ದ್ವಿತೀಯ ಪಿಯುಸಿ ಮಧ್ಯಾವಧಿ ಪರೀಕ್ಷೆ ನ.29 ರಿಂದ ಡಿ.10 ರವರೆಗೆ: ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ
ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಮಧ್ಯ ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ ಇದೇ ತಿಂಗಳ 29ರಿಂದ ಡಿಸೆಂಬರ್ 10ರವರೆಗೆ ನಡೆಸಲು ತೀರ್ಮಾನಿಸಿ ವೇಳಾಪಟ್ಟಿ ಪ್ರಕಟಿಸಿದೆ.
Published: 13th November 2021 10:46 AM | Last Updated: 13th November 2021 01:55 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಮಧ್ಯ ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ ಇದೇ ತಿಂಗಳ 29ರಿಂದ ಡಿಸೆಂಬರ್ 10ರವರೆಗೆ ನಡೆಸಲು ತೀರ್ಮಾನಿಸಿ ವೇಳಾಪಟ್ಟಿ ಪ್ರಕಟಿಸಿದೆ.
ನವೆಂಬರ್ 29ರಂದು ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರವರೆಗೆ ಭಾಷಾ ಪರೀಕ್ಷೆ ಕನ್ನಡ, ಅಪರಾಹ್ನ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್ ಮತ್ತು ಫ್ರೆಂಚ್ ಪರೀಕ್ಷೆ, 30ರಂದು ಇಂಗ್ಲಿಷ್, 1ರಂದು ಇತಿಹಾಸ ಮತ್ತು ಭೌತಶಾಸ್ತ್ರ, 2ರಂದು ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ, 3ರಂದು ರಾಜಕೀಯ ವಿಜ್ಞಾನ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಭೂಗರ್ಭಶಾಸ್ತ್ರ, ಡಿಸೆಂಬರ್ 6ರಂದು ಸಮಾಜಶಾಸ್ತ್ರ ಮತ್ತು ಗಣಿತ, 7ರಂದು ಅಕೌಂಟೆನ್ಸಿ, ಎಜುಕೇಶನ್ ಮತ್ತು ಗೃಹ ವಿಜ್ಞಾನ, 8ರಂದು ಬ್ಯುಸಿನೆಸ್ ಸ್ಟಡೀಸ್, ಲಾಜಿಕ್, 9ರಂದು ಭೂಗರ್ಭಶಾಸ್ತ್ರ, ಮನಃಶಾಸ್ತ್ರ, 10ರಂದು ಹಿಂದಿ ಪರೀಕ್ಷೆ ನಡೆಯಲಿದೆ.
ಅಪರಾಹ್ನ ವಿವಿಧ ಪರೀಕ್ಷೆಗಳು ನಡೆಯಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ http://pue.kar.nic.inನ್ನು ಸಂಪರ್ಕಿಸಬಹುದು.