'ವೈರಲ್ ಆಗಿರುವ ವಾಟ್ಸಾಪ್ ಚಾಟ್ ಫೇಕ್, ಯುವತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ': ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ
ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ದೆಹಲಿ ಮೂಲದ ಯುವತಿ ತಮ್ಮ ಮೇಲೆ ಗಂಭೀರ ಆರೋಪ ಮಾಡಿರುವ ಬಗ್ಗೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಪ್ರತಿಕ್ರಿಯಿಸಿದ್ದಾರೆ.
Published: 27th November 2021 10:04 AM | Last Updated: 27th November 2021 10:24 AM | A+A A-

ಸ್ನೇಹಲ್ ಲೋಖಂಡೆ
ಕಲಬುರಗಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ದೆಹಲಿ ಮೂಲದ ಯುವತಿ ತಮ್ಮ ಮೇಲೆ ಗಂಭೀರ ಆರೋಪ ಮಾಡಿರುವ ಬಗ್ಗೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಮೇಲೆ ಬಂದಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳಾಗಿದ್ದು ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ.ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಾಟ್ಸಾಪ್ ಚಾಟ್ ಗಳು ಫೇಕ್, ಪೊಲೀಸರಿಗೆ ದೂರು ನೀಡಿದ್ದು ತನಿಖೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಯುವತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಶರ್ಟ್ ಹಾಕದಿರುವ ತಮ್ಮ ಫೋಟೋ ಎಲ್ಲಿಂದ ತೆಗೆದುಕೊಂಡರೆಂದು ಗೊತ್ತಾಗುತ್ತಿಲ್ಲ, ಈ ಬಗ್ಗೆ ಟ್ವಿಟ್ಟರ್, ವಾಟ್ಸಾಪ್ ಸಂಸ್ಥೆಗಳಿಗೂ ವರದಿ ಮಾಡಿದ್ದೇನೆ ಎಂದರು.
ನನಗೆ ಯುವತಿ ಯಾರು ಎಂದೇ ಗೊತ್ತಿಲ್ಲ, ಆಕೆಯ ಜೊತೆ ಸಂಬಂಧವೂ ಇಲ್ಲ.ಯುವತಿ ಪತ್ರದಲ್ಲಿ ಹೇಳಿರುವುದೆಲ್ಲಾ ಫೇಕ್ ಈವರೆಗೆ ನನಗೆ ಯಾವುದೇ ಬ್ಲ್ಯಾಕ್ ಮೇಲ್ ಮಾಡಿಲ್ಲ, ಯುವತಿ ಮಾಡಿರುವ ಟ್ವೀಟ್ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು.