ಹಾಸನ: ಶಾಸಕ ಎಂ.ಪಿ.ಕುಮಾರಸ್ವಾಮಿ ಕಾರು ಡಿಕ್ಕಿ; ಮಹಿಳೆ ಸಾವು
ಮೂಡಿಗೆರೆ ಶಾಸಕರ ಕಾರು ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಬೇಲೂರು ಪಟ್ಟಣದ ಹನುಮಂತನಗರದ ಬಳಿ ಇಂದು ನಡೆದಿದೆ.
Published: 03rd October 2021 11:56 PM | Last Updated: 03rd October 2021 11:57 PM | A+A A-

ಮಹಿಳೆಯನ್ನು ಬಲಿ ತೆಗೆದುಕೊಂಡ ಶಾಸಕ ಎಂ.ಪಿ. ಕುಮಾರಸ್ವಾಮಿ ಕಾರು
ಹಾಸನ: ಮೂಡಿಗೆರೆ ಶಾಸಕರ ಕಾರು ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಬೇಲೂರು ಪಟ್ಟಣದ ಹನುಮಂತನಗರದ ಬಳಿ ಇಂದು ನಡೆದಿದೆ.
ಸಾವನ್ನಪ್ಪಿದವರು ಹನುಮಂತನಗರದ ನಿವಾಸಿ ಹೂವಮ್ಮ (58) ಎಂದು ಗುರುತಿಸಲಾಗಿದೆ. ಇವರ ಪುತ್ರ ತೀವ್ರ ಗಾಯಗೊಂಡಿದ್ದು ಆಸ್ಪ್ರತೆಗೆ ದಾಖಲು ಮಾಡಲಾಗಿದೆ. ಈ ದುರ್ಘಟನೆ ವೇಳೆ ಕಾರಿನಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರಯಾಣಿಸುತ್ತಿರಲಿಲ್ಲ ಎನ್ನಲಾಗಿದೆ.
ಬೈಕ್ ಸವಾರ ಅನಿರೀಕ್ಷಿತವಾಗಿ ಪಕ್ಕಕ್ಕೆ ಬಂದಿದ್ದರಿಂದ ಅಪಘಾತ ಸಂಭವಿಸಿತು ಎಂದು ಚಾಲಕ ಪ್ರವೀಣ್ ಹೇಳಿದ್ದಾನೆ. ಚಾಲಕ ಪ್ರವೀಣ್ ನಿರ್ಲಕ್ಷ್ಯ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ. ಘಟನೆ ವೇಳೆ ಚಾಲಕ ಮದ್ಯಪಾನ ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.