ಗಾಂಧಿಜಯಂತಿಯಂದು ಖಾದಿ ಬಟ್ಟೆ ಖರೀದಿಸಿದ ಸಿಎಂ ಬೊಮ್ಮಾಯಿ: ಪತ್ನಿಗೆ ಸೀರೆ, ತಮಗೆ ಜುಬ್ಬಾ ಖರೀದಿಸಿ ಮುಖ್ಯಮಂತ್ರಿ

ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನ ಪಕ್ಕದಲ್ಲಿ ಖಾದಿ ಎಂಪೋರಿಯಂ ಉದ್ಘಾಟಿಸಿ ಸೀರೆ ಖರೀದಿ ಮಾಡಿದರು. ಮಳಿಗೆಯಲ್ಲಿ ಮೂರು ಸೀರೆ ನೋಡಿ ಕೊನೆಗೆ ಒಂದು ಖಾದಿ ಸೀರೆಯನ್ನು ಸಿಎಂ ಬೊಮ್ಮಾಯಿ ಆರಿಸಿಕೊಂಡರು.
ಮಳಿಗೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಮಳಿಗೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನ ಪಕ್ಕದಲ್ಲಿ ಖಾದಿ ಎಂಪೋರಿಯಂ ಉದ್ಘಾಟಿಸಿ ಸೀರೆ ಖರೀದಿ ಮಾಡಿದರು. ಮಳಿಗೆಯಲ್ಲಿ ಮೂರು ಸೀರೆ ನೋಡಿ ಕೊನೆಗೆ ಒಂದು ಖಾದಿ ಸೀರೆಯನ್ನು ಸಿಎಂ ಬೊಮ್ಮಾಯಿ ಆರಿಸಿಕೊಂಡರು.

ಅವರ ಜೊತೆ ಸಚಿವರುಗಳಾದ ಗೋವಿಂದ ಕಾರಜೋಳ, ಎಂ ಟಿ ಬಿ ನಾಗರಾಜ್ ಕೂಡ ಉಪಸ್ಥಿತರಿದ್ದರು. ಸಿಎಂ ಸೀರೆ ಖರೀದಿಸುತ್ತಿದ್ದ ವೇಳೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಕೂಡ ಆಗಮಿಸಿದರು. ಬಾರಪ್ಪಾ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದು ಸಿಎಂ ವಿಜಯೇಂದ್ರಗೆ ಹೇಳಿದರು.

ನಂತರ ಸಿಎಂ ತಮಗಾಗಿ ಖಾದಿ ಜುಬ್ಬಾವನ್ನು ಕೂಡ ಖರೀದಿಸಿದರು. ಒಟ್ಟು 16 ಸಾವಿರದ 031 ರೂಪಾಯಿಯ ಬಟ್ಟೆಯನ್ನು ಸಿಎಂ ಖರೀದಿ ಮಾಡಿದರು. ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ನಾವು ಸಾಧ್ಯವಾದಷ್ಟು ಸ್ಥಳೀಯತೆಗೆ ಆದ್ಯತೆ ನೀಡೋಣ, ಈ ಮೂಲಕ ಆತ್ಮನಿರ್ಭರತೆಗೆ ಒತ್ತು ನೀಡೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com