ರಾಜ್ಯದಲ್ಲಿ ಬಿಟಿ ಹತ್ತಿ, ಬಿಟಿ ಜೋಳಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿ ವಿರೋಧ

ಬಿಟಿ ಹತ್ತಿ ಮತ್ತು ಬಿಟಿ ಜೋಳ ಬೆಳೆಯಲು ಅನುಮತಿ ನಿರಾಕರಿಸುವಂತೆ ಕೋರಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಟಿ ಹತ್ತಿ ಮತ್ತು ಬಿಟಿ ಜೋಳ ಬೆಳೆಯಲು ಅನುಮತಿ ನಿರಾಕರಿಸುವಂತೆ ಕೋರಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದೆ. 

ಮಾರ್ಪಡಿಸಿದ ತಳಿಯ ಬೆಳೆಗಳ ಕೃಷಿಯನ್ನು ಜೀವವೈವಿಧ್ಯ ಮಂಡಳಿ ಬಲವಾಗಿ ಖಂಡಿಸಿದೆ ಮತ್ತು ಇದು ಪ್ರಾಣಿಗಳ ಆರೋಗ್ಯ ಹಾಗೂ ಮಣ್ಣಿನ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಸ್ಥಳೀಯ ಬೆಳೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ದೂರಿದೆ.

ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಮಂಗಳವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಬಿಟಿ ಕಾಟನ್ ಮತ್ತು ಬಿಟಿ ಕಾರ್ನ್ ಕುರಿತು ಸಾರ್ವಜನಿಕ ಅಭಿಪ್ರಾಯ ಪಡೆಯುವ ಕಾರ್ಯವನ್ನು ಮಂಡಳಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಗತಿಪರ ಮತ್ತು ಸಾಂಪ್ರದಾಯಿಕ ರೈತರು, ಪರಿಸರವಾದಿಗಳು, ರೈತರು ಮತ್ತು ಜಾನುವಾರುಗಳೊಂದಿಗೆ ಕೆಲಸ ಮಾಡುವ ಸಂಸ್ಥೆಗಳ ಜತೆ ಚರ್ಚೆ ಮತ್ತು ಪ್ರತಿಕ್ರಿಯೆಗಳ ನಂತರ ಮಾರ್ಪಡಿಸಿದ ತಳಿಯ ಬೆಳೆಗಳು ಹಾನಿಕಾರಕವೆಂದು ಕಂಡುಬಂದಿದೆ ಎಂದು ಆಶೀಸರ ಅವರು ತಿಳಿಸಿದ್ದಾರೆ.

ಕೆಲವು ಪ್ಯಾಚ್‌ಗಳಲ್ಲಿ ಬಿಟಿ ಕಾಟನ್ ಬೆಳೆಯುವುದರಿಂದ ಸಾಂಪ್ರದಾಯಿಕ ಹತ್ತಿ ತಳಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಮಂಡಳಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com