ವಿಶ್ವ ಪರಂಪರೆ ಸಪ್ತಾಹ: ಧಾರವಾಡದ ವರೂರು ಗ್ರಾಮದಲ್ಲಿ 500 ವರ್ಷಗಳ ಹಳೆಯ ದೇವಸ್ಥಾನವನ್ನು ಸ್ವಚ್ಛಗೊಳಿಸಿದ ಗ್ರಾಮಸ್ಥರು!

ಹಲವು ದಶಕಗಳಿಂದ ಹದಗೆಟ್ಟ ಸ್ಥಿತಿಯಲ್ಲಿರುವ 500 ವರ್ಷಗಳ ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಧಾರವಾಡದ ವರೂರು ಗ್ರಾಮಸ್ಥರು ಒಟ್ಟಾಗಿದ್ದಾರೆ. ವಿಶ್ವ ಪರಂಪರೆಯ ದಿನ 2021ರ ಅಂಗವಾಗಿ ಗ್ರಾಮಸ್ಥರು ದೇವಸ್ಥಾನದ ನವೀಕರಣ ಅಥವಾ ಮರುಸ್ಥಾಪನೆ ಕಾರ್ಯವನ್ನು ಭಾಗಶಃ ಮುಗಿಸಿದ್ದಾರೆ. 
ಗ್ರಾಮಸ್ಥರು ಸ್ವಚ್ಛಗೊಳಿಸಿದ ನಂತರ ಧಾರವಾಡದ ವರೂರು ಗ್ರಾಮದಲ್ಲಿ ಕಂಡುಬಂದ ದೇವಸ್ಥಾನದ ನೋಟ
ಗ್ರಾಮಸ್ಥರು ಸ್ವಚ್ಛಗೊಳಿಸಿದ ನಂತರ ಧಾರವಾಡದ ವರೂರು ಗ್ರಾಮದಲ್ಲಿ ಕಂಡುಬಂದ ದೇವಸ್ಥಾನದ ನೋಟ

ಹುಬ್ಬಳ್ಳಿ: ಹಲವು ದಶಕಗಳಿಂದ ಹದಗೆಟ್ಟ ಸ್ಥಿತಿಯಲ್ಲಿರುವ 500 ವರ್ಷಗಳ ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಧಾರವಾಡದ ವರೂರು ಗ್ರಾಮಸ್ಥರು ಒಟ್ಟಾಗಿದ್ದಾರೆ. ವಿಶ್ವ ಪರಂಪರೆಯ ದಿನ 2021ರ ಅಂಗವಾಗಿ ಗ್ರಾಮಸ್ಥರು ದೇವಸ್ಥಾನದ ನವೀಕರಣ ಅಥವಾ ಮರುಸ್ಥಾಪನೆ ಕಾರ್ಯವನ್ನು ಭಾಗಶಃ ಮುಗಿಸಿದ್ದಾರೆ. 

ಹುಬ್ಬಳ್ಳಿ ನಗರದಿಂದ 18 ಕಿಲೋ ಮೀಟರ್ ದೂರದಲ್ಲಿರುವ ವರೂರು ಗ್ರಾಮದ ಕೇಂದ್ರ ಭಾಗದಲ್ಲಿ ಈ ದೇವಸ್ಥಾನವಿದ್ದು ಸರ್ಕಾರ ಮಧ್ಯಪ್ರವೇಶಿಸಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಅದರ ಗತವೈಭವವನ್ನು ಮರುಸ್ಥಾಪಿಸಬೇಕೆಂದು ಕೇಳುತ್ತಿದ್ದಾರೆ.

ಸಿದ್ದರಾಮೇಶ್ವರ ದೇವರಿರುವ ಈ ದೇವಸ್ಥಾನದ ಮಧ್ಯಭಾಗದಲ್ಲಿ ವಿಶಿಷ್ಠವಾದ ಸ್ಥಂಭಗಳಿವೆ. ಹಲವು ವರ್ಷಗಳವರೆಗೆ ದೇವಸ್ಥಾನದ ಆವರಣವನ್ನು ಕೃಷಿ ಉತ್ಪನ್ನಗಳು ಮತ್ತು ಇತರ ಧಾನ್ಯಗಳನ್ನು ಸಂಗ್ರಹಿಸಿಡಲು ಬಳಸಲಾಗುತ್ತಿತ್ತು. ಇದೀಗ ದೇವಸ್ಥಾನವನ್ನು ಹಳೆಯ ಶೈಲಿ, ವಿನ್ಯಾಸಕ್ಕೆ, ಗತವೈಭವಕ್ಕೆ ಮರಳಿಸಲು ಗ್ರಾಮಸ್ಥರು ಪ್ರಯತ್ನಿಸುತ್ತಿದ್ದಾರೆ.

