ದಕ್ಷಿಣ ಏಷ್ಯಾದಲ್ಲೇ ಮೊದಲು; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್ ನಿಯೋಜನೆ

ಬೆಂಗಳೂರು(Bengaluru) ವಿಮಾನ ನಿಲ್ದಾಣ (Bengaluru airport) ಮತ್ತೊಂದು ಅಂತಾರಾಷ್ಟ್ರೀಯ ಹಿರಿಮೆಗೆ ಪಾತ್ರವಾಗಿದ್ದು, ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್ (Rosenbauer firefighting simulator) ನಿಯೋಜನೆ ಮಾಡುವ ಮೂಲಕ ಈ ವ್ಯವಸ್ಥೆ ಹೊಂದಿದ ದಕ್ಷಿಣ ಏಷ್ಯಾ(South Asia)ದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಭಾಜನವಾಗಿದೆ.
ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್
ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್

ಬೆಂಗಳೂರು: ಬೆಂಗಳೂರು(Bengaluru) ವಿಮಾನ ನಿಲ್ದಾಣ (Bengaluru airport) ಮತ್ತೊಂದು ಅಂತಾರಾಷ್ಟ್ರೀಯ ಹಿರಿಮೆಗೆ ಪಾತ್ರವಾಗಿದ್ದು, ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್ (Rosenbauer firefighting simulator) ನಿಯೋಜನೆ ಮಾಡುವ ಮೂಲಕ ಈ ವ್ಯವಸ್ಥೆ ಹೊಂದಿದ ದಕ್ಷಿಣ ಏಷ್ಯಾ(South Asia)ದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಭಾಜನವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (Kempegowda International Airport) (ಕೆಐಎ) ನಿಲ್ದಾಣದಲ್ಲಿ ಸಂಭವಿಸುವ ಅಗ್ನಿ ಅವಘಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಇದೇ ಮೊದಲ ಬಾರಿಗೆ “ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್” ಅನ್ನು ಪರಿಚಯಿಸಲಾಗಿದೆ. ಆ ಮೂಲಕ ಇಂತಹ ವ್ಯವಸ್ಥೆಯನ್ನು ಹೊಂದಿದ ದಕ್ಷಿಣ ಏಷ್ಯಾದಲ್ಲೇ ಮೊದಲ ವಿಮಾನ  ನಿಲ್ದಾಣ ಎಂಬ ಕೀರ್ತಿಗೆ ಭಾಜನವಾಗಿದೆ.

ಇದೊಂದು ಅತ್ಯಾಧುನಿಕ ಅಗ್ನಿಶಾಮಕ ತಂತ್ರಜ್ಞಾನವಾಗಿದ್ದು, ಇದು ಯಾವುದೇ ರೀತಿಯ ಅಗ್ನಿ ಅವಘಡವಾದರೂ ಕೂಡಲೇ ಅದನ್ನು ಆರಿಸುವ ಕೆಲಸದಲ್ಲಿ ನಿಪುಣತೆ ಹೊಂದಿದೆ. ವಿಮಾನ ನಿಲ್ದಾಣ ಅಥವಾ ವಿಮಾನಗಳ ಅಪಘಾತದ ಸಂದರ್ಭದಲ್ಲಿ ಹೊತ್ತಿಕೊಳ್ಳುವ ಅಗ್ನಿ ಅವಘಡವನ್ನು ತುರ್ತಾಗಿ ಆರಿಸುವಲ್ಲಿ ಈ ಅತ್ಯಾಧುನಿಕ ಸಿಮ್ಯುಲೇಟರ್ ಕೆಲಸ ಮಾಡಲಿದೆ. 

ಈ ಬಗ್ಗೆ ಮಾತನಾಡಿರುವ ಬಿಐಎಎಲ್ ಸಿಇಒ ಜಯರಾಜ್ ಷಣ್ಮುಗಂ ಅವರು, ಬೆಂಗಳೂರು ವಿಮಾನ ನಿಲ್ದಾಣದ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್‌ನನ್ನು ಪರಿಚಯಿಸಲಾಗುತ್ತಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿಶಾಮಕವನ್ನು ಭಾರತದ ಯಾವುದೇ ವಿಮಾನ ನಿಲ್ದಾಣದ ತಂಡ ಇಲ್ಲಿಗೆ ಆಗಮಿಸಿ ಇದರ ತರಬೇತಿ ಪಡೆಯಲು ಸಹ ಮುಕ್ತ ಅವಕಾಶವನ್ನು ಒದಗಿಸಿಕೊಡಲಾಗಿದೆ.

ರೋಸನ್‌ಬೌರ್ ಸಿಮ್ಯುಲೇಟರ್‌ನ ಎರಡು ಫ್ಯಾಂಥರ್ ೬ ಟ್ರಕ್‌ಗಳು, ಹಾಗೂ ೮ ಟ್ರಕ್‌ಗಳನ್ನು ಇರಿಸಲಾಗಿದೆ. ಈ ಟ್ರಕ್‌ಗಳಲ್ಲಿ ಎರಡು ಹೈರೀಚ್ ಎಕ್ಸ್ಟೆಂಡೆಬಲ್ ಟರೆಟ್ಸ್ (ಎಚ್‌ಆರ್‌ಇಟಿ)ಯನ್ನು ಒಳಗೊಂಡಿದ್ದು, ಈ ಮಟ್ಟದ ಸುಸಜ್ಜಿತ ಟ್ರಕ್‌ಗಳನ್ನು ದಕ್ಷಿಣ ಏಷ್ಯಾದಲ್ಲಿಯೇ ಯಾವ ವಿಮಾನ ನಿಲ್ದಾಣಗಳು ಒಳಗೊಂಡಿಲ್ಲ ಎಂದರು.

ಅಂತೆಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆ. ರೋಸೆನ್‌ಬೌರ್ ಸಿಎಫ್‌ಟಿ ಮೂಲಕ ಕಠಿಣವಾದ ಅಗ್ನಿ ಅವಘಡದ ಸಂದರ್ಭದಲ್ಲಿ ಈ ಸಿಮ್ಯುಲೇಟರ್ ಚಾರ್ತುಯದಿಂದ ಅಗ್ನಿಯನ್ನು ಶಮನ ಮಾಡಲಿದೆ.  ವಿಮಾನ ನಿಲ್ದಾಣದಲ್ಲಿರುವ ಅಗ್ನಿಶಾಮಕ ದಳದವರಿಗೆ ಈ ಸಿಮ್ಯುಲೇಟರ್‌ನನ್ನು ಬಳಸುವ ವಿಧಾನವನ್ನು ತರಬೇತಿ ನೀಡಲಾಗಿದೆ.  ಅದರಲ್ಲೂ ಕಮಾಂಡ್ ನಿಯಂತ್ರಕರು, ಮೂಲ ಚಾಲಕರು, ಪೋಸಿಶನಿಂಗ್ ಇನ್ಸಿಡೆಂಟ್ ಕಮಾಂಡರ್‌ಗಳು, ಕ್ಯೂ ಕಮಾಂಡರ್‌ಗಳು ಹಾಗೂ ಅಗ್ನಿಶಾಮಕ ಮುಂಚೂಣಿ ಸಿಬ್ಬಂದಿಗೆ ಈ ತರಬೇತಿಯನ್ನು ಕಡ್ಡಾಯವಾಗಿ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com