ನಿರ್ಬಂಧಗಳ ಸಡಿಲಿಕೆಯ ಹೊರತಾಗಿಯೂ ಸದ್ಯಕ್ಕೆ ಇಲ್ಲ ಬಿಎಂಟಿಸಿ ಬಸ್ ಗಳ ಸಂಖ್ಯೆ ಹೆಚ್ಚಳ 

ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಹತೋಟಿಗೆ ಬಂದಂತೆ ತೋರುತ್ತಿದ್ದು ಶಾಲಾ-ಕಾಲೇಜುಗಳು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿನ ನಿರ್ಬಂಧಗಳ ಸಡಿಲಿಕೆ ಮುಂದುವರೆದಿದರೂ ಸದ್ಯಕ್ಕೆ ಬಿಎಂಟಿಸಿಬಸ್ ಗಳ ಸಂಖ್ಯೆಯಂತೂ ಹೆಚ್ಚಳವಾಗುವ ಲಕ್ಷಣಗಳಿಲ್ಲ.
ಬಿಎಂಟಿಸಿ ಬಸ್
ಬಿಎಂಟಿಸಿ ಬಸ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಹತೋಟಿಗೆ ಬಂದಂತೆ ತೋರುತ್ತಿದ್ದು ಶಾಲಾ-ಕಾಲೇಜುಗಳು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿನ ನಿರ್ಬಂಧಗಳ ಸಡಿಲಿಕೆ ಮುಂದುವರೆದಿದರೂ ಸದ್ಯಕ್ಕೆ ಬಿಎಂಟಿಸಿಬಸ್ ಗಳ ಸಂಖ್ಯೆಯಂತೂ ಹೆಚ್ಚಳವಾಗುವ ಲಕ್ಷಣಗಳಿಲ್ಲ.

6-12 ವರೆಗಿನ ತರಗತಿಗಳು ಆನ್ ಲೈನ್ ನಿಂದ ಆಫ್ ಲೈನ್ ಗೆ ಬದಲಾವಣೆಯಾಗಿದ್ದು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಪ್ರಾರಂಭಿಸಿದ್ದಾರೆ. ಈ ವರೆಗೂ ಶೇ.50 ರಷ್ಟು ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಆಫ್ ಲೈನ್ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಲಾಗಿತ್ತು, ಪರ್ಯಾಯ ದಿನಗಳಲ್ಲಿ ವಿದ್ಯಾರ್ಥಿಗಳು ಆಫ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರು. ಆದರೆ ಅ.1 ರಿಂದ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆಫ್ ಲೈನ್ ಆಗಿವೆ.

ಈ ನಡುವೆ ಬಿಎಂಟಿಸಿ ಬಸ್ ಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಣೆ ಮಾಡುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುತ್ತಿದೆ ಸಂಸ್ಥೆ. 

ಹೆಚ್ಚುವರಿ ಬಸ್ ಗಳನ್ನು ನಿಯೋಜನೆ ಮಾಡುವುದಕ್ಕೂ ಮುನ್ನ ಬೇಡಿಕೆಯ ಅನುಗುಣವಾಗಿ ಕಾದು ನೋಡುವ ಆಯ್ಕೆಯ ಮೊರೆ ಹೋಗಿದೆ ಬಿಎಂಟಿಸಿ.

ಕೊರೋನಾ ಸಾಂಕ್ರಾಮಿಕ ಎದುರಾಗುವುದಕ್ಕೂ ಮುನ್ನ 5,200 ಎ.ಸಿಯೇತರ ಬಸ್ ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದವು. ಈಗ 4,800 ಬಸ್ ಗಳು ರಸ್ತೆಗಿಳಿದಿವೆ. 750 ವೋಲ್ವೋ ಬಸ್ ಗಳ ಪೈಕಿ ಈಗ ಕಾರ್ಯನಿರ್ವಹಣೆ ಮಾಡುತ್ತಿರುವ ಬಸ್ ಗಳ ಸಂಖ್ಯೆ 43

ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುವುದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬಿಎಂಟಿಸಿ ಎಂಡಿ ಅನ್ಬುಕುಮಾರ್, ಬೇಡಿಕೆಯನ್ನು ತಲುಪುವುದಕ್ಕೆ ತಕ್ಕಂತೆ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಹಾಗೂ ಇದೇ ವಿಷಯವಾಗಿ ಸೂಚನೆಗಳನ್ನು ನೀಡಲಾಗಿದೆ.

ಆ.23 ರಿಂದ ವಿದ್ಯಾರ್ಥಿಗಳು ಆಫ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆಈ ವರೆಗೂ ಶೇ.50 ರಷ್ಟು ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಆಫ್ ಲೈನ್ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಲಾಗಿತ್ತು, ಪರ್ಯಾಯ ದಿನಗಳಲ್ಲಿ ವಿದ್ಯಾರ್ಥಿಗಳು ಆಫ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರು. ಆದರೆ ಅ.1 ರಿಂದ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆಫ್ ಲೈನ್ ಆಗಿವೆ.  ಸಂಸ್ಥೆಯ ಪ್ರಕಾರ ಈ ವರೆಗೂ ಬಿಎಂಟಿ ಸಿ ಬಸ್ ಗಳ ಬೇಡಿಕೆಯೂ ಕಡಿಮೆ ಇತ್ತು. ಆದರೆ ಇತ್ತ ಇರುವ ಬಸ್ ಗಳಲ್ಲಿ ಶಾಲಾ ಸಮಯಗಳಲ್ಲಿ ಜನ ದಟ್ಟಣೆಯೂ ಹೆಚ್ಚಾಗತೊಡಗಿದೆ.

"ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಗಳಲ್ಲಿ ಜನದಟ್ಟಣೆ ಸಾಮಾನ್ಯ ವಿಷಯವಾಗಿದೆ" ಎನ್ನುತ್ತಾರೆ ನೆಟಿಜನ್ ಸಂದೀಪ್ ರಾವ್ 

"ಬಿಎಂಟಿಸಿ ಹೆಚ್ಚುವರಿ ಬಸ್ ಗಳನ್ನು ನಿಯೋಜನೆ ಮಾಡದೇ ಇದ್ದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಮತ್ತೋರ್ವ ನೆಟಿಜನ್ ಅಮೋಘ್ ಎ.

ಆದರೆ ಬಿಎಂಟಿಸಿ ಅಧಿಕಾರಿಗಳು ಮಾತ್ರ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಐಟಿ ಜನದಟ್ಟಣೆಯ ಮೇಲೆ ಅವಲಂಬಿತರಾಗಿದ್ದಾರೆ.

"ಐಟಿ ಮಂದಿ ಪೂರ್ಣಪ್ರಮಾಣದಲ್ಲಿ ಕಚೇರಿಗಳಿಗೆ ತೆರಳುತ್ತಿಲ್ಲ. ಆದ್ದರಿಂದ ಸದ್ಯಕ್ಕೆ ಕೊರೋನಾ ಸಾಂಕ್ರಾಮಿಕಕ್ಕೂ ಮುನ್ನ ಇದ್ದಂತೆ ಬಸ್ ಗಳ ಸಂಖ್ಯೆ ಇರುವುದಿಲ್ಲ, ಆದರೆ ಬಿಎಂಟಿಸಿ ಕ್ರಮೇಣ ಬಸ್ ಗಳ ಸಂಖ್ಯೆ ಹೆಚ್ಚಿಸುವ ಆಯ್ಕೆಯನ್ನು ಪರಿಗಣಿಸುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com