ನಗರದ 11 ವಾರ್ಡ್ ಗಳಲ್ಲಿ ವಾರ್ಡ್ ಸಮಿತಿ ಸಭೆಗಳೇ ನಡೆದಿಲ್ಲ!

ನಗರದ 11 ವಾರ್ಡ್‌ಗಳಲ್ಲಿ ಇದೂವರೆಗೆ ವಾರ್ಡ್ ಸಮಿತಿ ಸಭೆ ನಡೆದಿಲ್ಲ ಎಂದು ಜನಾಗ್ರಹ ನಡೆಸಿದ ಸಮೀಕ್ಷೆ ಕುರಿತು ಶನಿವಾರ ನಡೆದ ವರ್ಚುವಲ್ ವಾರ್ಡ್ ಸಮಿತಿ ಕಾರ್ಯಾಗಾರದಲ್ಲಿ ತಿಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ 11 ವಾರ್ಡ್‌ಗಳಲ್ಲಿ ಇದೂವರೆಗೆ ವಾರ್ಡ್ ಸಮಿತಿ ಸಭೆ ನಡೆದಿಲ್ಲ ಎಂದು ಜನಾಗ್ರಹ ನಡೆಸಿದ ಸಮೀಕ್ಷೆ ಕುರಿತು ಶನಿವಾರ ನಡೆದ ವರ್ಚುವಲ್ ವಾರ್ಡ್ ಸಮಿತಿ ಕಾರ್ಯಾಗಾರದಲ್ಲಿ ತಿಳಿಸಲಾಗಿದೆ.

ತಮ್ಮ ವಾರ್ಡ್‌ಗಳಲ್ಲಿನ ಪರಿಸ್ಥಿತಿಗಳ ಸುಧಾರಿಸಲು ಏನು ಮಾಡಬೇಕೆಂಬುದರ ಕುರಿತು ಚರ್ಚಿಸಲು ನಿನ್ನೆ ನಡೆಸಲಾದ ಕಾರ್ಯಾಗಾರದಲ್ಲಿ 400 ಕ್ಕೂ ಹೆಚ್ಚು ನಿವಾಸಿಗಳು ಮತ್ತು ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿಯೊಂದು ವಾರ್ಡ್ ಸಮಿತಿಗೆ ನೀಡಲಾದ ತಲಾ ರೂ.60 ಲಕ್ಷ ಅನುದಾನವನ್ನು ಹೇಗೆ ಬಳಸಬಹುದು ಎನ್ನುವ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಒದಗಿಸಲಾಯಿತು. ವಾರ್ಡ್ ಸಮಿತಿಯಲ್ಲಿ ಭಾಗವಹಿಸಿದ ಅನುಭವಗಳನ್ನು ನಾಗರಿಕರು ಹಂಚಿಕೊಂಡರು.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ‘ನಾಗರಿಕರ ಸಹಭಾಗಿತ್ವ ದಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಬಿಬಿಎಂಪಿಯು ಪ್ರತಿ ವಾರ್ಡ್‌ಗೆ ರೂ.60 ಲಕ್ಷ ಅನುದಾನ ನೀಡಿದೆ. ಇದನ್ನು ರಸ್ತೆ ಗುಂಡಿಗಳನ್ನು ಮುಚ್ಚಲು, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮತ್ತು ಕೊಳವೆಬಾವಿಗಳ ನಿರ್ಮಾಣಕ್ಕೆ ಬಳಸಲಾಗಿದೆ’ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com