ಮಕ್ಕಳ ಅಪೌಷ್ಟಿಕತೆ ಪತ್ತೆ ಮಾಡಲು 'ಪೋಷಣ್ ಟ್ರ್ಯಾಕರ್'

ಪೋಷಣ್ ಟ್ರ್ಯಾಕರ್ ಎಂಬುದು ಮೊಬೈಲ್ ಆ್ಯಪ್ ಆಧಾರಿತ ತಂತ್ರಜ್ಞಾನ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಆ್ಯಪ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದೆ. ಮಕ್ಕಳಲ್ಲಿನ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ ಮಾತ್ರವಲ್ಲದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೋಷಣ್ ಟ್ರ್ಯಾಕರ್ ಎಂಬುದು ಮೊಬೈಲ್ ಆ್ಯಪ್ ಆಧಾರಿತ ತಂತ್ರಜ್ಞಾನ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಆ್ಯಪ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದೆ. ಮಕ್ಕಳಲ್ಲಿನ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ ಮಾತ್ರವಲ್ಲದೆ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಸಮಸ್ಯೆಯಿದ್ದರೆ ಅದರ ಬಗೆಗೂ ಈ ಆ್ಯಪ್ ನಲ್ಲಿ ನಮೂದಿಸಬಹುದು.

ಈವರೆಗೆ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಎತ್ತರ ಮತ್ತು ತೂಕ ಮಾಡಿ, ಚಾರ್ಟ್ ನೋಡಿಕೊಂಡು ಅದರ ಪ್ರಕಾರ ನೋಂದಣಿ ಪುಸ್ತಕದಲ್ಲಿ ನಮೂದಿಸುತ್ತಿದ್ದರು. ಸಾಕಷ್ಟು ಬಾರಿ ಇದು ನಿಖರವಾಗಿರುತ್ತಿರಲಿಲ್ಲ. ಆರಂಭದಲ್ಲಿಯೇ ಅಪೌಷ್ಟಿಕತೆಯನ್ನು ಪತ್ತೆ ಹಚ್ಚಲಾಗದಿದ್ದರೆ, ಕ್ರಮೇಣ ಆ ಮಕ್ಕಳು ತೀವ್ರ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದನ್ನು ತಪ್ಪಿಸಿ, ಅಂತಹ ಮಕ್ಕಳನ್ನು ಆರಂಭದಲ್ಲೇ ಪತ್ತೆ ಮಾಡಲು ಅನುಕೂಲವಾಗುವಂತೆ ಕೇಂದ್ರ ಸರಕಾರ `ಪೋಷಣ್ ಟ್ರ್ಯಾಕರ್' ಆ್ಯಪ್ ಜಾರಿಗೆ ತಂದಿದೆ.

ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಆ್ಯಪ್ ಮೂಲಕ ಮಕ್ಕಳ ನೋಂದಣಿ ನಡೆಯುತ್ತಿದೆ. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತರು, ಶಿಶು ಅಭಿವೃದ್ಧಿ ಅಧಿಕಾರಿಗಳೂ ಸೇರಿದಂತೆ 45 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ ವಿತರಿಸಲಾಗಿದ್ದು, ಈ ತಂತ್ರಜ್ಞಾನ ಬಳಸಲು ಸಿಬ್ಬಂದಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ.

ಪೋಷಣ್ ಟ್ರ್ಯಾಕರ್ ನ ಕೆಲಸ:
ಅಂಗನವಾಡಿ ಕಾರ್ಯಕರ್ತರು ರಾಜ್ಯದ ಮಕ್ಕಳು (0-6 ವಯಸ್ಸು), ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ವಿತರಿಸುತ್ತಾರೆ. ಇದೇ ವೇಳೆ ಮಕ್ಕಳ ತೂಕ, ಎತ್ತರ, ವಯಸ್ಸು ಮತ್ತು ಗರ್ಭಿಣಿ, ಬಾಣಂತಿಯರ ವಿವರಗಳನ್ನೂ ದಾಖಲಿಸಿ, ಪೋಷಣ್ ಟ್ರ್ಯಾಕರ್ ಆ್ಯಪ್‍ನಲ್ಲಿ ನಮೂದಿಸಲಾಗುವುದು. (ಅಂಗನವಾಡಿಗಳ ನೆರವು ಪಡೆಯುವ ಎಲ್ಲಾ ಫಲಾನುಭವಿಗಳ ಹೆಸರು, ಪೋಷಕರ ಹೆಸರು ಮತ್ತು ವಿಳಾಸ, ಆಧಾರ್ ಸಂಖ್ಯೆಯೊಂದಿಗೆ ಆ್ಯಪ್‍ನಲ್ಲಿ ನೋಂದಣಿಯಾಗಿರುತ್ತವೆ.) ಮಾಹಿತಿಯನ್ನು ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು, ಶಿಶು ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸುವಂತಹ ಅವಕಾಶವೂ ಇದರಲ್ಲಿದೆ.

``ಮಕ್ಕಳನ್ನು ಅಂಗನವಾಡಿಗೆ ಕರೆತಂದು ಅಥವಾ ಅವರ ಮನೆಗಳಿಗೆ ತೆರಳಿ ತೂಕ, ಎತ್ತರ, ವಯಸ್ಸನ್ನು ದಾಖಲಿಸುತ್ತೇವೆ. ಈ ಮೂರು ಮಾನದಂಡಗಳ ಮೌಲ್ಯದ ಮೇಲೆ ಮಕ್ಕಳ ಸ್ಥಿತಿಗತಿ ತೋರಿಸುತ್ತದೆ. ನಂತರ ಆ ಮಕ್ಕಳಿಗೆ ಅಪೌಷ್ಟಿಕತೆಯಿದೆಯೇ ಅಥವಾ ತೀವ್ರ ಅಪೌಷ್ಟಿಕತೆಯಾ ಇಲ್ಲವೇ ಸಾಧಾರಣವಾ ಎಂದು ತಕ್ಷಣ ಗೋಚರಿಸುತ್ತದೆ. ಬಳಿಕ ಸಮಸ್ಯೆಯುಳ್ಳ ಮಕ್ಕಳಿಗೆ ಆಯಾ ತಾಲೂಕು, ಜಿಲ್ಲೆಗಳ ಅಧಿಕಾರಿಗಳು ಅಗತ್ಯ ಆಹಾರ ಪದಾರ್ಥಗಳನ್ನು ನೀಡುವುದು ಮತ್ತು ಚಿಕಿತ್ಸೆ ಬೇಕಿದ್ದರೆ ಅದನ್ನೂ ಕೊಡಿಸುವಲ್ಲಿ ನೆರವಾಗುತ್ತಾರೆ. ಇದಲ್ಲದೆ ಆಗಾಗ ಮಕ್ಕಳ ತಪಾಸಣೆ ಮೂಲಕ ಇತರೆ ಸಮಸ್ಯೆಗಳನ್ನು ಪತ್ತೆ ಮಾಡಲಾಗುವುದು,'' ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com