ಇನ್ಸ್ಟಾಗ್ರಾಮ್ನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದ ಆಟೋ ಚಾಲಕನಿಗೆ ಮಂಚಿನಿಂದ ಕೊಚ್ಚಿ ಪರಾರಿ: ಆರೋಪಿಗಳ ಬಂಧನ
ಇನ್ಸ್ಟಾಗ್ರಾಮ್ನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
Published: 05th October 2021 03:03 PM | Last Updated: 05th October 2021 03:03 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಪ್ರಜ್ವಲ್ ಅಲಿಯಾಸ್ ಕಪ್ಪೆ, ಕಿರಣ ಅಲಿಯಾಸ್ ವಾಲೆ, ಮನೋಜ್, ಮೂರ್ತಿ, ಸಂದೀಪ ಬಂಧಿತ ಆರೋಪಿಗಳು.
ಇದನ್ನೂ ಓದಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣ; 8 ಮಂದಿ ವಶಕ್ಕೆ ಪಡೆದ ಪೊಲೀಸರು
ಇನ್ಸ್ಟಾಗ್ರಾಮ್ನಲ್ಲಿ ಆಟೋ ಚಾಲಕ ನವೀನ್ ಎಂಬಾತ ಯುವತಿಗೆ ಮೆಸೇಜ್ ಮಾಡಿದ್ದ, ಇದೇ ವಿಚಾರಕ್ಕೆ ಯುವತಿ ಪ್ರಿಯಕರ ಪ್ರಜ್ವಲ್ ಮತ್ತು ತಂಡ, ರಾಜಿ ಮಾಡಿಕೊಳ್ಳುವ ಎಂದು ಕರೆದು, ನವೀನ್ ಹಾಗೂ ಸ್ನೇಹಿತ ಹರೀಶ್ ತಲೆ ಮತ್ತು ಹೊಟ್ಟೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದರು.
ಇದನ್ನೂ ಓದಿ: ಬೆಂಗಳೂರು: ವರದಕ್ಷಿಣೆ ವಿಚಾರವಾಗಿ ಮಾವನಿಂದ ಅಳಿಯನ ಕಗ್ಗೊಲೆ
ಘಟನೆಗೆ ಸಂಬಂಧಿಸಿದಂತೆ ಸೆ. 24 ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಯುವರಾಜ ಅಲಿಯಾಸ್ ನಾಯಿ, ದರ್ಶನ್, ಕುಮಾರ್ ತಲೆಮರೆಸಿಕೊಂಡಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.