ರಾಜ್ಯದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್ಚಳ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

ಹಿಂದಿನ ಸಮೀಕ್ಷೆಯ ಫಲಿತಾಂಶಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವಿವಾಹಿತ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮತ್ತು ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ ಎಂದು ಇತ್ತೀಚಿನ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಿಂದಿನ ಸಮೀಕ್ಷೆಯ ಫಲಿತಾಂಶಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವಿವಾಹಿತ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮತ್ತು ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ ಎಂದು ಇತ್ತೀಚಿನ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಈ ಹಿಂದಿನ ಸಮೀಕ್ಷೆಯಲ್ಲಿ 18 ಮತ್ತು 49 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಹಾಗೂ ವೈಮಾಹಿಕ ಮಹಿಳೆಯರ ಮೇಲೆ ಶೇ.20.6ರಷ್ಟಿದ್ದ ದೌರ್ಜನ್ಯ ಪ್ರಕರಣಗಳು ಈ ಬಾರಿ ಶೇ.44.4ರಷ್ಟಕ್ಕೆ ಏರಿಕೆಯಾಗಿರುವುದು ಹಾಗೂ 18 ವರ್ಷ ವಯಸ್ಸಿನೊಳಗಿನ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಶೇ.10.3ರಿಂದ ಶೇ.11ಕ್ಕೆ ಏರಿಕೆಯಾಗಿರುವುದು ವರದಿಯಲ್ಲಿ ತಿಳಿಸಿದೆ.

ಹೊಡೆಯುವುದು, ತಳ್ಳುವುದು, ಅಲುಗಾಡಿಸುವುದು, ಅವರ ಮೇಲೆ ಏನನ್ನಾದರೂ ಎಸೆಯುವುದು, ತೋಳುಗಳನ್ನು ತಿರುಗಿಸುವುದು, ಕೂದಲನ್ನು ಎಳೆಯುವುದು, ಒದೆಯುವುದು, ಎಳೆಯುವುದು, ಮುಷ್ಟಿಯಿಂದ ಗುದ್ದುವುದು ಹೀಗೆ ನಾನಾ ರೂಪದಲ್ಲಿ ಮಹಿಳೆಯರನ್ನು ಹಿಂಸಿಸಲಾಗುತ್ತಿದೆ. ದೌರ್ಜನ್ಯ ಪ್ರಕಱಣಗಳು ನಗರದ ಪ್ರದೇಶಗಳಿಗಿಂತ (ಶೇ 48) ಗ್ರಾಮೀಣ ಪ್ರದೇಶಗಳಲ್ಲಿ (ಶೇ 49) ಹೆಚ್ಚಾಗಿರುವುದು ಕಂಡು ಬಂದಿದೆ.

“18-49 ವರ್ಷ ವಯಸ್ಸಿನ ಶೇ.8ರಷ್ಟು ವಿವಾಹಿತ ಮಹಿಳೆಯರ ಮೇಲೆ ಅವರ ತಮ್ಮ ಗಂಡಂದಿರು ತಮಗೆ ಇಷ್ಟವಿಲ್ಲದಿದ್ದರೂ ಬಲವಂತದಿಂದ, ಬೆದರಿಕೆ ಹಾಕಿ, ಒತ್ತಾಯಪೂರ್ವಕವಾಗಿ ದೈಹಿಕವಾಗಿ ಲೈಂಗಿಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದಾರೆಂದು ವರದಿಯಲ್ಲಿ ತಿಳಿಸಿದೆ.

ಕೋವಿದ್ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಗಂಡಂದಿರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಹೆಚ್ಚು ಸಮಯ ಕಳೆಯುತ್ತಿದ್ದು, ಇದರಿಂದಾಗಿ ಮಹಿಳೆಯರ ಮೇಲೆ ಹಿಂಸಾಚಾರ ಹೆಚ್ಚಾಗಿದೆ ಎಂದು ಎನ್'ಜಿಒ ಸಂಸ್ಥೆಯೊಂದರ ಸದಸ್ಯೆ ಮಮತಾ ಯಜಮಾನ್ ಅವರು ಹೇಳಿದ್ದಾರೆ.

“ಕೆಲವು ಸಂದರ್ಭಗಳಲ್ಲಿ, ಗಂಡನಿಂದ ಹಿಂಸಾಚಾರವು ಸಾಮಾನ್ಯವಾಗಿರುತ್ತದೆ. ಇತರ ಸಂದರ್ಭಗಳಲ್ಲಿ ಮದ್ಯದ ಅಮಲಿನಲ್ಲಿದ್ದಾಗಲೂ ದೌರ್ಜನ್ಯಗಳಾಗುವುದು ಕಂಡು ಬರುತ್ತದೆ. ಇಡೀ ವ್ಯವಸ್ಥೆಯು ಪಿತೃಪ್ರಧಾನ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಇಂತಹ ಸಂದರ್ಭದಲ್ಲಿ ಪೊಲೀಸರಿಂದಲೂ ಯಾವುದೇ ಸಹಾಯವಾಗುವುದಿಲ್ಲ. ಕೆಲವೊಮ್ಮೆ ಮಹಿಳೆಯರು ದೂರು ನೀಡಿದರೂ ಕೂಡ ನ್ಯಾಯ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪತ್ನಿ ಮೇಲೆ ಕೈ ಮಾಡುವುದು ನ್ಯಾಯಯುತ ಎಂದ ಶೇ.82ರಷ್ಟು ಪುರುಷರು
ಆಶ್ಚರ್ಯಕರವಾದ ವಿಚಾರವಂದರೆ ಶೇ.82ರಷ್ಟು ಪುರುಷರು ಪತ್ನಿಯರ ಮೇಲೆ ಕೈ ಮಾಡುವುದನ್ನು ನ್ಯಾಯಯುತ ಎಂದು ಹೇಳಿದ್ದಾರೆ.

ಕೆಲವು ಸಂದರ್ಭದಲ್ಲಿ ಪತ್ನಿಯರನ್ನು ಹೊಡೆಯುವುದು ನ್ಯಾಯಯುತವಾಗಿರುತ್ತದೆ. ಪ್ರಮುಖವಾಗಿ ಅತ್ತೆಗೆ ಅಗೌರವ ತೋರಿಸಿದರೆ, ವಿಶ್ವಾಸದ್ರೋಹ ಮಾಡಿದರೆ ಅಥವಾ ಮನೆ, ಮಕ್ಕಳನ್ನು ನಿರ್ಲಕ್ಷಿಸಿದರೆ ಹೊಡೆಯುವುದು ನ್ಯಾಯಯುತ ಎಂದು ತಿಳಿಸಿರುವುದು ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com