ನವೋದ್ಯಮ ಸಾಧಕ ಕಂಪನಿಗಳಿಗೆ 'ಬೆಂಗಳೂರು ಇಂಪ್ಯಾಕ್ಟ್' ಪುರಸ್ಕಾರ

ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ `ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನವಾದ  ಪ್ರದಾನ ಮಾಡಲಾಯಿತು.
ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರ
ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರ

ಬೆಂಗಳೂರು: ಗಮನಾರ್ಹ ಸಾಧನೆ ಮಾಡಿರುವ ಐದು ಕಂಪನಿಗಳಿಗೆ `ಸ್ಮಾರ್ಟ್ ಬಯೋ ಪುರಸ್ಕಾರ’ ಮತ್ತು ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ `ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನವಾದ  ಪ್ರದಾನ ಮಾಡಲಾಯಿತು.

ಸರ್ಕಾರದ ಪರವಾಗಿ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಗೌರವ ಪ್ರದಾನ ಮಾಡಿದರು. ಬಿಟಿಎಸ್ ಶೃಂಗಸಭೆಯಲ್ಲಿ ಗುರುವಾರ ನಡೆದ ‘ಬೆಂಗಳೂರು ನೆಕ್ಸ್ಟ್’ ಸಂವಾದ ಗೋಷ್ಠಿಯಲ್ಲಿ ರಾಜ್ಯ ಸರ್ಕಾರವು ಸಿಕೋಯಿಯಾ ಕಂಪನಿಯ ಜತೆಗೂಡಿ ಹೊರತಂದಿರುವ `ಸ್ಟಾರ್ಟಪ್ ಸ್ಥಾಪನೆ ಮಾರ್ಗದರ್ಶಿ’ಯನ್ನು ಸಚಿವ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಲೋಕಾರ್ಪಣೆ ಮಾಡಿದರು.

ಬೆಂಗಳೂರು ಇಂಪ್ಯಾಕ್ಟ್ ಪುರಸ್ಕೃತ ಕಂಪನಿಗಳು
ಅಪನಾ, ಬಿಗ್ ಬ್ಯಾಸ್ಕೆಟ್, ಬ್ಲ್ಯಾಕ್ ಬಕ್, ಕಾಯಿನ್ಸ್ ವಿಚ್, ಸಿಆರ್ ಇಡಿ, ಕ್ಯೂರ್ ಫಿಟ್, ಡೈಲಿ ಹಂಟ್, ಗ್ರೋ, ಮೀಶೂ, ಎಂಪಿಎಲ್, ಫೋನ್ ಪೇ, ರೇಜರ್ ಪೇ, ಉಡಾನ್, ಅನ್ಅಕಾಡೆಮಿ, ಜೆರೋಡಾ ಮತ್ತು ಝೆಟ್ ವರ್ಕ್

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪ್ರಶಸ್ತಿ ಪುರಸ್ಕೃತರೊಬ್ಬರು, ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳಿಗೂ ಸರಿಯಾದ ಇಕೋ ಸಿಸ್ಟಮ್ ರಚಿಸಬೇಕು ಎಂದು ಹೇಳಿದರು.  ಸಮಾಜಕ್ಕೆ ಕೊಡುಗೆಗಳ ವಿಷಯದಲ್ಲಿ ಹೆಚ್ಚು ಮಹತ್ವದ್ದಾಗಿರುವ ಡೀಪ್ ಟೆಕ್ ಅನ್ನು ಇಂತಹ ಕಾರ್ಯಕ್ರಮದಲ್ಲಿ ದೂರವಿಡಲಾಗಿದೆ ಎಂದು ಮತ್ತೊಬ್ಬ ಡೀಪ್ ಟೆಕ್ ಸ್ಟಾರ್ಟ್‌ಅಪ್ ವಿಜ್ಞಾನಿಯೊಬ್ಬರು ನಿರಾಶೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com