ಬೆಳಗಾವಿ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಕೊನೆಗೂ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಲು ಮನಸು ತೋರಿದ್ದು ಇದೇ ಡಿಸೆಂಬರ್‌ನಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ನಡೆಯಲಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಲು ಮನಸು ತೋರಿದ್ದು ಇದೇ ಡಿಸೆಂಬರ್‌ನಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ನಡೆಯಲಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿ, ಡಿಸೆಂಬರ್ ತಿಂಗಳಿನಲ್ಲಿ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರದಿಂದಲೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ ಇದೆ ಎಂದರು.

ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಭಾವನೆಗಳನ್ನು ಸದನದಲ್ಲಿ ಶಾಸಕರು ವ್ಯಕ್ತಪಡಿಸಬೇಕೆಂದು ಚುನಾಯಿಸಿ ಕಳುಹಿಸಿದ್ದಾರೆ. ಕಾಂಗ್ರೆಸ್‌ನವರು ಮುಕ್ತವಾಗಿ ಎಲ್ಲ ಅವಕಾಶ ಬಳಸಿಕೊಂಡಿದ್ದಾರೆ. ಒಂದು ಬಾರಿಯೂ ಕೂಡ ಸದನವನ್ನು ಐದುಹತ್ತು ನಿಮಿಷ ಮುಂದೂಡುವ ಪ್ರಸಂಗ ಬರಲಿಲ್ಲ. ಸದನದ ಸಮಯ ವ್ಯರ್ಥವಾಗುವುದಕ್ಕೆ ಯಾವ ಸದಸ್ಯರೂ ಬಿಡಲಿಲ್ಲ. ಇದು ಬಹಳ ಒಳ್ಳೆಯ ಬೆಳವಣಿಗೆ. ಇಂತಹ ಬೆಳವಣಿಗೆ ಸಭಾಧ್ಯಕ್ಷನಾಗಿರುವುದಕ್ಕೆ ಸಂತೋಷವಾಗಿದೆ ಎಂದು ಸ್ಪೀಕರ್ ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸಂಸತ್ ಸಭಾಧ್ಯಕ್ಷ ಓಂ ಬಿರ್ಲಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸದೇ ಗೈರಾದರು. ಅವರು ಭಾಗವಹಿಸಿದ್ದರೆ ಇನ್ನೂ ಚನ್ನಾಗಿರುತ್ತಿತ್ತು. ಯಡಿಯೂರಪ್ಪರಿಗೆ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿದ್ದು ಕೂಡ ವಿಶೇಷ. ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ವಿಷಯದ ಕುರಿತು ಓ‌ಂ ಬಿರ್ಲಾ ಆಹ್ವಾನ ಮಾಡಿದ್ದು ಕರ್ನಾಟಕದ ವಿಧಾನಸಭಾ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಸಂಸದೀಯ ವ್ಯವಸ್ಥೆ ಬಗ್ಗೆ ಕಾಲಕಾಲಕ್ಕೆ ಸಿಂಹಾವಲೋಕನ ಮಾಡಬೇಕು ದೋಷಗಳು ದೌರ್ಬಲ್ಯ ಗಳು ಸಮಾಜದಲ್ಲಿ ಯಾವ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ನೋಡುತ್ತಿರುತ್ತೇವೆ. ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕಾಗಿದ್ದು ನಮ್ಮ ಜವಾಬ್ದಾರಿ.

ಅಧಿವೇಶನ ಸೆ.13 ರಿಂದ 24ರವರೆಗೆ ಬಹಳ ಚೆನ್ನಾಗಿ ನಡೆಯಿತು. ನಾನು ಅಧಿವೇಶನ ಚನ್ನಾಗಿ ನಡೆಯಲು ಸಹಕರಿಸಿದ ಸದನದ ಎಲ್ಲ ಗೌರವಾನ್ವಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಕಡೆಯೂ ಶ್ಲಾಘನೆಗೆ ಒಳಪಟ್ಟಿತ್ತು. ಕಲಾಪದ ಗುಣಮಟ್ಟ, ಹಾಜರಾತಿ, ಚರ್ಚೆ ಈ ಬಾರಿ ಅತ್ಯುತ್ತಮವಾಗಿತ್ತು. 10 ದಿನಗಳ ಅಧಿವೇಶನದಲ್ಲಿ ವರದಿ ಮಂಡಿಸಿದ್ದೇನೆ. 150 ಪ್ರಶ್ನೆಗಳಲ್ಲಿ 146 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ವಿಶೇಷವಾಗಿ ಈ ಬಾರಿ 19 ವಿಧೇಯಕ ಅಂಗೀಕರಿಸಿದ್ದೇವೆ. ಬಿಲ್ ಬಗ್ಗೆಯೂ ಪರ ವಿರೋಧದ ಅಭಿಪ್ರಾಯ ಇದ್ದೇ ಇತ್ತು. ಸರ್ಕಾರ ಸದನವನ್ನು ಗಂಭೀರವಾಗಿ ತೆಗೆದುಕೊಂಡಿದ್ದಕ್ಕೆ ಸಚಿವರೆಲ್ಲರೂ ಉಪಸ್ಥಿತರಿದ್ದರು. ಸದಸ್ಯರ ಎಲ್ಲ ಮಾತುಗಳಿಗೂ ಸರ್ಕಾರ ಸ್ಪಂದಿಸುವ ಕೆಲಸ ಮಾಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com