ಗುದನಾಳದಲ್ಲಿ ಟಾಯ್ಲೆಟ್ ಜೆಟ್ ಸ್ಪ್ರೇ ಸಿಕ್ಕಿಹಾಕಿಕೊಂಡ ಯುವಕನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ರಾಣ ಉಳಿಸಿದ ವೈದ್ಯರು!

ವಿಲಕ್ಷಣಕಾರಿ ಘಟನೆಯೊಂದರಲ್ಲಿ ಗುದನಾಳದಲ್ಲಿ ಟಾಯ್ಲೆಟ್ ಜೆಟ್ ಸ್ಪ್ರೇ ಸಿಕ್ಕಿಹಾಕಿಕೊಂಡಿದ್ದ  32 ವರ್ಷದ ಯುವಕನೊಬ್ಬನಿಗೆ ಇಲ್ಲಿನ ಕಿಮ್ಸ್ ಆಸ್ಪತ್ರೆ ವೈದ್ಯರು ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಅದನ್ನು ಹೊರ ತೆಗೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ವಿಲಕ್ಷಣಕಾರಿ ಘಟನೆಯೊಂದರಲ್ಲಿ ಗುದನಾಳದಲ್ಲಿ ಟಾಯ್ಲೆಟ್ ಜೆಟ್ ಸ್ಪ್ರೇ ಸಿಕ್ಕಿಹಾಕಿಕೊಂಡಿದ್ದ  32 ವರ್ಷದ ಯುವಕನೊಬ್ಬನಿಗೆ ಇಲ್ಲಿನ ಕಿಮ್ಸ್ ಆಸ್ಪತ್ರೆ ವೈದ್ಯರು ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಅದನ್ನು ಹೊರ ತೆಗೆದಿದ್ದಾರೆ.

ನವೆಂಬರ್ 20 ಶನಿವಾರ ಬೆಳಗ್ಗೆ ರೋಗಿಯನ್ನು ಆಸ್ಪತ್ರೆಗ ಕರೆದುಕೊಂಡು ಬಂದಾಗ ಅಮಲೇರಿದ ಸ್ಥಿತಿಯಲ್ಲಿ ಕಂಡುಬಂದ. ಮೊದಲಿಗೆ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿತ್ತು. ನಂತರ ಆಪರೇಷನ್ ಮಾಡಿದ್ದಾಗಿ ಕಿಮ್ಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದೆ. ಹೇಗೆ ಅದು ಸಿಕ್ಕಿಹಾಕಿಕೊಂಡಿತ್ತು ಎಂಬುದರ ಬಗ್ಗೆ ಖಚಿತತೆ ಇಲ್ಲ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. 

ಗುದನಾಳದಲ್ಲಿ ಜೆಟ್ ಸ್ಪ್ರೇ ಸಿಕ್ಕಿಹಾಕಿಕೊಂಡಿದ್ದರಿಂದ ರೋಗಿ ಜೋರಾಗಿ ಅಳುತ್ತಿದ್ದ, ಸುಮಾರು ತಾಸುಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ನಂತರ ಆತ ಚೇತರಿಸಿಕೊಂಡಿದ್ದಾನೆ. ಆತನಿಗೂ ಮಾತನಾಡಲು ಆಗುತ್ತಿರಲಿಲ್ಲ ಅಥವಾ ಏನಾಯಿತು ಎಂದು ಹೇಳಲು ಸಹ ಆಗುತ್ತಿರಲಿಲ್ಲ. ಸದ್ಯ ಈಗ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೂ ಮೂರು ದಿನಗಳಲ್ಲಿ ಐಸಿಯುನಿಂದ ಹೊರಗೆ ಬರಲಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಕಿಮ್ಸ್ ಆಸ್ಪತ್ರೆ ವೈದ್ಯರು ನೀಡಿದ ಹೇಳಿಕೆ ಆಧಾರದ ಮೇಲೆ ಭಾನುವಾರ ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಬಂದಿದ್ದ ರೋಗಿ ಬೈರಿದೇವರಕೊಪ್ಪ ಪ್ರದೇಶದ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಅತಿಯಾಗಿ ಮದ್ಯ ಸೇವಿಸಿ ಟಾಯ್ಲೆಟ್ ಜೆಟ್ ಸ್ಪ್ರೇ ಮೇಲೆ ಮಲಗಿದಾಗ ಈ ಘಟನೆ ನಡೆದಿರುವುದಾಗಿ ರೋಗಿ ಹೇಳಿಕೆ ನೀಡಿದ್ದಾನೆ. ನಂತರ ಕೆಲ ಕಾರ್ಮಿಕರು ಶನಿವಾರ ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com