ಸಿದ್ದರಾಮೇಶ್ವರ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲು ಪಂಚಾಯಿತಿಗೆ ಸಮಿತಿ ನೇಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸುಂದರವಾದ ದೇವಾಲಯವನ್ನು ಅಧಿಕಾರಿಗಳು ಮತ್ತು ಗ್ರಾಮಸ್ಥರು ಬಹಳ ಸಮಯದಿಂದ ನಿರ್ಲಕ್ಷಿಸಿದ್ದಾರೆ, ದೇವಾಲಯದ ಸುತ್ತಲಿನ ವಿವಿಧ ಸ್ಥಳಗಳಲ್ಲಿ ಹಲವಾರು ಕಲ್ಲಿನ ಕೆತ್ತನೆಗಳು ಬಿದ್ದಿವೆ, ಅವುಗಳನ್ನು ಸಂಗ್ರಹಿಸಿ ದೇವಾಲಯವನ್ನು ಹಿಂದಿನ ಕಾಲದ ಸೌಂದರ್ಯಕ್ಕೆ ಮರಳಿಸಲು ನಾವು ಅಧಿಕಾರಿಗಳನ್ನು ಕೇಳುತ್ತಿದ್ದೇವೆ. ದೇವಸ್ಥಾನಕ್ಕೆ ಭದ್ರವಾದ ಕಾಂಪೌಂಡ್ ನ ಅವಶ್ಯಕತೆಯಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪವನ್ ಮಿಸ್ಕಿನ್.

ದೇವಸ್ಥಾನವು ಪಂಚಾಯತ್ ಕಛೇರಿಯ ಹಿಂಭಾಗದಲ್ಲಿದೆ. ಕಳೆದ ವಾರ ಗ್ರಾಮಸ್ಥರ ತಂಡ ಸ್ವಚ್ಛತೆ ಕೈಗೊಂಡು ದೇವಸ್ಥಾನದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆಸಿದ್ದರು. ದೇವಸ್ಥಾನದ ಕಂಬಗಳನ್ನೂ ಸ್ವಚ್ಛಗೊಳಿಸಲಾಗಿತ್ತು. ಸ್ಮಾರಕಗಳು ಮತ್ತು ದೇವಸ್ಥಾನದ ಶಿಲ್ಪಗಳು ಹಾಳಾಗಿ ಬಿದ್ದಿದ್ದವು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರ ಸಹಾಯ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮವು ನಗರ ಕೇಂದ್ರಕ್ಕೆ ಹತ್ತಿರದಲ್ಲಿದೆ. ಅನೇಕ ಕುಟುಂಬಗಳು ಯಶಸ್ವಿ ಕೃಷಿಯಲ್ಲಿ ತೊಡಗಿಸಿಕೊಂಡಿವೆ. ಈ ಗ್ರಾಮವು ತನ್ನ ಕೃಷಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು ಹುಬ್ಬಳ್ಳಿಗೆ ಸಮೀಪದಲ್ಲಿದೆ. ಆದರೆ ಈ ಗ್ರಾಮದ ನಿಜವಾದ ಇತಿಹಾಸ ಇನ್ನೂ ತಿಳಿದಿಲ್ಲ. ದೇವಾಲಯದ ಸುತ್ತ ಬಿದ್ದಿರುವ ಶಿಲಾಶಾಸನಗಳನ್ನು ಅಧ್ಯಯನ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡರೆ ಈ ಗ್ರಾಮದ ಇತಿಹಾಸವನ್ನು ಗುರುತಿಸಬಹುದು ಎಂದು ವರೂರಿನ ಗ್ರಾಮಸ್ಥರು ಹೇಳುತ್ತಾರೆ.

ಉತ್ತರ ಕರ್ನಾಟಕದ ಹಲವಾರು ದೇವಾಲಯಗಳು ಮತ್ತು ಸ್ಮಾರಕಗಳ ಬಗ್ಗೆ ತುರ್ತು ಗಮನಹರಿಸಬೇಕು. ಧಾರವಾಡ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಹಲವಾರು ಸುಂದರ ಶಿಲ್ಪಗಳು, ಶಾಸನಗಳು, ಸ್ಮಾರಕಗಳು ಅನಾವಶ್ಯಕವಾಗಿ ಬಿದ್ದಿದ್ದು, ಅವುಗಳನ್ನು ದಾಖಲಿಸಿ ಪುನರ್‌ಸ್ಥಾಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಖ್ಯಾತ ಇತಿಹಾಸತಜ್ಞ ಸ್ವಾಮಿನಾಥನ್ ನಟರಾಜನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com