಿಂದ್ ಕಾರಜೋಳ ಕೂಡ ಇದೇ ಹೇಳಿಕೆ ನೀಡಿದ್ದರು. ರಾಜ್ಯ ಮತ್ತು ಕೇಂದ್ರದ ನಡುವಿನ ಸಮನ್ವಯ ಸಮಸ್ಯೆಗಳಿಂದಾಗಿ ಈ ಹಿಂದೆ ಸಮಸ್ಯೆ ಉಂಟಾಗಿತ್ತು ಎಂದು ನೈಸ್ ಲಿಮಿಟೆಡ್‌ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದು ಸರ್ಕಾರದ ಯೋಜನೆಯಾಗಿರುವುದರಿಂದ ಇನ್ನೂ ಹಲವು ವಿವರಗಳನ್ನು ಸರಿಪಡಿಸಬೇಕಾಗಿದೆ.  ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸಿದ ಹಣವು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ) ವ್ಯವಸ್ಥೆಯ ಮೂಲಕ ಕಂಪನಿಗೆ ನೀಡಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com