ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ: ಕೃಷಿ ಸಚಿವ ಬಿ.ಸಿ.ಪಾಟೀಲ್

ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮ‌ದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾನುವಾರ ರೈತರನ್ನು ಕೊಂಡಾಡಿದ್ದಾರೆ.
ಹಿರೇಕೆರೂರಿನಲ್ಲಿ ಸಚಿವ ಬಿಸಿ.ಪಾಟೀಲ್ ಹಾಗೂ ನಟ ದರ್ಶನ್
ಹಿರೇಕೆರೂರಿನಲ್ಲಿ ಸಚಿವ ಬಿಸಿ.ಪಾಟೀಲ್ ಹಾಗೂ ನಟ ದರ್ಶನ್

ಬೆಂಗಳೂರು: ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮ‌ದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾನುವಾರ ರೈತರನ್ನು ಕೊಂಡಾಡಿದ್ದಾರೆ.

ರೈತರಿಗೊಂದು ದಿನ ಕಾರ್ಯಕ್ರಮದ ಸಂದರ್ಭ ಸಚಿವ ಬಿ.ಸಿ.ಪಾಟೀಲ್ ಅವರು ರೈತರೊಂದಿಗೆ ಕಾಲ ಕಳೆಯುತ್ತಿದ್ದು, ಇದೇ ವೇಳೆ ತಮ್ಮ ಜನ್ಮದಿನವನ್ನೂ ಆಚರಿಸಿಕೊಂಡಿದ್ದಾರೆ.

ರೈತರೊಂದಿಗೊಂದು ದಿನ' ಕಾರ್ಯಕ್ರಮದ ನಿಮಿತ್ತ  ಹಿರೇಕೆರೂರಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಅವರನ್ನು ಕ್ಷೇತ್ರದ ಜನರು ಸಂತಸದಿಂದ ಸ್ವಾಗತಿಸಿದರು.

ಬಳಿಕ ಹಿರೆಕೆರೂರಿನ ಸ್ವಗೃಹದಲ್ಲಿ, ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವ ಮೂಲಕ ಬಿಸಿ ಪಾಟೀಲ್ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ನಂತರ ರೈತರನ್ನು ಕೊಂಡಾಡಿದ ಅವರು, ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮ‌ದೈವ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com