ವಿಧಾನಸಭೆ ಅಧಿವೇಶನದ ಮೇಲೂ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಕರಿನೆರಳು!

ದಕ್ಷಿಣ ಆಫ್ರಿಕಾ ಮೂಲದ ಕೋವಿಡ್ ಹೊಸ ರೂಪಾಂತರ ತಳಿ ಓಮಿಕ್ರಾನ್ ಕರಿನೆರಳು ಇದೀಗ ಡಿಸೆಂಬರ್ 13-24 ರಂದು ನಡೆಯಬೇಕಿದ್ದ ರಾಜ್ಯದ ವಿಧಾನಸಭೆ ಅಧಿವೇಶನದ ಮೇಲೂ ಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಕ್ಷಿಣ ಆಫ್ರಿಕಾ ಮೂಲದ ಕೋವಿಡ್ ಹೊಸ ರೂಪಾಂತರ ತಳಿ ಓಮಿಕ್ರಾನ್ ಕರಿನೆರಳು ಇದೀಗ ಡಿಸೆಂಬರ್ 13-24 ರಂದು ನಡೆಯಬೇಕಿದ್ದ ರಾಜ್ಯದ ವಿಧಾನಸಭೆ ಅಧಿವೇಶನದ ಮೇಲೂ ಬಿದ್ದಿದೆ.
     
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ವಾರ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಒಂದು ವೇಳೆ ಅಧಿವೇಶನ ಮುಂದೂಡಲ್ಪಟ್ಟರೂ ಕೂಡ ಶೀಘ್ರದಲ್ಲಿಯೇ ಅಧಿವೇಶನ ನಡೆಸಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಇದೆ. ಏಕೆಂದರೆ ಶಾಸಕಾಂಗವು ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಬೇಕಾಗಿದೆ, ವಿಶೇಷವಾಗಿ ಹಣಕಾಸುಕ್ಕೆ ಸಂಬಂಧಿಸಿದ ಮಸೂದೆಗಳು ಅಂಗೀಕಾರಗೊಳ್ಳುವುದು ಅಗತ್ಯವಾಗಿದೆ.

ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರಮುಖವಾಗಿ ಇತರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಆಡಳಿತ ಮಂಡಳಿಯು ಮಹಾರಾಷ್ಟ್ರ ಗಡಿ ಪ್ರದೇಶದ ಬಳಿ ಕಣ್ಗಾವಲನ್ನು ಹೆಚ್ಚಿಸಿದೆ.

ಈ ನಡುವೆ ಅಧಿವೇಶನಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com