'ಅಪ್ಪುಗೆ ಸೈಕಲ್ ರೈಡ್ ಅಂದರೆ ಇಷ್ಟವಾಗಿತ್ತು, ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಗಿಫ್ಟ್ ಮಾಡಿದ್ದ': ಜಾಥಾಕ್ಕೆ ಚಾಲನೆ ನೀಡಿ ಸ್ಮರಿಸಿಕೊಂಡ ನಟ ಶಿವರಾಜ್ ಕುಮಾರ್

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿನ ಅಪ್ಪು ಅಗಲಿ ಇಂದು ಭಾನುವಾರಕ್ಕೆ 23 ದಿನ. ಪುನೀತ್ ರಾಜ್ ಕುಮಾರ್ ಅವರಿಗೆ ಸೈಕಲ್ ಪ್ರಯಾಣ ಎಂದರೆ ಅಚ್ಚುಮೆಚ್ಚು. ಬಿಡುವಿದ್ದಾಗ ಕಿಲೋಮೀಟರ್ ಗಟ್ಟಲೆ ಒಬ್ಬನೇ ಇಲ್ಲವೇ ಸ್ನೇಹಿತರ ಜೊತೆ ಸೈಕಲ್ ನಲ್ಲಿ ಸವಾರಿ ಹೋಗುತ್ತಿದ್ದರಂತೆ.
ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ನಟ ಶಿವರಾಜ್ ಕುಮಾರ್
ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ನಟ ಶಿವರಾಜ್ ಕುಮಾರ್

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿನ ಅಪ್ಪು ಅಗಲಿ ಇಂದು ಭಾನುವಾರಕ್ಕೆ 23 ದಿನ. ಪುನೀತ್ ರಾಜ್ ಕುಮಾರ್ ಅವರಿಗೆ ಸೈಕಲ್ ಪ್ರಯಾಣ ಎಂದರೆ ಅಚ್ಚುಮೆಚ್ಚು. ಬಿಡುವಿದ್ದಾಗ ಕಿಲೋಮೀಟರ್ ಗಟ್ಟಲೆ ಒಬ್ಬನೇ ಇಲ್ಲವೇ ಸ್ನೇಹಿತರ ಜೊತೆ ಸೈಕಲ್ ನಲ್ಲಿ ಸವಾರಿ ಹೋಗುತ್ತಿದ್ದರಂತೆ.

ಇಂದು ರಾಜ್ಯ ಮೀಸಲು ಪೊಲೀಸ್ ಇಲಾಖೆ ಮತ್ತು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದ್ದವು. ಅದಕ್ಕೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಿದರು. ನಗರದ ಕಂಠೀರವ ಸ್ಟೇಡಿಯಂನಿಂದ 50 ಕಿಲೋ ಮೀಟರ್ ದೂರ ಸೈಕಲ್ ಜಾಥಾ ಸಾಗಿದೆ. ಜಾಥಾದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಇತರ ಪೊಲೀಸರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ಅಪ್ಪುಗೆ ಸೈಕಲ್, ಸೈಕಲ್ ರೈಡ್ ಅಂದರೆ ಬಹಳ ಇಷ್ಟವಾಗಿತ್ತು. ಇಂದು ಅವನಿದ್ದಿದ್ರೆ ಈ 50 ಕಿಲೋ ಮೀಟರ್ ಸೈಕಲ್ ಜಾಥಾಗೆ ಬರ್ತಿದ್ದ. ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಗಿಫ್ಟ್ ಮಾಡಿದ್ದ. ಇಂದು ಅವನಿಲ್ಲ, ಆದರೆ ಅವೆನೆಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ. ಎಲ್ಲರ ಹೃದಯದಲ್ಲಿಯೂ ಅಪ್ಪು ಶಾಶ್ವತವಾಗಿದ್ದಾನೆ. ನಾನು ಅಪ್ಪುಗೆ ಅಣ್ಣ ಅಲ್ಲ, ನನಗೆ ಅವನು ಅಣ್ಣನಾಗಿ ಹೋಗಿದ್ದಾನೆ ಎಂದರು.

ಕಂಠೀರವ ಸ್ಟೇಡಿಯಂನಿಂದ ಹೊರಟ ಸೈಕಲ್ ಜಾಥಾ ಚಾಲುಕ್ಯ ಸರ್ಕಲ್, ಮೇಕ್ರಿ ಸರ್ಕಲ್, ಹೆಬ್ಬಾಳ, ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ಬಳಿ ಸಾಗಿ ನಂತರ ಪುನೀತ್ ಸಮಾಧಿ ಬಳಿಗೆ ಹೋಗಿ ಪುಷ್ಪ ನಮನ ಸಲ್ಲಿಸಿ ನಂತರ ನಾಗರಭಾವಿ, ದೇವೇಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಂಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಮೇಯೋ ಹಾಲ್ ಕಡೆಯಿಂದ ಪೊಲೀಸ್ ಹಾಕಿ ಗ್ರೌಂಡ್ ಗೆ ಆಗಮಿಸಿ ಅಂತ್ಯಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com