ಬಿಟ್‌ಕಾಯಿನ್ ಹಗರಣ: ವಾರಾಂತ್ಯದಲ್ಲಿ ಸಿಐಡಿಯಿಂದ ಚಾರ್ಜ್'ಶೀಟ್ ಸಲ್ಲಿಕೆ ಸಾಧ್ಯತೆ
ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಸೆಲ್‌ನಿಂದ 11.5 ಕೋಟಿ ಹಣವನ್ನು ಹ್ಯಾಕ್ ಮಾಡಿ ಕಬಳಿಸಿದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಇತರರ ವಿರುದ್ಧ ಅಪರಾಧ ತನಿಖಾ ದಳ (ಸಿಐಡಿ)ದ ಅಧಿಕಾರಿಗಳು ಈ ವಾರಾಂತ್ಯದೊಳಗೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
Published: 30th November 2021 09:00 AM | Last Updated: 30th November 2021 02:02 PM | A+A A-

ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ
ಬೆಂಗಳೂರು: ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಸೆಲ್‌ನಿಂದ 11.5 ಕೋಟಿ ಹಣವನ್ನು ಹ್ಯಾಕ್ ಮಾಡಿ ಕಬಳಿಸಿದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಇತರರ ವಿರುದ್ಧ ಅಪರಾಧ ತನಿಖಾ ದಳ (ಸಿಐಡಿ)ದ ಅಧಿಕಾರಿಗಳು ಈ ವಾರಾಂತ್ಯದೊಳಗೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ವಿಚಾರಣೆ ಆರೋಪಿ ಶ್ರೀಕಿ ಗುತ್ತಿಗೆದಾರನಾಗಿರುವ ತನ್ನ ಸ್ನೇಹಿತ ಮತ್ತು ಸಹ ಆರೋಪಿಯ ಒತ್ತಾಯದ ಮೇರೆಗೆ ಸರ್ಕಾರಿ ಪೋರ್ಟಲ್ ಅನ್ನು ಹ್ಯಾಕ್ ಮಾಡಿ ರೂ.11.55 ಕೋಟಿ ದರೋಡೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ. ಆದರೆ, ಈ ಸಂಬಂಧ ಸಿಐಡಿ ಅಧಿಕಾರಿಗಳು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸದೆ, ತನಿಖೆಯನ್ನು ಬಿಗಿಗೊಳಿಸಿದ್ದಾರೆಂದು ತಿಳಿದುಬಂದಿದೆ.
2018ರ ಆಗಸ್ಟ್ ತಿಂಗಳಿನಲ್ಲಿ ಸಲ್ಮಾಪ್ ಬಳಸಿಕೊಂಡು ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಸೆಲ್‌ನ್ನು ಹ್ಯಾಕ್ ಮಾಡಲು ಮೊದಲು ಪ್ರಯತ್ನಿಸಲಾಗಿತ್ತು. ಆದರೆ, ಅದು ಯಶಸ್ವಿಯಾಗಿರಲಿಲ್ಲ. 2019 ರಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಶನ್ ದುರ್ಬಳಕೆ ಮಾಡಿಕೊಂಡು ಬಿಡ್‌ದಾರರ ಮಾಹಿತಿ ಪಡೆದುಕೊಳ್ಳಲಾಗಿತ್ತು. ಬಳಿಕ ಬಿಡ್ ಗಳಿಗೆ ಸಂಬಂಧಿಸಿದಂತೆ ಎಲ್ಲಾ ಫೈಲ್, ವಹಿವಾಟಿನ ವಿವರಗಳು, ಪಾವತಿಯ ಮೊತ್ತ, ಐಎಫ್‌ಎಸ್‌ಸಿ ಕೋಡ್‌ಗಳು ಮತ್ತು ಬಿಡ್ದಾರರ ಖಾತೆ ಸಂಖ್ಯೆಗಳನ್ನು ಒಳಗೊಂಡಿರುವ ಎಕ್ಸೆಲ್ ಶೀಟ್ ಫೈಲ್‌ಗಳನ್ನು ಇತರೆ ಮಾಹಿತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲಾಗಿತ್ತು ಎಂದು ಶ್ರೀಕಿ ವಿಚಾರವಣೆ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದು, ಮಾಡಿದ್ದ ಅಪರಾಧವನ್ನು ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಜಾರಿ ನಿರ್ದೇಶನಾಲಯವು ಸಿಸಿಬಿಗೆ ಪತ್ರ ಬರೆದಿದ್ದು, ಶ್ರೀಕಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಬಿಟ್ ಕಾಯಿನ್ ಹಗರಣ ಪ್ರಕರಣ ಸಂಬಂಧ ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.