ಐಟಿ ಸಚಿವ ಡಾ. ಅಶ್ವತ್ಥ ನಾರಾಯಣ (ಚಿತ್ರ ಕೃಪೆ ನಾಗರಾಜ ಗಡೇಕಲ್
ಐಟಿ ಸಚಿವ ಡಾ. ಅಶ್ವತ್ಥ ನಾರಾಯಣ (ಚಿತ್ರ ಕೃಪೆ ನಾಗರಾಜ ಗಡೇಕಲ್

ಐಟಿ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿದೆ, 150 ಬಿಲಿಯನ್ ಡಾಲರ್ ಐಟಿ ರಫ್ತು ಗುರಿ: ಡಾ. ಅಶ್ವತ್ಥ್ ನಾರಾಯಣ

ಐಟಿ ಕ್ಷೇತ್ರದಲ್ಲಿ ಬೆಂಗಳೂರು ನಗರ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿದೆ. ನಾವು ಬೇರೆ ರಾಜ್ಯಗಳೊಂದಿಗೆ ಅಲ್ಲ, ವಿದೇಶಗಳಿಗೆ  ಪೈಪೋಟಿ ನೀಡುತ್ತಿದ್ದೇವೆ ಎಂದು ಐಟಿ ಹಾಗೂ ಉನ್ನತ ಶಿಕ್ಷಣ ಸಚಿವ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. 

ಬೆಂಗಳೂರು: ಐಟಿ ಕ್ಷೇತ್ರದಲ್ಲಿ ಬೆಂಗಳೂರು/ ಕರ್ನಾಟಕ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿದೆ. ನಾವು ಬೇರೆ ರಾಜ್ಯಗಳೊಂದಿಗೆ ಅಲ್ಲ, ವಿದೇಶಗಳಿಗೆ  ಪೈಪೋಟಿ ನೀಡುತ್ತಿದ್ದೇವೆ ಎಂದು ಐಟಿ ಹಾಗೂ ಉನ್ನತ ಶಿಕ್ಷಣ ಸಚಿವ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. 

ಬೆಂಗಳೂರು ಟೆಕ್ ಶೃಂಗಸಭೆ-2021 ಕ್ಕೆ ನ.17 ರಂದು ಚಾಲನೆ ದೊರೆಯಲಿದ್ದು, ಈ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್/ ಕನ್ನಡಪ್ರಭ.ಕಾಮ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ಬಿಟಿಎಸ್-2021 ಹೆಚ್ಚಿನ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ. 

ಬೆಂಗಳೂರು ನಗರದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚುತ್ತಿದ್ದು, ಬಿಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಕಾರ್ಯನಿರ್ವಹಣೆ ಮಾಡುವ ಟೆಕ್ ಸಂಬಂಧಿತ ಸ್ಟಾರ್ಟ್ ಅಪ್ ಗಳಿಗೆ ಹಲವು ವಿನಾಯಿತಿಗಳು ದೊರೆಯಲಿವೆ. ಕೋವಿಡ್-19 ಬೆಂಗಳೂರಿನಿಂದ ಹೊರಭಾಗದಲ್ಲಿಯೂ ಐಟಿ ಉದ್ಯೋಗಗಳನ್ನು ಸಮರ್ಥವಾಗಿ ನಿಭಾಯಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.  150 ಬಿಲಿಯನ್ ಡಾಲರ್ ಐಟಿ ರಫ್ತು ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಕೋವಿಡ್-19 ನಂತರದ ದಿನಗಳಲ್ಲಿ ಇಂಜಿನಿಯರಿಂಗ್ ಸೀಟುಗಳ ಬೇಡಿಕೆ ಕುಸಿದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸೀಟುಗಳ ಬೇಡಿಕೆ ಮಧ್ಯಮ ಪ್ರಮಾಣದಲ್ಲಿದೆ, ಕಂಪ್ಯೂಟರ್ ಸೈನ್ಸ್, ಡೇಟಾ ಅನಾಲಿಸಿಸ್, ಮಷಿನ್ ಲರ್ನಿಂಗ್ ವಿಭಾಗಗಳಲ್ಲಿ ಬೇಡಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕಾಲೇಜುಗಳಲ್ಲಿ ಕೃತಕ ಬುದ್ಧಿಮತ್ತೆ ವಿಭಾಗಕ್ಕೆ ಸಂಬಂಧಿಸಿದ ಸೆಂಟರ್ ಫಾರ್ ಎಕ್ಸಲೆನ್ಸ್ ನ ಸ್ಥಾಪಿಸುವುದಕ್ಕೆ ಸರ್ಕಾರಕ್ಕೆ ನಿರ್ದಿಷ್ಟ ಯೋಜನೆಗಳಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾ ಮಟ್ಟದಲ್ಲಿ "ಸೂಪರ್-30 ಇಂಜಿನಿಯರಿಂಗ್ ಕಾಲೇಜು"ಗಳನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com