ಬೆಂಗಳೂರು: ಹಾಡಹಗಲೇ ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷರ ಬರ್ಬರ ಹತ್ಯೆ
ರಾಜಧಾನಿ ಬೆಂಗಳೂರಿನ ನಾಗವಾರ ಬಳಿ ಶನಿವಾರ ಹಾಡಹಗಲೇ ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷರ ಬರ್ಬರ ಹತ್ಯೆ ನಡೆದಿದೆ. ಹಂತಕರ ಗ್ಯಾಂಗೊಂದು ಕಾಫಿ ಡೇ ಸಮೀಪ ವ್ಯಕ್ತಿಯ ಮೇಲೆ...
Published: 13th November 2021 03:46 PM | Last Updated: 13th November 2021 03:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗವಾರ ಬಳಿ ಶನಿವಾರ ಹಾಡಹಗಲೇ ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷರ ಬರ್ಬರ ಹತ್ಯೆ ನಡೆದಿದೆ. ಹಂತಕರ ಗ್ಯಾಂಗೊಂದು ಕಾಫಿ ಡೇ ಸಮೀಪ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದ್ದು, ಮಾರಕಾಸ್ತ್ರಗಳೊಂದಿಗೆ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾರೆ.
ಹತ್ಯೆಯಾದ ವ್ಯಕ್ತಿ ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷ ಶ್ರೀಧರ್ ಎಂದು ತಿಳಿದು ಬಂದಿದೆ.
ನಾಲ್ವರು ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದು, ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಗೊತ್ತಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಹೆಣ್ಣೂರು ಮತ್ತು ಕೆಜಿ ಹಳ್ಳಿ ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿದ್ದ ಮೃತ ಶ್ರೀಧರ್ ಮೇಲೆ ಹಲ್ಲೆ ನಡೆಸಲಾಗಿದೆ. ಭ್ರಷ್ಟಾಚಾರ ಮತ್ತು ಹ್ಯೂಮನ್ ರೈಟ್ಸ್ ಎಂಬ ಸಂಘ ಸಂಸ್ಥೆಯ ಉಪಾಧ್ಯಕ್ಷ ಆಗಿದ್ದ ಶ್ರೀಧರ್ ಮೇಲೆ ಹಲ್ಲೆ ನಡೆದಿದೆ ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಅವರು ಹೇಳಿದ್ದಾರೆ.
ಇಂದು ಹೆಣ್ಣೂರಿನಿಂದ ನಾಗವಾರ ಕಡೆಗೆ ತಮ್ಮ ಇನ್ನೋವಾ ಕಾರಿನಲ್ಲಿ ಹೋಗ್ತಿದ್ದ ಶ್ರೀಧರ್ ಮೇಲೆ ಕಾರು ಅಡ್ಡಗಟ್ಟಿದ ನಾಲ್ವರು ಹಲ್ಲೆ ನಡೆಸಿದ್ದಾರೆ. ಕಾರನ್ನು ಅಲ್ಲಿಯೇ ಬಿಟ್ಟು ವಿರುದ್ಧ ರಸ್ತೆಗೆ ಓಡಿ ಬಂದಿದ್ದ ಶ್ರೀಧರ್ ಅವರನ್ನು ಹಿಂಬಾಲಿಸಿ ಹತ್ಯೆ ಮಾಡಲಾಗಿದೆ. ಹಂತಕರಿಗಾಗಿ ಈಗಾಗಲೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.