ಬಿಟ್ ಕಾಯಿನ್ ಹಗರಣ: ಪ್ರಧಾನಿಗೆ ಅನಾಮಧೇಯ ಪತ್ರ

ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ಪತ್ರವೊಂದು ಪ್ರಧಾನಮಂತ್ರಿಗಳ ಕಚೇರಿ ತಲುಪಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ಪತ್ರವೊಂದು ಪ್ರಧಾನಮಂತ್ರಿಗಳ ಕಚೇರಿ ತಲುಪಿದೆ.

ಬೆಂಗಳೂರು ಸೇರಿದಂತೆ ಅಂತಾರಾಷ್ಟ್ರೀಯ ವಂಚಕ ಗ್ಯಾಂಗ್ ಜೊತೆಗೆ ಸರ್ಕಾರದ ಆಡಳಿತ ಯಂತ್ರದ ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದುಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಕೆಲವು ಪ್ರಮುಖ ರಾಜಕಾರಣಿಗಳ ವಿರುದ್ಧ ವ್ಯಾಪಕವಾದ ಆರೋಪಗಳನ್ನು ಮಾಡಿದ್ದು ಸಹಿ ಇಲ್ಲದ ಪತ್ರದಲ್ಲಿ, ಪ್ರಧಾನಿ ಕಾರ್ಯಾಲಯ,  ರಾಷ್ಟ್ರೀಯ ಭದ್ರತಾ ಸಲಹೆಗಾರ, ಜಾರಿ ನಿರ್ದೇಶನಾಲಯ ಮತ್ತು ಗುಪ್ತಚರ ಬ್ಯೂರೋ, ಗೆ ವಿಳಾಸ ಹಾಕಲಾಗಿದೆ.

ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ನಡೆಸಿದ ಭ್ರಷ್ಟಾಚಾರ ಮತ್ತು ಬಿಟ್‌ಕಾಯಿನ್ ಹಗರಣದಲ್ಲಿ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ  ಎಂದು ಆರೋಪಿಸಲಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕುಚೇಷ್ಟೆ ನಡೆಸಿವೆ, ಆರೋಪದಲ್ಲಿ ಸತ್ಯವಿದ್ದಿದ್ದರೇ  ಸಹಿ ಯಾಕೆ ಮಾಡಲಿಲ್ಲ, ಇದರ ಸತ್ಯಾಸತ್ಯತೆ ಇಲ್ಲೇ ತಿಳಿಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಶ್ರೀಕೃಷ್ಣನೊಂದಿಗೆ ಯಾವುದೇ ಬಿಟ್‌ಕಾಯಿನ್‌ ಹಗರಣ ಕಂಡುಬಂದಿಲ್ಲ.  ಬಿಟ್‌ಕಾಯಿನ್ ಎಕ್ಸ್‌ಚೇಂಜ್‌ಗಳು ಕೆವೈಸಿ ಮಾನದಂಡಗಳನ್ನು ನಿರ್ವಹಿಸಿಲ್ಲ ಎಂದು ನಗರ ಪೊಲೀಸರು ಮತ್ತು ಇಡಿ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com