ಬೆಂಗಳೂರಿನ ಕಂದಾಯ ಗುಪ್ತಚರ ಇಲಾಖೆ ಕಾರ್ಯಾಚರಣೆ: ಮುಂಬೈ ವಿಮಾನ ನಿಲ್ದಾಣದಲ್ಲಿ 3.7 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ಕಂದಾಯ ಗುಪ್ತಚರ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ 3.7 ಕೋಟಿ ರೂ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ.
Published: 27th November 2021 01:45 PM | Last Updated: 27th November 2021 02:07 PM | A+A A-

ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಡಿಆರ್ ಐ ಕಾರ್ಯಾಚರಣೆ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ಕಂದಾಯ ಗುಪ್ತಚರ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ 3.7 ಕೋಟಿ ರೂ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಜತೆ ಮಹಿಳೆ ರಂಪಾಟ, ಪ್ರಕರಣ ದಾಖಲು
ಈ ಹಿಂದೆ ಅಕ್ಟೋಬರ್ 1 ರಂದು ಮಿಕ್ಸರ್ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಪತ್ತೆ ಹಚ್ಚಿದ ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತಂಡವು ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ
ಸುಮಾರು 3.7 ಕೋಟಿ ರೂ. ಅಕ್ರಮ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ.
ಕ್ಯಾರಿ-ಆನ್ ಲಗೇಜ್‌ನ ಬಹಳ ಚತುರತೆಯಿಂದ ವಿನ್ಯಾಸಗೊಳಿಸಿ ತಳದಲ್ಲಿ ಕರೆನ್ಸಿಯನ್ನು ಆಳವಾಗಿ ಮರೆಮಾಡಲಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತದ ಹೊರಗೆ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಲು ಯೋಜಿಸಿದ ಇಬ್ಬರು ಪ್ರಯಾಣಿಕರ ಮೇಲೆ 'ಆಪರೇಷನ್ ಚೆಕ್ ಶರ್ಟ್ಸ್' ಅಡಿಯಲ್ಲಿ ಡೇಟಾ ವಿಶ್ಲೇಷಣೆಯನ್ನು ಬಳಸಿಕೊಂಡು DRI ಶೋಧ ನಡೆಸಿತ್ತು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಪ್ರಯಾಣಿಕರಿಂದ ಸುಮಾರು 3 ಕೆಜಿ ಚಿನ್ನ ವಶ
"ಶುಕ್ರವಾರದ ಮುಂಜಾನೆ ಅನುಮಾನಾಸ್ಪದ ಪ್ರಯಾಣಿಕರು ಶಾರ್ಜಾಕ್ಕೆ ಹೋಗುತ್ತಿದ್ದಾಗ ಅವರನ್ನು ಅಧಿಕಾರಿಗಳು ತಡೆದು ಅವರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಿದಾಗ ಅದರಲ್ಲಿ 3.7 ಕೋಟಿ ಮೌಲ್ಯದ ಯುಎಸ್ ಡಾಲರ್ ಮತ್ತು ಸೌದಿ ದಿರ್ಹಾಮ್‌ಗಳ ರೂಪದಲ್ಲಿ ವಿದೇಶಿ ಕರೆನ್ಸಿಗಳು ದೊರೆತಿದೆ. ವಿಮಾನ ಪ್ರಯಾಣಿಕರು ಕರೆನ್ಸಿಯನ್ನು ಹೊಂದಲು ಅಥವಾ ರಫ್ತು ಮಾಡಲು ಕಾನೂನು ದಾಖಲೆಗಳನ್ನು ಹೊಂದಿರಬೇಕು. ಆದರೆ ಈ ಪ್ರಯಾಣಿಕರು ದಾಖಲೆಗಳನ್ನು ಹೊಂದಿರಲಿಲ್ಲ. ಹೀಗಾಗಿ ಇದನ್ನು ಕಸ್ಟಮ್ಸ್ ಆಕ್ಟ್ 1962 ರ ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ವಶಪಡಿಸಿಕೊಂಡ ನಾಲ್ಕನೇ ಪ್ರಕರಣ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.