ದೆಹಲಿಯಲ್ಲಿ ಜಮೀರ್ ಅಹ್ಮದ್ ಖಾನ್: ದಾಖಲೆಗಳೊಂದಿಗೆ ಇಡಿ ಕಚೇರಿಗೆ ಹಾಜರು

ಜಾರಿ ನಿರ್ದೇಶನಾಲಯದ ಸೂಚನೆಯ ಮೆರೆಗೆ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿರುವ ಇ.ಡಿ. ಕಚೇರಿಗೆ ಹಾಜರಾಗಿದ್ದಾರೆ.
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್

ದೆಹಲಿ: ಜಾರಿ ನಿರ್ದೇಶನಾಲಯದ ಸೂಚನೆಯ ಮೆರೆಗೆ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿರುವ ಇ.ಡಿ. ಕಚೇರಿಗೆ ಹಾಜರಾಗಿದ್ದಾರೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ತಮ್ಮ ಮನೆಗಳು ಮತ್ತು ಕಚೇರಿಗಳ ಮೇಲೆ ನಡೆದಿದ್ದ ಇಡಿ ದಾಳಿಯ ಸಂಬಂಧ ದಾಖಲೆ ಸಲ್ಲಿಸಲು ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇ.ಡಿ. ಅಧಿಕಾರಿಗಳು ದೂರವಾಣಿ ಕರೆ ಮಾಡಿ ಬರುವುದಕ್ಕೆ ಹೇಳಿದ್ದರು, ಬಂದಿದ್ದೇನೆ. ಈ ಹಿಂದೆ ಹೇಳಿಕೆ ದಾಖಲಿಸಿದ್ದೆ, ಅಗತ್ಯ ದಾಖಲೆ ನೀಡಿದ್ದೆ. ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಲು ವಿಚಾರಣೆಗೆ ಬಂದಿದ್ದೇನೆ ಎಂದು ದೆಹಲಿಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಜಮೀರ್ ಆಹ್ಮದ್ ಖಾನ್ ನಿನ್ನೆ ಸಂಜೆ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ದಾಳಿಯಾದ ನಂತರ ಇ.ಡಿ ಕಚೇರಿಗೆ ಕೆಲವು ದಾಖಲೆಗಳನ್ನ ಜಮೀರ್ ಆಹ್ಮದ್ ಖಾನ್ ನೀಡಿದ್ದರು.

ಈ ವೇಳೆ ಮತ್ತಷ್ಟು ದಾಖಲೆಗಳನ್ನ ನೀಡುವಂತೆ ಇ.ಡಿ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆ ದಾಖಲೆಗಳನ್ನ ನೀಡಲು ತೆರಳಿರುವ ಶಾಸಕ ಜಮೀರ್ ಇಂದು ದೆಹಲಿಯ ಖಾನ್  ಮಾರ್ಕೆಟ್ ಬಳಿಯಿವ ಇ.ಡಿ. ಕಚೇರಿಗೆ ತೆರಳಿ ದಾಖಲೆಗಳನ್ನ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com