ಬೆಂಗಳೂರಿನ 70 ಕಂಟೈನ್‌ಮೆಂಟ್ ಜೋನ್ ಗಳಲ್ಲಿ ತಲಾ 10 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣ

ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್ ಜೋನ್ ಗಳಲ್ಲಿ 1,336 ಕ್ಕಿಂತ ಹೆಚ್ಚು ಕುಟುಂಬಗಳಿವೆ ಮತ್ತು ಕನಿಷ್ಠ 70 ಸಕ್ರಿಯ ಕಂಟೈನ್‌ಮೆಂಟ್ ಜೋನ್ ಗಳಿವೆ. ಆದಾಗ್ಯೂ, ಈ ಯಾವುದೇ ಜೋನ್ ಗಳಲ್ಲಿ 10 ಕ್ಕಿಂತ ಹೆಚ್ಚು ಪ್ರಕರಣಗಳಿಲ್ಲ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್ ಜೋನ್ ಗಳಲ್ಲಿ 1,336 ಕ್ಕಿಂತ ಹೆಚ್ಚು ಕುಟುಂಬಗಳಿವೆ ಮತ್ತು ಕನಿಷ್ಠ 70 ಸಕ್ರಿಯ ಕಂಟೈನ್‌ಮೆಂಟ್ ಜೋನ್ ಗಳಿವೆ. ಆದಾಗ್ಯೂ, ಈ ಯಾವುದೇ ಜೋನ್ ಗಳಲ್ಲಿ 10 ಕ್ಕಿಂತ ಹೆಚ್ಚು ಪ್ರಕರಣಗಳಿಲ್ಲ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

100-ಮೀಟರ್ ವ್ಯಾಪ್ತಿಯಲ್ಲಿ ಮೂರು ಕೋವಿಡ್ ಸಕ್ರಿಯ ಪ್ರಕರಣಗಳಿದ್ದರೆ ಅದನ್ನು ಕಂಟೈನ್ಮೆಂಟ್ ಜೋನ್ ಎಂದು ಗೊತ್ತುಪಡಿಸಲಾಗುತ್ತದೆ.

ಬಿಬಿಎಂಪಿ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 2ರ ವೇಳೆಗೆ, ನಗರದ ಕಂಟೈನ್ ಮೆಂಟ್ ಗಳಲ್ಲಿ ಒಟ್ಟು 258 ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ 29 ಅಪಾರ್ಟ್‌ಮೆಂಟ್‌ಗಳು, 35 ವ್ಯಕ್ತಿಗಳು ಮತ್ತು ನಾಲ್ಕು ಹಾಸ್ಟೆಲ್‌ಗಳು ಅಥವಾ ಪಿಜಿಗಳು ಸೇರಿವೆ. ಆದರೆ ಯಾವುದೇ ಶಾಲೆ ಮತ್ತು ಕಾಲೇಜುಗಳು ಕಂಟೈನ್‌ಮೆಂಟ್ ವಲಯದಲ್ಲಿಲ್ಲ. ಕಂಟೈನ್‌ಮೆಂಟ್ ಜೋನ್ ಗಳು 14 ದಿನಗಳವರೆಗೆ ಸಕ್ರಿಯವಾಗಿರುತ್ತವೆ.

ಬೊಮ್ಮನಹಳ್ಳಿಯಲ್ಲಿ ಗರಿಷ್ಠ ಅಂದರೆ 16 ಸಕ್ರಿಯ ಕಂಟೈನ್‌ಮೆಂಟ್ ವಲಯಗಳಿದ್ದು, ನಂತರ ದಕ್ಷಿಣ ವಲಯದಲ್ಲಿ 13 ಮತ್ತು ಪೂರ್ವ ವಲಯದಲ್ಲಿ 12 ಕಂಟೈನ್ ಮೆಂಟ್ ಜೋನ್ ಇವೆ. 

ಮಹದೇವಪುರದಲ್ಲಿ 10, ಯಲಹಂಕದಲ್ಲಿ ಒಂಬತ್ತು, ರಾಜರಾಜೇಶ್ವರಿ ನಗರದಲ್ಲಿ ಎರಡು ಮತ್ತು ದಾಸರಹಳ್ಳಿಯಲ್ಲಿ ಒಂದು ಕಂಟೈನ್ ಮೆಂಟ್ ಜೋನ್ ಇದೆ.

ಬೊಮ್ಮನಹಳ್ಳಿಯ 16 ಕಂಟೈನ್ ಮೆಂಟ್ ಜೋನ್ ಗಳಲ್ಲಿ 61 ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ 781 ಮನೆಗಳಿವೆ. ಹೆಚ್ಚಿನ ಕಂಟೈನ್ ಮೆಂಟ್ ಜೋನ್ ಗಳು ಅಪಾರ್ಟ್‌ಮೆಂಟ್‌ಗಳಾಗಿದ್ದು, ಕನಿಷ್ಠ ಎಂಟು ಅಪಾರ್ಟ್‌ಮೆಂಟ್ ಬ್ಲಾಕ್‌ಗಳನ್ನು ಕಂಟೈನ್ ಮೆಂಟ್ ಜೋನ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com