ದತ್ತಪೀಠಕ್ಕೆ ಸರ್ಕಾರದಿಂದ ಹಿಂದೂ ಅರ್ಚಕರ ನೇಮಕ: ಸಚಿವ ಸುನೀಲ್ ಕುಮಾರ್

ದತ್ತಪೀಠಕ್ಕೆ ನಮ್ಮ ಸರ್ಕಾರ ಹಿಂದೂ ಅರ್ಚಕರನ್ನು ನೇಮಕ ಮಾಡಲಿದೆ ಎಂದು ಸಚಿವ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ. 
ದತ್ತ ಪೀಠ
ದತ್ತ ಪೀಠ

ಚಿಕ್ಕಮಗಳೂರು: ದತ್ತಪೀಠಕ್ಕೆ ನಮ್ಮ ಸರ್ಕಾರ ಹಿಂದೂ ಅರ್ಚಕರನ್ನು ನೇಮಕ ಮಾಡಲಿದೆ ಎಂದು ಸಚಿವ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ. 

ದತ್ತಪೀಠಕ್ಕೆ ಭೇಟಿ ಕೊಟ್ಟ ಬಳಿಕ ಪ್ರತಿಕ್ರಿಯಿಸಿದ ಅವರು, ದತ್ತಪೀಠದ ಹೋರಾಟದ ಮೂಲಕವೇ ನಾನು ಗುರುತಿಸಿಕೊಂಡಿದ್ದೇನೆ. ಹೈಕೋರ್ಟ್ ಹಿಂದೂಗಳ ಭಾವನೆಗಳಿಗೆ ಪರವಾದ ತೀರ್ಪನ್ನು ಕೊಟ್ಟಿದೆ. ನಾನು ಮಂತ್ರಿಯಾದ ಸಂದರ್ಭದಲ್ಲಿ ಈ ತೀರ್ಪು ನೀಡಿರುವುದು ನನ್ನ ಜೀವನದ ಯೋಗ. ಈ ಹಿನ್ನೆಲೆಯಲ್ಲಿ ಅತ್ಯಂತ ಸಂತೋಷದಿಂದ ದತ್ತಾತ್ರೇಯನ ದರ್ಶನ ಮಾಡಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ವಿರುದ್ಧದ ನಿರ್ಣಯ ತೆಗೆದುಕೊಂಡಿತು. ಮುಜಾವರ್ ನೇಮಕ ಮಾಡಿ ಹಿಂದೂ ವಿರೋಧಿಯಾಗಿ ನಡೆದುಕೊಂಡಿತು. ಈಗ ನ್ಯಾಯಾಲಯ ನಮ್ಮ ಪರವಾದ ತೀರ್ಪನ್ನು ನೀಡಿದೆ.

ದತ್ತಪೀಠದಲ್ಲಿ ಮುಜಾವರ್ ಪೂಜೆ ಮಾಡೋದಲ್ಲ, ಹಿಂದೂ ಅರ್ಚಕರು ಪೂಜೆ ಮಾಡಬೇಕೆಂದು ಕೋರ್ಟ್ ಹೇಳಿದೆ. ಹಿಂದೂಗಳ ಭಾವನೆಗಳ ಪರವಾಗಿ ನಮ್ಮ ಸರ್ಕಾರ ನಿಲ್ಲುತ್ತದೆ ಎಂದು ತಿಳಿಸಿದರು.

ದತ್ತಾತ್ರೇಯ ಪೀಠ ಬೇರೆ, ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗಾ ಬೇರೆ. ಈ ವಿಚಾರ ದಾಖಲೆಗಳಲ್ಲಿ ಸಾಬೀತಾಗಿದೆ. ಅಲ್ಪಸಂಖ್ಯಾತ ಸಮುದಾಯದ ಜನರು ಹೈಕೋರ್ಟ್ ಆದೇಶವನ್ನು ಗೌರವಿಸಬೇಕು ಮತ್ತು ತಮ್ಮ ಆಚರಣೆಗಳನ್ನು ನಾಗೇನಹಳ್ಳಿಗೆ ಬದಲಾಯಿಸಬೇಕು, ದತ್ತಪೀಠದಲ್ಲಿ ಹಿಂದುಗಳ ಮೂಲಕವೇ ಪೂಜೆಯಾಗಬೇಕು ಎಂಬ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಮುಸಲ್ಮಾನರು ಕಣ್ಣು ತೆರೆದು ನೋಡಬೇಕು. ನಿಮ್ಮ ನಾಗೇನಹಳ್ಳಿಯ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com