ಬೆಂಗಳೂರು: ಪಾರ್ಕಿಂಗ್ ಗೆ ಹೊಸ ನೀತಿ, ಸಾರ್ವಜನಿಕ ಸಲಹೆಗಳಿಗೆ ಆಯುಕ್ತ ಕಮಲ್ ಪಂತ್ ಆಹ್ವಾನ

ರಾಜ್ಯ ಸರ್ಕಾರ ಪರಿಗಣಿಸುತ್ತಿರುವ ಬೆಂಗಳೂರಿನ ಹೊಸ ಪಾರ್ಕಿಂಗ್ ನೀತಿಗಾಗಿ ಸಾರ್ವಜನಿಕ ಸಲಹೆಗಳಿಗೆ ನಗರ ಆಯುಕ್ತ ಕಮಲ್ ಪಂತ್ ಆಹ್ವಾನ ನೀಡಿದ್ದಾರೆ. 
ಕಮಲ್ ಪಂತ್
ಕಮಲ್ ಪಂತ್

ಬೆಂಗಳೂರು: ರಾಜ್ಯ ಸರ್ಕಾರ ಪರಿಗಣಿಸುತ್ತಿರುವ ಬೆಂಗಳೂರಿನ ಹೊಸ ಪಾರ್ಕಿಂಗ್ ನೀತಿಗಾಗಿ ಸಾರ್ವಜನಿಕ ಸಲಹೆಗಳಿಗೆ ನಗರ ಆಯುಕ್ತ ಕಮಲ್ ಪಂತ್ ಆಹ್ವಾನ ನೀಡಿದ್ದಾರೆ. 

ರಾಜ್ಯ ಸರ್ಕಾರ ನಗರದ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲು ಮುಂದಾಗಿದ್ದು  ಬದಲಾವಣೆಗಳನ್ನು ಜಾರಿಗೆ ತರುವ ಯೋಜನೆ ಹೊಂದಿದೆ. ಬೆಂಗಳೂರು ನಗರದಲ್ಲಿ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವುದು ಹೇಗೆ ಎಂಬುದರ ಬಗ್ಗೆ ನೆಟ್ಟಿಗರಿಂದ ಪಂತ್ ಸಲಹೆ ಕೇಳಿದ್ದಾರೆ. 

ನಗರದಲ್ಲಿ ಅಕ್ರಮ ಪಾರ್ಕಿಂಗ್ ಸೇರಿದಂತೆ ಪಾರ್ಕಿಂಗ್ ಸ್ಥಳಗಳಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಜನತೆ ಪಾರ್ಕಿಂಗ್ ಜಾಗಗಳ ಕೊರತೆ, ಅದರಿಂದ ರಸ್ತೆಗಳಲ್ಲಿ ಉಂಟಾಗುತ್ತಿರುವ ಅಡಚಣೆ ಬಗ್ಗೆ ದೂರುತ್ತಿದ್ದಾರೆ. ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನೀಡಲಾಗಿರುವ ಪಾರ್ಕಿಂಗ್ ನೀತಿಯನ್ನೇ ಸದ್ಯಕ್ಕೆ ಪರಿಗಣಿಸಲಾಗಿದೆ ಎಂದು ಪಂತ್ ಮಾಹಿತಿ ನೀಡಿದ್ದಾರೆ.
 
ಪಾರ್ಕಿಂಗ್ ನೀತಿ 2.0 ನ ಕರಡು ಪ್ರತಿಯನ್ನು ಡಿಯುಎಲ್ ಟಿ ನೀಡಿದ್ದು, ಸರ್ಕಾರ ಫೆಬ್ರವರಿಯಲ್ಲಿ ಅನುಮೋದನೆ ನೀಡಿತ್ತು. ಆದರೆ ಈ ನೀತಿ ಜಾರಿಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ, ನೀತಿ ಜಾರಿಯ ಬಗ್ಗೆ ಸಮಾಲೋಚನೆ ಪ್ರಗತಿಯಲ್ಲಿದೆ ಎಂದು ಪಂತ್ ತಿಳಿಸಿದ್ದಾರೆ. 

ಈ ನೀತಿ ಜಾರಿಯಾದಲ್ಲಿ ಬೆಂಗಳೂರಿನ ಪಾರ್ಕಿಂಗ್ ಜಾಗಗಳ ಕೊರತೆಯ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ನಿಗದಿತ ಸ್ಥಳಗಳಲ್ಲಿ ವಾರ್ಷಿಕ ಮೊತ್ತವನ್ನು ಪಾವತಿ ಮಾಡಿ ವಾಹನ ನಿಲುಗಡೆ ನೀತಿಯ ಪ್ರಮುಖ ಅಂಶವಾಗಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com