ಜಯದೇವ ಹೃದ್ರೋಗ ಸಂಸ್ಥೆ ಆವರಣದಲ್ಲಿ 350 ಬೆಡ್ ಗಳ ಸಾಮರ್ಥ್ಯದ ನೂತನ ಆಸ್ಪತ್ರೆ: ಇನ್ಫೋಸಿಸ್ ಫೌಂಡೇಶನ್ ನೆರವು
ಇದೇ ತಿಂಗಳ 17ರಿಂದ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ 350 ಬೆಡ್ ಗಳ ಸೌಲಭ್ಯ ಹೊಂದಿರುವ ಹೃದ್ರೋಗ ಆಸ್ಪತ್ರೆ ಸಾರ್ವಜನಿಕರ ಚಿಕಿತ್ಸೆಗೆ ಲಭ್ಯವಾಗಲಿದೆ.
Published: 15th November 2021 09:28 AM | Last Updated: 15th November 2021 01:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಇದೇ ತಿಂಗಳ 17ರಿಂದ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ 350 ಬೆಡ್ ಗಳ ಸೌಲಭ್ಯ ಹೊಂದಿರುವ ಹೃದ್ರೋಗ ಆಸ್ಪತ್ರೆ ಸಾರ್ವಜನಿಕರ ಚಿಕಿತ್ಸೆಗೆ ಲಭ್ಯವಾಗಲಿದೆ.
ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡಿರುವ ಈ ಆಸ್ಪತ್ರೆಗೆ 103 ಕೋಟಿ ರೂಪಾಯಿ ಹಣ ನೆರವು ನೀಡಲಾಗಿದೆ. ಒಂದೇ ಸೂರಿನಡಿ 15 ಕಾರ್ಡಿಯಾಕ್ ಕ್ಯಾಥ್ ಲ್ಯಾಬ್‌ಗಳನ್ನು ಹೊಂದಿರುವ ಏಕೈಕ ಸರ್ಕಾರಿ ಸಂಸ್ಥೆ ಜಯದೇವ ಹೃದ್ರೋಗ ಸಂಸ್ಥೆಯಾಗಿದೆ. ಹೃದಯದ ಚಿಕಿತ್ಸೆಯ ತುರ್ತುಸ್ಥಿತಿಗಳು ಮತ್ತು ಆಯ್ದ ಹೃದಯ ಆರೈಕೆಗಾಗಿ ಪ್ರತಿದಿನ ಹೆಚ್ಚುತ್ತಿರುವ ಕ್ಯಾಸೆಲೋಡ್ ಅನ್ನು ನಿರ್ವಹಿಸಲು ಆ ನೂತನ ಆಸ್ಪತ್ರೆ ನೆರವಾಗಲಿದೆ ಎಂದು ಜಯದೇವ ಹೃದ್ರೋಗ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ಎರಡು ಆಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಆಪರೇಷನ್ ಥಿಯೇಟರ್, 100 ಐಸಿಸಿಯು ಹಾಸಿಗೆಗಳು ಮತ್ತು 250 ಸಾಮಾನ್ಯ ವಾರ್ಡ್ ಹಾಸಿಗೆಗಳು ಸೇರಿವೆ. ಪ್ರಸ್ತುತ, ಜಯದೇವ ಆಸ್ಪತ್ರೆ ಮತ್ತು ಅದರ ಶಾಖೆಗಳಲ್ಲಿ ಹಾಸಿಗೆ ಸಾಮರ್ಥ್ಯವು 1,450 ಆಗಿದ್ದು ಅದು ಇನ್ನು ಅದು 1,800ಕ್ಕೆ ಹೆಚ್ಚಾಗುತ್ತದೆ.
ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಬರುವಿಕೆ, ದಾಖಲು ಹೆಚ್ಚಾಗುತ್ತಿರುವುದರಿಂದ ಹೊಸ ಸೌಲಭ್ಯವು ಸಹಾಯವಾಗಲಿದೆ ಎಂದರು.