ಆಂಬ್ಯುಲೆನ್ಸ್ ಟೆಂಡರ್ ವಿಳಂಬ: ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ
ರಾಜ್ಯದಲ್ಲಿ ಅತ್ಯಾಧುನಿಕ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಗೆ ಟೆಂಡರ್ ಕರೆಯಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Published: 11th November 2021 03:28 PM | Last Updated: 11th November 2021 04:35 PM | A+A A-

ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ಅತ್ಯಾಧುನಿಕ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಗೆ ಟೆಂಡರ್ ಕರೆಯಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಹಿತಾದೃಷ್ಟಿಯಿಂದ ಇದು ಅತ್ಯಂತ ಪ್ರಮುಖವಾಗಿದ್ದರೂ ಜಿಪಿಎಸ್ ವ್ಯವಸ್ಥೆಯೊಂದಿಗೆ ತುರ್ತು ವೈದ್ಯಕೀಯ ಆಂಬ್ಯುಲೆನ್ಸ್ ಒದಗಿಸುವಲ್ಲಿ ರಾಜ್ಯ ಸರ್ಕಾರದ ಪ್ರಕ್ರಿಯೆಯನ್ನು ನಾವು ಪ್ರಶಂಸಿಸಲು ಸಾಧ್ಯವಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಾಸ್ಥಿ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಪ್ರತಿಕ್ರಿಯಿಸಿಲು 10 ದಿನಗಳ ಸಮಯಾವಕಾಶವನ್ನು ನೀಡಿದೆ.
ಕ್ಯಾಬಿನೆಟ್‌ನಿಂದ ಹೊಸ ಟೆಂಡರ್‌ಗೆ ಅನುಮೋದನೆಗಾಗಿ ರಾಜ್ಯಕ್ಕೆ ಅನುಮತಿ ನೀಡಿಕೆಯನ್ನು ಆಗಸ್ಟ್ 31, 2021 ರ ವೀಡಿಯೊ ಆದೇಶದಲ್ಲಿ ನ್ಯಾಯಾಲಯವು ಗಮನಿಸಿದೆ. ಆದಾಗ್ಯೂ, ಏಕೆ ಈ ವಿಚಾರ ಅನುಮೋದನೆಗಾಗಿ ಸಂಪುಟದ ಮುಂದೆ ಬರಲಿಲ್ಲ ಎಂಬುದನ್ನು ಹೆಚ್ಚುವರಿ ಸರ್ಕಾರದ ವಕೀಲರು ವಿವರಿಸಲಿಲ್ಲ. ಈ ವಿಚಾರದಲ್ಲಿ 10 ದಿನಗಳ ಕಾಲಾವಕಾಶವನ್ನು ಅವರು ಕೇಳಿದರು.