ಕುಮಾರಸ್ವಾಮಿ ಲೇಔಟ್ ನಲ್ಲಿ ಮಹಿಳೆ ಮನೆಯಲ್ಲಿ ದರೋಡೆ ಪ್ರಕರಣ: ಪೊಲೀಸರ ಗಸ್ತು ಹೆಚ್ಚಳ
ಕುಮಾರಸ್ವಾಮಿ ಲೇಔಟ್ ಮತ್ತು ಸುದ್ದಗುಂಟೆಪಾಳ್ಯದಲ್ಲಿ ಎರಡು ದರೋಡೆ ಪ್ರಕರಣಗಳು ವರದಿಯಾದ ಒಂದು ದಿನದ ನಂತರ ದಕ್ಷಿಣ ವಿಭಾಗದ ಪೊಲೀಸರು ಶನಿವಾರ ತಮ್ಮ ವ್ಯಾಪ್ತಿಯಲ್ಲಿ ಗಸ್ತು ತೀವ್ರಗೊಳಿಸಿದ್ದಾರೆ.
Published: 28th November 2021 08:12 AM | Last Updated: 28th November 2021 08:12 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಮತ್ತು ಸುದ್ದಗುಂಟೆಪಾಳ್ಯದಲ್ಲಿ ಎರಡು ದರೋಡೆ ಪ್ರಕರಣಗಳು ವರದಿಯಾದ ಒಂದು ದಿನದ ನಂತರ ದಕ್ಷಿಣ ವಿಭಾಗದ ಪೊಲೀಸರು ಶನಿವಾರ ತಮ್ಮ ವ್ಯಾಪ್ತಿಯಲ್ಲಿ ಗಸ್ತು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ತಮ್ಮನಿಂದಲೇ ಅಕ್ಕನಿಗೆ ಸುಪಾರಿ: 7 ತಿಂಗಳ ಹಿಂದಿನ ಹತ್ಯೆ ರಹಸ್ಯ ಬಯಲು ಮಾಡಿದ ಪೊಲೀಸರು!
ಶುಕ್ರವಾರ ಶಸ್ತ್ರಧಾರಿ ದುಷ್ಕರ್ಮಿಗಳು ಮಹಿಳೆ ಮತ್ತು ವೃದ್ಧ ದಂಪತಿಯ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು. ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಚಂದ್ರಾನಗರದ ಪೈಪ್‍ಲೈನ್ ನಲ್ಲಿನ ತನ್ನ ಮನೆಯ ಎರಡನೇ ಮಹಡಿಯಲ್ಲಿ 56 ವರ್ಷದ ಚಿತ್ರಾ ಎಂಬ ಮಹಿಳೆ ಒಬ್ಬರೇ ಇದ್ದಾಗ ಶಸ್ತ್ರಸಜ್ಜಿತ ಗ್ಯಾಂಗ್ ನುಗ್ಗಿ ಆಕೆಯ ಚಿನ್ನಾಭರಣಗಳನ್ನು ನೀಡುವಂತೆ ಒತ್ತಾಯಿಸಿದ್ದರು. ಬಳಿಕ ಈ ಗ್ಯಾಂಗ್ ಪರಾರಿಯಾಗುವ ಮೊದಲು ಪೂಜಾ ಕೊಠಡಿಯಲ್ಲಿದ್ದ 1000 ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಅಲ್ಲದೆ 50 ಸಾವಿರ ರೂ. ಬೆಲೆಯ ಉಂಗುರ, ಓಲೆ ಹಾಗೂ ದೇವರ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನೌಕರಿ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ, ನಕಲಿ ಸರ್ಕಾರಿ ಅಧಿಕಾರಿ ಬಂಧನ
ನಿನ್ನೆ ಸಂಜೆ 4.30ರಿಂದ 5 ಗಂಟೆ ಮಧ್ಯೆ ಮೂವರು ದರೋಡೆಕೋರರು ಮನೆಗೆ ನುಗ್ಗಿ ಚಿತ್ರಾ ಅವರನ್ನು ಬೆದರಿಸಿ ಉಂಗುರ, ಓಲೆ ಬಿಚ್ಚಿಸಿಕೊಂಡ ನಂತರ ದೇವರ ಕೋಣೆಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ನಂತರ ಚಿತ್ರಾ ಅವರು ಅಳಿಯ-ಮಗಳಿಗೆ ವಿಷಯ ತಿಳಿಸಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಮನೆಯ ಸುತ್ತಮುತ್ತ ಹಾಗೂ ಆ ರಸ್ತೆಯಲ್ಲಿರುವ ಸಿಸಿ ಟಿವಿ ಪುಟೇಜ್‍ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹುಡುಗಿಯರ ಜೊತೆ ಚಾಟಿಂಗ್ ಹುಚ್ಚು ತಂದ ಆಪತ್ತು!; ಕಾಟನ್ ಪೇಟೆ ಬಟ್ಟೆ ವ್ಯಾಪಾರಿಗೆ ಐಎಸ್ಐ ಜೊತೆ ಲಿಂಕ್
ಮತ್ತೊಂದು ಘಟನೆಯಲ್ಲಿ ಸುದ್ದುಗುಂಟೆಪಾಳ್ಯದ ಕೃಷ್ಣಮೂರ್ತಿ ಲೇಔಟ್ ನಿವಾಸಿ ಸತೀಶ್ (65 ವರ್ಷ) ಪತ್ನಿಯೊಂದಿಗೆ ಊಟ ಮಾಡುತ್ತಿದ್ದಾಗ ಕಾಲಿಂಗ್ ಬೆಲ್ ಹೊಡೆದ ದುಷ್ಕರ್ಮಿಗಳು, ಬಾಗಿಲು ತೆಗೆದಾಗ ಒಳಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಒಳಗೆ ನುಗ್ಗಿ ದಂಪತಿಗೆ ಬೆದರಿಕೆ ಹಾಕಿ 15 ಸಾವಿರ ಹಾಗೂ 95 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದು, ಆದರೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಎರಡು ಘಟನೆಗಳಲ್ಲಿ ಬೇರೆ ಬೇರೆ ಗ್ಯಾಂಗ್‌ಗಳು ಭಾಗಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.