ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೀನಾ ಉತ್ಪನ್ನಗಳ ನಿಷೇಧ: ಬನಾರಸ್ ಸೀರೆಗೆ ಮತ್ತಷ್ಟು ಮೆರುಗು ತರಲಿದೆ ಕರ್ನಾಟಕದ ರೇಷ್ಮೆ!

ಚೀನಾ ರೇಷ್ಮೆ ಸೇರಿದಂತೆ ಚೀನಾ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದರಿಂದ ಕರ್ನಾಟಕದಿಂದ ರೇಷ್ಮೆಗೆ ಪುನಶ್ಚೇತನ ಸಿಕ್ಕಿದೆ.

ಬೆಂಗಳೂರು: ಸುಮಾರು 20 ವರ್ಷಗಳ ನಂತರ ಕರ್ನಾಟಕದ ರೇಷ್ಮೆ ನೂಲು ಪ್ರಸಿದ್ಧ ಬನಾರಸ್ ರೇಷ್ಮೆ ಸೀರೆಗಳಿಗೆ ಹೊಳಪನ್ನು ತರಲಿದೆ. ಚೀನಾ ರೇಷ್ಮೆ ಸೇರಿದಂತೆ ಚೀನಾ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದರಿಂದ ಕರ್ನಾಟಕದಿಂದ ರೇಷ್ಮೆಗೆ ಪುನಶ್ಚೇತನ ಸಿಕ್ಕಿದೆ.

ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಹೆಸರುವಾಸಿಯಾಗಿರುವ ಕರ್ನಾಟಕದ ಕಚ್ಚಾ ರೇಷ್ಮೆ ನೂಲನ್ನು ಈಗ ಉತ್ತರ ಪ್ರದೇಶದ ವಾರಣಾಸಿಯ ನೇಕಾರರು ಕೊಂಡೊಯ್ಯುತ್ತಿದ್ದಾರೆ.

ರಾಜ್ಯದಲ್ಲಿ 1.38 ಲಕ್ಷ ರೇಷ್ಮೆ ಕೃಷಿ  ಮಾಡುವ ರೈತರು, 7,000 ರೇಷ್ಮೆ ರೀಲರ್‌ಗಳಿದ್ದಾರೆ.  ಇವರು ವಾರ್ಷಿಕವಾಗಿ  80,396 ಟನ್‌ ರೇಷ್ಮೆ ತೆಗೆಯುತ್ತಾರೆ, ಅದರಲ್ಲಿ , 11,292 ಟನ್‌ ಕಚ್ಚಾ ರೇಷ್ಮೆ ತೆಗೆಯುತ್ತಾರೆ.  

1997 ಮತ್ತು 2002 ರ ನಡುವೆ ವಾರಣಾಸಿಯು ಕರ್ನಾಟಕ ರೇಷ್ಮೆ ಕೃಷಿ ಮಾರುಕಟ್ಟೆ ಮಂಡಳಿಯನ್ನು ಹೊಂದಿತ್ತು ಎಂದು ರೇಷ್ಮೆ ಇಲಾಖೆ ಮೂಲಗಳು ತಿಳಿಸಿವೆ, ಇದು ಕರ್ನಾಟಕದಿಂದ ವಾರ್ಷಿಕವಾಗಿ 2,000 ಕೆಜಿ ಅತ್ಯುತ್ತಮ ರೇಷ್ಮೆಯನ್ನು ಮಾರಾಟ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.

ತುಮಕೂರಿನ ರಾಮನಗರ ಮತ್ತು ಶಿಡ್ಲಘಟ್ಟದ ರೈತರು ಉತ್ತಮ ಗುಣಮಟ್ಟದ ರೇಷ್ಮೆ ಸಾಕಲು ಹೆಸರುವಾಸಿಯಾಗಿದ್ದಾರೆ. ಆದರೆ ವಾರಣಾಸಿ ನೇಕಾರರು ಚೀನಾದಿಂದ ಅಗ್ಗದ ರೇಷ್ಮೆ ನೂಲು ತರಿಸಿಕೊಳ್ಳಲು ಆರಂಭಿಸಿದರು ಹೀಗಾಗಿ 2002 ರಲ್ಲಿ ಮಾರುಕಟ್ಟೆ ಮಂಡಳಿಯನ್ನು ಮುಚ್ಚಲಾಯಿತು.

ಚೀನಾ ರೇಷ್ಮೆ ನಿಷೇಧ ಮಾಡುವ ಮೂಲಕ  ರೇಷ್ಮೆ ಸಚಿವ ನಾರಾಯಣಗೌಡ ಕರ್ನಾಟಕದ ರೇಷ್ಮೆಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಗುರುವಾರ ಉತ್ತರ ಪ್ರದೇಶ ಸಚಿವರುಗಳಾದ ಸಿದ್ದಾರ್ಥ್ ನಾಥ್ ಸಿಂಗ್ ಮತ್ತು  ಇತರ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.

ಕರ್ನಾಟಕ ಮತ್ತು ಉತ್ತರ ಪ್ರದೇಶದ ನಡುವೆ 2012 ರಲ್ಲಿ ನವೀಕರಿಸಲಾದ ಎಂಒಯು ಇತ್ತು. ಆದರೆ, ಈ ವೇಳೆ ಕರ್ನಾಟಕದಿಂದ ರೇಷ್ಮೆ ಪೂರೈಕೆ ಕಡಿಮೆಯಾಗಿತ್ತು.  ಭಾರತದಾದ್ಯಂತ,  ಒಟ್ಟು 19 ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಗಳಿದ್ದು, ಕರ್ನಾಟಕದಲ್ಲಿ 16, ತಮಿಳುನಾಡಿನಲ್ಲಿ ಎರಡು ಮತ್ತು ಯುಪಿಯಲ್ಲಿ ಒಂದು ಇತ್ತು, ಅದನ್ನು ಮುಚ್ಚಲಾಗಿತ್ತು . ಈಗ ಅದನ್ನು  ನು ಮತ್ತೆ ತೆರೆಯಲಾಗುತ್ತದೆ. ವಾರಣಾಸಿಯ ನೇಕಾರರಿಗೆ  ಶೆ. 40 ರಷ್ಟು ರೇಷ್ಮೆ ಕರ್ನಾಟಕ ಪೂರೈಕೆ ಮಾಡುತ್ತಿದೆ ಎಂದು ನಾರಾಯಣ ಗೌಡ ಹೇಳಿದ್ದಾರೆ.

ಈ ಸಂಬಂಧ ಉತ್ತರ ಪ್ರದೇಶದ ಸಚಿವರು ಮತ್ತು ಇತರ ಮಧ್ಯಸ್ಥಗಾರರನ್ನು ಭೇಟಿ ಮಾಡುತ್ತಿದ್ದೇವೆ. ನಮ್ಮ ರೇಷ್ಮೆ ನೂಲನ್ನು ಚೀನಾ ರೇಷ್ಮೆಯಷ್ಟು ಕಡಿಮೆ ಬೆಲೆಗೆ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com