ಚಾಮರಾಜನಗರ: ಭಾರಿ ಮಳೆ; ತುಂಬಿದ ಹಳ್ಳಕೊಳ್ಳ; ಶಾಲೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ

ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ನದಿಯಂತಾಗಿದ್ದು, ಪೋಷಕರ ಹೆಗಲ ಮೇಲೆ ಕುಳಿತು ವಿದ್ಯಾರ್ಥಿಗಳು ರಸ್ತೆ ದಾಟಿದ್ದಾರೆ.
ಮಕ್ಕಳನ್ನು ನದಿ ದಾಟಿಸುತ್ತಿರುವ ಪೋಷಕರು
ಮಕ್ಕಳನ್ನು ನದಿ ದಾಟಿಸುತ್ತಿರುವ ಪೋಷಕರು

ಚಾಮರಾಜನಗರ: ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ನದಿಯಂತಾಗಿದ್ದು, ಪೋಷಕರ ಹೆಗಲ ಮೇಲೆ ಕುಳಿತು ವಿದ್ಯಾರ್ಥಿಗಳು ರಸ್ತೆ ದಾಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ಗ್ರಾಮದಲ್ಲಿ ಈ ಘಟನೆ ಜರುಗಿದೆ. 

ಕಳೆದ ಒಂದು ವಾರದಿಂದಲೂ ಹನೂರು ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದು, ರಸ್ತೆಗಳು ನದಿಯಾಗಿ ಮಾರ್ಪಟ್ಟಿವೆ. ಪರಿಣಾಮ ಮೀಣ್ಯಂ ಗ್ರಾಮದಿಂದ ಚಿಕ್ಕಚಿನ್ನೇಗೌಡಹಳ್ಳಿ ಗ್ರಾಮದಲ್ಲಿರುವ ಶಾಲೆಗೆ ರಸ್ತೆಯಲ್ಲಿ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಯಿತು. 

ಮಕ್ಕಳ ಸಮಸ್ಯೆಯನ್ನು ಅರಿತ ಪೋಷಕರು ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು ಹಾಗೂ ಎತ್ತಿಕೊಂಡು ರಸ್ತೆ ದಾಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com