ಮಳೆ ಅನಾಹುತ: ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ, ಕಾಲುವೆ ಕಬಳಿಸಿ ಕಾಂಪೌಂಡ್‌ ನಿರ್ಮಿಸಿದ್ದರಿಂದ ಅನಾಹುತ

ಸಣ್ಣ ಪ್ರಮಾಣದ ಮಳೆಯಾದರೂ ನಗದರ ರಸ್ತೆಗಳಲ್ಲಿ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಣ್ಣ ಪ್ರಮಾಣದ ಮಳೆಯಾದರೂ ನಗದರ ರಸ್ತೆಗಳಲ್ಲಿ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಜನರ ಸಂಕಷ್ಟಕ್ಕೆ ಜೌಗು ಪ್ರದೇಶಗಳು ಮತ್ತು ಬಫರ್ ವಲಯಗಳ ಅತಿಕ್ರಮಣ, ಪರಿಸರ ನಾಶ, ಕಾಂಕ್ರೀಟೀಕರಣ ಈ ಪರಿಸ್ಥಿತಿಗೆ ಕಾರಣವೆಂದು ಹೇಳಲಾಗುತ್ತಿದೆ.

ನಿವೃತ್ತ ಅರಣ್ಯಾಧಿಕಾರಿ ಮತ್ತು ಖ್ಯಾತ ತಜ್ಞ ಎಎನ್ ಯಲ್ಲಪ್ಪ ರೆಡ್ಡಿ ಅವರು ಮಾತನಾಡಿ, ನಾನು ಎಟಿ ರಾಮಸ್ವಾಮಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು 40,000 ಎಕರೆ ಗೋಮಾಳ ಭೂಮಿಯನ್ನು ಅತಿಕ್ರಮಿಸಿದ ಭೂ ಒತ್ತುವರಿ ಕುರಿತು ವರದಿಯನ್ನು ಸಿದ್ಧಪಡಿಸಿದ್ದೇನೆ. ಆದರೆ ಈಗ ವರದಿ ಎಲ್ಲಿದೆ? ಭೂಮಿ ವಶಪಡಿಸಿಕೊಳ್ಳುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಯಾದಾಗ ಚರಂಡಿ ನೀರಿಗೆ ಮಳೆ ನೀರು ಮಿಶ್ರಣಗೊಳ್ಳುತ್ತವೆ. ಇದರಿಂದ ಚರಂಡಿಯ ನೀರಿನ ಹರಿವು ಹೆಚ್ಚಾಗುತ್ತದೆ. ಮಳೆ ನೀರು, ರಾಜಕಾಲುವೆಗಳು ಎಂದರೆ 30-60 ಅಡಿ ಅಳತೆಯ ದೊಡ್ಡ ಚರಂಡಿಗಳು. ಆದರೆ ಪ್ರಸ್ತುತ, ಅದರ ಅಳತೆ 8-10 ಅಡಿ ಗಳಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈವರೆಗೆ ಸುರಿದ ಮಳೆಯನ್ನು ಕಲ್ಯಾಣಿಗಳು, ಜಲಮೂಲಗಳು ಮತ್ತು ಇತರ ಮೂಲಗಳಲ್ಲಿ ಸರಿಯಾಗಿ ಸಂಗ್ರಹಿಸಿದ್ದರೆ, ಮುಂದಿನ ಮೂರು ವರ್ಷಗಳವರೆಗೆ ನಗರದ ನೀರು ಸರಬರಾಜು ಅಗತ್ಯಗಳನ್ನು ಪೂರೈಸಲು ಸಹಾಯಕವಾಗುತ್ತಿತ್ತು. ನೀರು ಸಂರಕ್ಷಿಸುವ ಚಿಂತನೆಗಳ ಬದಲಿಗೆ ಸರ್ಕಾರ ಚರಂಡಿಗಳ ಸಂಖ್ಯೆಯನ್ನೇ ಹೆಚ್ಚಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ನಿವೃತ್ತ ವೈಜ್ಞಾನಿಕ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ಚರಂಡಿಗಳನ್ನು ಮರುರೂಪಿಸುವಾಗ, ನೀರುವ ಸಾಗುವ ಮಾರ್ಗವನ್ನು ಕೂಡ ಬದಲಾಯಿಸಲಾಗಿದೆ, ಇದು ಪ್ರಸ್ತುತದ ಸ್ಥಿತಿದೆ ಒಂದು ಕಾರಣವಾಗಿದೆ. ಕಾಂಕ್ರೀಟೀಕರಣದ ಕಾರಣ ನೈಸರ್ಗಿಕ ಪರ್ಕೋಲೇಷನ್ ವ್ಯವಸ್ಥೆಗಳು ನಾಶಗೊಂಡಿವೆ. ಮೂಲಭೂತ ಅಂಶಗಳನ್ನು ಎಂಜಿನಿಯರ್‌ಗಳು ಅರ್ಥಮಾಡಿಕೊಳ್ಳುತ್ತಿಲ್ಲ. ಸರ್ಕಾರ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದ್ದರೂ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಖ್ಯಾತ ನಗರ ಯೋಜಕ ವಿ ರವಿಚಂದರ್ ಅವರು ಮಾತನಾಡಿ, ಯೋಜನೆ ಮಾಡುವಾಗ ಸರ್ಕಾರವು ಹಳೆಯ ಅಂಕಿಅಂಶಗಳನ್ನು ಬಳಕೆ ಮಾಡುತ್ತಿದೆ. ಆಧಾರವೆಂದು 70 ಮಿಮೀ ಮಳೆಯನ್ನು ತೆಗೆದುಕೊಳ್ಳುವ ಬದಲು ಸರ್ಕಾರ 130 ಮಿಮೀ ಎಂದು ತೆಗೆದುಕೊಳ್ಳಬೇಕು. 15 ವರ್ಷಗಳಿಂದ ಮಳೆನೀರು ಚರಂಡಿ ಮರುನಿರ್ಮಾಣ ನಡೆಯುತ್ತಿದೆ, ಆದರೆ ಇದುವರೆಗೆ ಸಮಗ್ರ ವಿಧಾನದಿಂದ ನಿರ್ಮಾಣ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಟಿ.ವಿ.ರಾಮಚಂದ್ರ ಮಾತನಾಡಿ, ಸರ್ಕಾರಿ ಅಧಿಕಾರಿಗಳ ಜ್ಞಾನಕ್ಕೆ ಹೋಲಿಸಿದರೆ ಸಾಮಾನ್ಯ ಜನರು ಹೆಚ್ಚು ಪರಿಸರ ಪ್ರಜ್ಞೆ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com