ಚಕ್ರತೀರ್ಥರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದು ಖಂಡನೀಯ- ಕಾಂಗ್ರೆಸ್ 

ರೋಹಿತ್ ಚಕ್ರತೀರ್ಥ ಅವರನ್ನು  ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಾಡಿರುವುದನ್ನು ವಿರೋಧಿಸಿ ಆರಂಭವಾಗಿರುವ ಟ್ವಿಟ್ಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ರೋಹಿತ್ ಚಕ್ರತೀರ್ಥ
ರೋಹಿತ್ ಚಕ್ರತೀರ್ಥ

ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರನ್ನು  ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಮಾಡಿರುವುದನ್ನು ವಿರೋಧಿಸಿ ಆರಂಭವಾಗಿರುವ ಟ್ವಿಟ್ಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಕನ್ನಡ ನಾಡು, ನುಡಿಯ ಬಗ್ಗೆ ಸದಾ ವಿಕೃತ ಅವಹೇಳನ ಮಾಡುತ್ತಿದ್ದ ಹಾಗೂ ನಾಡಗೀತೆಯನ್ನು ವಿಲಕ್ಷಣವಾಗಿ ತಿರುಚಿ ಅವಮಾನಿಸಿದ್ದ ವ್ಯಕ್ತಿಯನ್ನು ಸರ್ಕಾರ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದು ಖಂಡನೀಯ ಎಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೂಡಲೇ ಆ ವಿಕೃತ ವ್ಯಕ್ತಿಯನ್ನು ಓಡಿಸಿ, ಅರ್ಹರನ್ನು ಕೂರಿಸುವಂತೆ ಒತ್ತಾಯಿಸಲಾಗಿದೆ. ಚಕ್ರತೀರ್ಥರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ನಡೆಯುತ್ತಿರುವ ಟ್ವೀಟರ್ ಅಭಿಯಾನಕ್ಕೆ ನನ್ನ ಬೆಂಬಲವಿದೆ ಎಂದು ಕೆಪಿಸಿಸಿ ವಕ್ತಾರೆ ಲಾವಣ್ಯ ಬಳ್ಳಾಲ್ ತಿಳಿಸಿದ್ದಾರೆ.

#SackRohithChakrathirtha #ನಾಡದ್ರೋಹಿ_ಚಕ್ರತೀರ್ಥನನ್ನ_ಕೆಳಗಿಳಿಸಿ ಹ್ಯಾಸ್ ಟ್ಯಾಗ್ ಬಳಸಿ ಟ್ವಿಟರ್ ಅಭಿಯಾನ ನಡೆಸಲಾಗುತ್ತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com